ಮಂಗಳವಾರ, ಅಕ್ಟೋಬರ್ 15, 2019
29 °C
vachakara vane

ಹೊಸ ಜಿಲ್ಲೆ ರಚನೆ: ರಾಜಕೀಯ ಪ್ರವೇಶಿಸದಿರಲಿ

Published:
Updated:

ರಾಜ್ಯ ಸರ್ಕಾರವು ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆಯ ಸುಳಿವು ನೀಡುತ್ತಿದ್ದಂತೆ, ಹೊಸ ಜಿಲ್ಲೆಗಳ ರಚನೆಯ ಬೇಡಿಕೆ ಮುನ್ನೆಲೆಗೆ ಬಂದಿದೆ.

ಆಡಳಿತಾತ್ಮಕ ದೃಷ್ಟಿಯಿಂದ, ಭೌಗೋಳಿಕವಾಗಿ ವಿಸ್ತಾರವಾದ ಉತ್ತರ ಕನ್ನಡ, ಬೆಳಗಾವಿ ಮತ್ತು ಇನ್ನಿತರ ಕೆಲವು ಜಿಲ್ಲೆಗಳನ್ನೂ ವಿಭಜಿಸಿ ಹೊಸ ಜಿಲ್ಲೆಗಳನ್ನು ರಚಿಸುವ ಅನಿವಾರ್ಯ ಇದೆ.

ಈ ದೃಷ್ಟಿಯಲ್ಲಿ ರಾಜಕೀಯ ಪ್ರವೇಶಿಸದಂತೆ ನೋಡಿಕೊಳ್ಳಬೇಕು. ವಿಜಯನಗರ ಜಿಲ್ಲೆ ರಚನೆಯ ಹಿಂದಿನ ಉದ್ದೇಶ ಅರ್ಥಪೂರ್ಣವಾಗಿದ್ದರೂ, ಅದನ್ನು ಕಾರ್ಯರೂಪಕ್ಕೆ ತರಲು ಹೊರಟಿರುವ ಸಮಯ ಸಂದೇಹಕ್ಕೆ ಎಡೆಮಾಡಿಕೊಡುವಂತಿದೆ.

- ರಮಾನಂದ ಶರ್ಮಾ, ಬೆಂಗಳೂರು

Post Comments (+)