ಮಿತವ್ಯಯದ ಮಾತು: ಗೂಳಿಗೂ ಅಪಥ್ಯ

‘ಫ್ರಾನ್ಸ್ ಸೀನಿದರೆ ಇಡೀ ಯುರೋಪ್ಗೆ ಚಳಿ ಹಿಡಿಯುತ್ತದೆ’ ಎನ್ನುವುದು ಪ್ರಸಿದ್ಧ ನಾಣ್ಣುಡಿ. ಈ ಮಾತು ಭಾರತದ ಷೇರು ಮಾರುಕಟ್ಟೆಗಳಿಗೂ ಅನ್ವಯಿಸುತ್ತದೆ.
ಅಮೆರಿಕದ ಅಧ್ಯಕ್ಷರು ಕೋಪಗೊಂಡರೆ ಷೇರುಪೇಟೆ ಕುಸಿಯುತ್ತದೆ; ಸಂತೋಷ
ದಿಂದ ಕುಣಿದಾಡಿದರೆ ಗೂಳಿ ಓಡತೊಡಗುತ್ತದೆ. ಪ್ರಧಾನಿ ಮೋದಿಯವರ ಮಿತವ್ಯಯದ ಬುದ್ಧಿಮಾತಿನಿಂದಲೂ ಹೂಡಿಕೆದಾರರ ಕೋಟ್ಯಂತರ ರೂಪಾಯಿ ಕರಗಿ ಹೋಗಿದೆ. ‘ಉಳಿಸಿ, ಬೆಳಸಿ, ಮಿತವಾಗಿ ಬಳಸಿ’ ಎನ್ನುವುದು ಜೀವನದ ಅನುದಿನದ ನಿಯಮವಾಗಬೇಕೆ ಹೊರತು ಯಾವುದೋ ವಿಶೇಷ ಸಂದರ್ಭಕ್ಕಷ್ಟೆ ಪಾಲಿಸಬೇಕಾದ ನಿಯಮವಲ್ಲ. ಕೆಲವರು ಸೀನಿದರೆ, ಕೆಮ್ಮಿದರೆ ಬಿದ್ದು ಹೋಗುವ ಮಾರುಕಟ್ಟೆಯಲ್ಲಿ ಅರಿತು ಹೂಡಿಕೆ ಮಾಡಬೇಕು ಎನ್ನುವ ಹೂಡಿಕೆ ತಜ್ಞರ ಮಾತು ಎಷ್ಟೋ ಸಂದರ್ಭಗಳಲ್ಲಿ ನಗೆಪಾಟಲಿಗೆ ತುತ್ತಾಗುತ್ತದೆ. ‘ದೀರ್ಘಾವಧಿಯಲ್ಲಿ ನಾವೆಲ್ಲರೂ ಸತ್ತಿರುತ್ತೇವೆ’ ಎಂಬ ಬ್ರಿಟಿಷ್ ಆರ್ಥಿಕ ತಜ್ಞ ಜಾನ್ ಮೆನಾರ್ಡ್ ಕೇನ್ಸ್ನ ಮಾತುಗಳನ್ನು ಎಲ್ಲರೂ ನೆನಪಿಡಬೇಕು.

⇒ಜಗದೀಶ್ ಎಚ್.ಬಿ., ಹುಬ್ಬಳ್ಳಿ

ನೀಟ್ ವೈಫಲ್ಯ: ಪ್ರಧಾನಿಯ ಮೌನವೇಕೆ?

‘ನೀಟ್’ ಅಕ್ರಮ ತಡೆಯುವಲ್ಲಿ ಕೇಂದ್ರ ಸರ್ಕಾರ ಸೂಕ್ತ ಮುನ್ನೆಚ್ಚರಿಕಾ ಕ್ರಮ
ಕೈಗೊಳ್ಳುವಲ್ಲಿ ಪದೇ ಪದೇ ವೈಫಲ್ಯ ಅನುಭವಿಸುತ್ತಿದೆ. ಇದು ದೇಶದ ಯುವ
ಜನರಿಗೆ ಮಾಡುತ್ತಿರುವ ಅನ್ಯಾಯ. 2017ರಿಂದಲೂ ಸತತವಾಗಿ ಒಂದಿಲ್ಲೊಂದು ವಿವಾದವು ಈ ಪರೀಕ್ಷೆಗೆ ಸುತ್ತಿಕೊಳ್ಳುತ್ತಿದೆ. ಹೀಗಿದ್ದರೂ ನಿರ್ಲಕ್ಷ್ಯ ಧೋರಣೆ ಸರಿಯಿಲ್ಲ. ಹಳೆಯ ಪ್ರಕರಣಗಳ ಸೂಕ್ತ ತನಿಖೆ ಆಗದಿರುವಿಕೆ, ಭದ್ರತಾಲೋಪಕ್ಕೆ
ಕೇಂದ್ರವೇ ನೇರ ಹೊಣೆ. ಇಷ್ಟೆಲ್ಲಾ ಆದರೂ ಕೇಂದ್ರ ಶಿಕ್ಷಣ ಸಚಿವರು ವಿದ್ಯಾರ್ಥಿ
ಗಳಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ. ರಾಜೀನಾಮೆ ನೀಡುವ ನೈತಿಕತೆಯನ್ನೂ ಪ್ರದರ್ಶಿಸಿಲ್ಲ. ಇತ್ತ ಪರೀಕ್ಷಾ ಅಕ್ರಮದ ಕುರಿತು ಪ್ರಧಾನಿಯವರು ಮೌನ ತಾಳಿದ್ದಾರೆ. ಇವೆಲ್ಲ ನೋಡಿದರೆ ಪ್ರಧಾನಿ ಅವರಿಗೆ ಚುನಾವಣೆ ಮೇಲಿರುವ ಆಸಕ್ತಿ, ಇಂತಹ ವಿಷಯಗಳ ಮೇಲೆ ಇದ್ದಂತಿಲ್ಲ.

⇒ಸುರೇಂದ್ರ ಪೈ, ಭಟ್ಕಳ

ಬಂಜಾರರ ನಿರ್ಧಾರ ಸ್ಫೂರ್ತಿದಾಯಕ

‘ವರದಕ್ಷಿಣೆ ವಿರೋಧ: ಬಂಜಾರ ಮಾದರಿ!’ ಲೇಖನ (ಲೇ: ವಿಜಯಲಕ್ಷ್ಮಿ,
ಪ್ರ.ವಾ., ಮೇ 13) ಸಕಾಲಿಕವಾಗಿದೆ. 17 ಬಂಜಾರ ತಾಂಡಾಗಳು ಒಗ್ಗೂಡಿ
ವರದಕ್ಷಿಣೆ ವಿರುದ್ಧ ತೆಗೆದುಕೊಂಡಿರುವ ನಿರ್ಧಾರ ಇಡೀ ರಾಜ್ಯಕ್ಕೆ ಸ್ಫೂರ್ತಿ
ದಾಯಕ. ‘ಹೆಣ್ಣು ಸಮಾಜದ ಕಣ್ಣು’ ಎಂಬ ಮಾತು ಭಾಷಣಕ್ಕೆ ಸೀಮಿತವಾಗದೆ ವಾಸ್ತವ ಆಗಬೇಕಾದರೆ, ಹೆಣ್ಣುಮಕ್ಕಳ ಆಸೆ–ಆಕಾಂಕ್ಷೆಗಳನ್ನು ಬಲಿ ಪಡೆಯುತ್ತಿರುವ ವರದಕ್ಷಿಣೆಯನ್ನು ಬೇರುಸಹಿತ ಕಿತ್ತೊಗೆಯಬೇಕಿದೆ. ಇದರ ನಿರ್ಮೂಲನೆಗಾಗಿ ಯುವಕ ಮತ್ತು ಯುವತಿಯರು ಎಚ್ಚೆತ್ತುಕೊಳ್ಳಬೇಕು.

⇒ಮೌನೇಶ್ ಚವಾಣ್, ರಾಯಚೂರು

ಮುಸ್ಲಿಂ ಮತಬ್ಯಾಂಕ್ ಉಳಿವಿಗೆ ಸರ್ಕಸ್

ಶಾಲಾ–ಕಾಲೇಜುಗಳಲ್ಲಿ ಹಿಜಾಬ್ ನಿಷೇಧ ಆದೇಶವನ್ನು ರಾಜ್ಯ ಸರ್ಕಾರ ರದ್ದು
ಪಡಿಸಿದೆ. ಕಾಂಗ್ರೆಸ್ಗೆ ಈಗ ಮುಸ್ಲಿಮರ ನೋವುಗಳು ಅರ್ಥವಾಗುತ್ತಿವೆ ಎನಿಸು
ತ್ತಿದೆ. ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಕೈಪಾಳಯದ ಲೆಕ್ಕಾಚಾರ ಮೀರಿ ಎಸ್ಡಿಪಿಐಗೆ ಹೆಚ್ಚು ಮತ ಬಿದ್ದಿವೆ. ಹಾಗಾಗಿ, ಪಕ್ಷದ ವೋಟ್ಬ್ಯಾಂಕ್ ಉಳಿಸಿಕೊಳ್ಳುವ ನಿರ್ಧಾರ ಇದರ ಹಿಂದೆ ಇದ್ದಂತಿದೆ. ಹಾಗಾಗಿಯೇ, ಮೂರು ವರ್ಷಗಳ ಹಿಂದಿನ ಹಿಜಾಬ್ ವಿವಾದಕ್ಕೆ ತೆರೆ ಎಳೆದು ನಾವು ಮುಸ್ಲಿಂ ಹಿತೈಷಿಗಳು ಎಂದು ತೋರಿಸಿಕೊಳ್ಳಲು ಕಾಂಗ್ರೆಸ್ ಹೊರಟಿದೆ. ಇದು ಇಷ್ಟಕ್ಕೆ ಸೀಮಿತಗೊಂಡರೆ ಸಾಕೆ? ಮುಸ್ಲಿಂ ಸಮುದಾಯ ಶಿಕ್ಷಣ ಹಾಗೂ ಉದ್ಯೋಗದಲ್ಲಿ ಹಿಂದುಳಿದಿದೆ. ಸಮುದಾಯದ ಅಶಕ್ತರಿಗೆ ಆರ್ಥಿಕ ನೆರವು ನೀಡುವ ಬಗ್ಗೆಯೂ ಸರ್ಕಾರ ಕಾಳಜಿ ತೋರಲಿ.

⇒ಹುಸೇನಬಾಷಾ ತಳೇವಾಡ, ಹುಬ್ಬಳ್ಳಿ

ಸಮವಸ್ತ್ರ ರಾಜಕೀಯ; ಮಕ್ಕಳು ಪರಕೀಯ

ಶಿಕ್ಷಣದಲ್ಲಿ ಶಿಸ್ತು ಅತಿಮುಖ್ಯ. ಸಮವಸ್ತ್ರವು ಅದರ ಭಾಗ. ಸಮವಸ್ತ್ರ ವಿಚಾರದಲ್ಲಿ ಎಸ್ಡಿಎಂಸಿ ಹಾಗೂ ಆಡಳಿತ ಮಂಡಳಿಗಳಿಗೆ ಸ್ವಾತಂತ್ರ್ಯ ನೀಡುವುದು ಸೂಕ್ತ. ಅದರಲ್ಲಿ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ. ಒಂದು ಸರ್ಕಾರ ಬಂದಾಗ ಒಂದು ನೀತಿ, ಮತ್ತೊಂದು ಸರ್ಕಾರ ಬಂದಾಗ ಮತ್ತೊಂದು ನೀತಿ ತರುವುದು ಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರಲಿದೆ. ಶಿಕ್ಷಣ ತಜ್ಞರ ಸಮಿತಿ ನೇಮಿಸಿ ಚರ್ಚಿ
ಸಿದ ಬಳಿಕ ಸಮವಸ್ತ್ರ ನೀತಿ ಜಾರಿಗೊಳಿಸಲಿ. ಮಕ್ಕಳಲ್ಲಿ ನಾಡು, ದೇಶದ ಬಗ್ಗೆ ಅಭಿಮಾನ ಮೂಡುವಂತಹ ವಾತಾವರಣ ಸೃಷ್ಟಿಸಬೇಕು. ಜಾತ್ಯತೀತ ಹಾಗೂ ವೈಚಾರಿಕತೆ ಬಿತ್ತುವುದು ಸರ್ಕಾರದ ಗುರಿಯಾಗಲಿ. ಆ ಗುರಿ ಪ್ರಾಥಮಿಕ ಶಿಕ್ಷಣದಿಂದಲೇ ಆರಂಭವಾಗಲಿ.

⇒ಸಿ. ಸಿದ್ದರಾಜು ಆಲಕೆರೆ, ಮಂಡ್ಯ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.