ಪರೀಕ್ಷಾ ಕೇಂದ್ರದಲ್ಲಿ ವಾಚ್‌ಗೇಕೆ ನಿರ್ಬಂಧ?

7

ಪರೀಕ್ಷಾ ಕೇಂದ್ರದಲ್ಲಿ ವಾಚ್‌ಗೇಕೆ ನಿರ್ಬಂಧ?

Published:
Updated:

ಇದೇ ಮಾರ್ಚ್‌ನಲ್ಲಿ ನಡೆಯಲಿರುವ ಪಿಯುಸಿ ಪರೀಕ್ಷೆಗೆ ವಿದ್ಯಾರ್ಥಿಗಳು ಕೈಗಡಿಯಾರ ಧರಿಸಿಕೊಂಡು ಹೋಗುವಂತಿಲ್ಲ ಎಂದು ಹಲವು ಕಾಲೇಜುಗಳಲ್ಲಿ ನಿರ್ದೇಶನ ನೀಡಲಾಗುತ್ತಿದೆ. ಪರೀಕ್ಷಾ ಕೇಂದ್ರಗಳಿಗೆ ಸ್ಮಾರ್ಟ್ ವಾಚ್‍ಗಳನ್ನು ನಿಷೇಧಿಸುವುದು ಸರಿಯಾದ ಕ್ರಮ. ಆದರೆ, ಮಾಮೂಲಿ ಕೈಗಡಿಯಾರಗಳನ್ನೂ ಧರಿಸಿಕೊಂಡು ಹೋಗಬಾರದು ಎನ್ನುವ ನಿಯಮವನ್ನು ಖಂಡಿತಾ ಒಪ್ಪಲು ಸಾಧ್ಯವಿಲ್ಲ.

ಪರೀಕ್ಷಾ ಕೇಂದ್ರಗಳಲ್ಲಿ ಗೋಡೆ ಗಡಿಯಾರ ಅಳವಡಿಸಿದ್ದರೂ ದೃಷ್ಟಿದೋಷದ ಸಮಸ್ಯೆ ಇರುವವರಿಗೆ ಅದನ್ನು ನೋಡಲು ಸಮಸ್ಯೆಯಾಗುತ್ತದೆ. ಅಕಸ್ಮಾತ್ ಗೋಡೆ ಗಡಿಯಾರ ಕೆಟ್ಟು ನಿಂತಿದ್ದರೆ ಆಗ ವಿದ್ಯಾರ್ಥಿಗಳಿಗೆ ತೊಂದರೆ
ಯಾಗುತ್ತದೆ. ಕೈಗಡಿಯಾರವು ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಮುನ್ನ ಮತ್ತು ಪರೀಕ್ಷೆಯ ವೇಳೆ ಸಮಯಪಾಲನೆಗೆ ನೆರವಾಗುತ್ತದೆ. ಹಾಗಾಗಿ ಅವರ ಹಿತದೃಷ್ಟಿಯನ್ನು ಗಮನದಲ್ಲಿ ಇಟ್ಟುಕೊಂಡು, ಪರೀಕ್ಷಾ ಕೇಂದ್ರಗಳಲ್ಲಿ ಸಾಧಾರಣ ಕೈಗಡಿಯಾರ ಧರಿಸಲು ಅನುಮತಿ ನೀಡಬೇಕು.

ನರೇಂದ್ರ ಎಸ್‌. ಗಂಗೊಳ್ಳಿ, ಕುಂದಾಪುರ

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !