ಶುಕ್ರವಾರ, ಅಕ್ಟೋಬರ್ 18, 2019
20 °C

ಉತ್ತಮ ಫಲಿತಾಂಶ: ಸುಧಾರಣೆಗೆ ಮೆಟ್ಟಿಲಾಗಲಿ

Published:
Updated:

ನೀತಿ ಆಯೋಗವು ಮೊದಲ ಬಾರಿ ನಡೆಸಿದ ‘ಶಾಲಾ ಶಿಕ್ಷಣ ಗುಣಮಟ್ಟ’ದ ಸಮೀಕ್ಷೆಯಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನ ಲಭಿಸಿರುವುದು ಸಂತೋಷದಾಯಕ.

ಆದರೆ ವಾಸ್ತವದ ನೆಲೆಗಟ್ಟಿನಲ್ಲಿ ರಾಜ್ಯದ ಶೈಕ್ಷಣಿಕ ಸ್ಥಿತಿಗತಿಯನ್ನು ಪರಿಶೀಲಿಸಿದರೆ, ನಿಜವಾಗಿಯೂ ನಮ್ಮ ರಾಜ್ಯ ಶೈಕ್ಷಣಿಕವಾಗಿ ಇಷ್ಟೊಂದು ಪ್ರಗತಿ ಸಾಧಿಸಿದೆಯೇ ಎಂಬ ಅನುಮಾನ ಮೂಡುತ್ತದೆ. ಆದರೂ ಈಗ ದೊರೆತಿರುವ ಉತ್ತಮ ಸ್ಥಾನವು ನಮ್ಮ ಶೈಕ್ಷಣಿಕ ಭವಿಷ್ಯದ ಸುಧಾರಣೆಗೆ ಮೆಟ್ಟಿಲಾಗಬೇಕಾಗಿದೆ.

ಸರ್ಕಾರವು ರಾಜ್ಯದ ಶೈಕ್ಷಣಿಕ ಪ್ರಗತಿಗೆ ಕೈಗೊಳ್ಳಬೇಕಾದ ಸುಧಾರಣಾ ಕ್ರಮಗಳಿಗೆ ಮಾನದಂಡವಾಗಿ ಈ ಫಲಿತಾಂಶವನ್ನು ಪರಿಗಣಿಸಿ, ಭವಿಷ್ಯದ ಯೋಜನೆಗಳನ್ನು ರೂಪಿಸಬೇಕಾಗಿದೆ.

- ಜ್ಯೋತಿ ಭದ್ರಶೆಟ್ಟಿ, ವಿಜಯಪುರ

Post Comments (+)