ಗುರುವಾರ , ಜುಲೈ 29, 2021
20 °C

ಭರವಸೆ ಮೂಡಿಸಿದೆ ಚೇತರಿಕೆಯ ಹಾದಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೋವಿಡ್ ಸಂಕಷ್ಟಕ್ಕೆ ಸಿಲುಕಿ ಇಡೀ ವಿಶ್ವವೇ ಹೈರಾಣಾಗುತ್ತಿರುವ ಬೆಳವಣಿಗೆಯು ನಾವು ಬೆಚ್ಚಿ ಬೀಳುವಂತೆ ಮಾಡುತ್ತಿದೆ. ಇದರ ನಡುವೆಯೇ ನಮ್ಮ ದೇಶದಲ್ಲಿ ಚೇತರಿಕೆಯ ಪ್ರಮಾಣ ಕೂಡ ಹೆಚ್ಚುತ್ತಿರುವುದು ಆಶಾದಾಯಕ ಸಂಗತಿ. ಕೋವಿಡ್ ಎಂಬ ಕೂಗುಮಾರಿ ಇಡೀ ಜನಜೀವನವನ್ನೇ ಅಸ್ತವ್ಯಸ್ತಗೊಳಿಸಿ, ಜನರ ಆರ್ಥಿಕ ಹಾಗೂ ಸಾಮಾಜಿಕ ಬದುಕನ್ನೇ ಏರುಪೇರುಗೊಳಿಸಿ, ನಿರುದ್ಯೋಗವನ್ನು ಇಮ್ಮಡಿಗೊಳಿಸಿ ನಾಗಾಲೋಟದಲ್ಲಿ ಮುಂದೆ ಸಾಗುತ್ತಿದ್ದರೂ ಅದೇ ವೇಗದಲ್ಲಿ ಸೋಂಕಿತರು ಗುಣಮುಖರಾಗುತ್ತಿರುವುದು ಭರವಸೆಯ ಬೆಳಕಾಗಿದೆ. ಕೋವಿಡ್ ಪೀಡಿತರು ಭಯಪಡುವ ಅಗತ್ಯ ಇಲ್ಲ. ಎಲ್ಲ ಕಾಯಿಲೆಗಳ ಹಾಗೆ ಕೋವಿಡ್‌ ಕೂಡ ಸಾಮಾನ್ಯ ಕಾಯಿಲೆಯ ಸ್ವರೂಪ ಪಡೆಯಲು ಹೆಚ್ಚು ದಿನಗಳು ಬೇಕಾಗಿಲ್ಲ ಎನಿಸುತ್ತದೆ.

ಕೆ.ವಿ.ವಾಸು, ಮೈಸೂರು

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.