ಮಾನವೀಯತೆಯ ಮೇಲೆ ಕ್ರೂರ ದಾಳಿ

‘ಎಲ್ಲಿ ಮಹಿಳೆ ವಾಸಿಸುತ್ತಾಳೋ ಅಲ್ಲಿ ದೇವತೆಗಳು ನೆಲಸುತ್ತಾರೆ’ ಎನ್ನುವುದು ಪುರಾಣದ ಮಾತು. ಆದರೆ, ದೇಶದ ಇಂದಿನ ಪರಿಸ್ಥಿತಿಯಲ್ಲಿ ಮಹಿಳೆಯರಿಗೆ ಸ್ವಾತಂತ್ರ್ಯವೇ ಇಲ್ಲದಂತಾಗಿದೆ. ‘ನಿರ್ಭಯಾ’ ಪ್ರಕರಣ ಇನ್ನೂ ಜನರ ಮನಸ್ಸಿನಲ್ಲಿ ಇದೆ; ಇದೇ ಮಾದರಿಯ ಮತ್ತೊಂದು ದುಷ್ಕೃತ್ಯವು ದೆಹಲಿಯಲ್ಲಿ ನಡೆದಿರುವುದು ಅಮಾನವೀಯ. ಮಾನವೀಯತೆಯ ಮೇಲೆ ನಡೆದ ಕ್ರೂರ ದಾಳಿ ಇದಾಗಿದೆ; ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಟ್ಟಿರುವುದಕ್ಕೆ ನಿದರ್ಶನವೂ ಆಗಿದೆ. ಇಂತಹ ಕೃತ್ಯಗಳು ನಡೆದಾಗ ದೇಶದಾದ್ಯಂತ ಹೋರಾಟಗಳು ನಡೆಯುತ್ತವೆ. ಮಾಧ್ಯಮಗಳಲ್ಲಿಯೂ ದೊಡ್ಡ ಸುದ್ದಿಯಾಗುತ್ತದೆ. ಕೆಲವು ದಿನಗಳ ಬಳಿಕ ಆ ವಿಷಯವೇ ಮರೆತುಹೋಗುತ್ತದೆ. ಕಾನೂನಿನ ಹುಳುಕು, ಪೊಲೀಸರ ತನಿಖೆ
ಯಲ್ಲಿನ ಲೋಪಗಳೇ ದುಷ್ಕರ್ಮಿಗಳ ಪಾಲಿಗೆ ವರದಾನವಾಗುತ್ತಿವೆ. ಅವರು ಶಿಕ್ಷೆ
ಯಿಂದ ತಪ್ಪಿಸಿಕೊಳ್ಳುತ್ತಾರೆ. ಸಂತ್ರಸ್ತರು ನೋವಿನಲ್ಲಿಯೇ ಬದುಕು ದೂಡುತ್ತಾರೆ.

⇒ಪ್ರೇಮಾನಂದ ಹಿರೇಮಠ, ಜಮಖಂಡಿ

ಮೀಟರ್ ನಿಯಮ: ಹೊಸ ಮನೆಗೆ ಸಜೆ

ಕಳೆದ ಒಂದು ವರ್ಷದಿಂದ 30×40ಕ್ಕಿಂತ ದೊಡ್ಡ ನಿವೇಶನಗಳಲ್ಲಿ ನಿರ್ಮಿಸಿರುವ ಹೊಸ ಮನೆಗಳಿಗೆ ವಿದ್ಯುತ್ ಮೀಟರ್ ವಿತರಣೆಯು ಸ್ಥಗಿತಗೊಂಡಿದೆ. ಇದು ಸ್ವಂತ
ಸೂರು ಹೊಂದುವ ನಾಗರಿಕರ ಕನಸಿಗೆ ಭಂಗ ತಂದಿದೆ. ಉತ್ತರ ಪ್ರದೇಶದಲ್ಲಿ ಅನಧಿಕೃತ ನಿವೇಶನವೊಂದರಲ್ಲಿ ನಿರ್ಮಿಸಿದ ಮನೆಗೆ ಮೀಟರ್ ವಿತರಣೆ ಮಾಡ
ದಂತೆ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಇದೇ ಆದೇಶವನ್ನು ಮುಂದಿಟ್ಟು
ಕೊಂಡು ಕಾನೂನುಬದ್ಧವಾಗಿ ನಿರ್ಮಿಸಿರುವ ಮನೆಗಳಿಗೆ ಮೀಟರ್ ನೀಡದಿರು
ವುದು ಸರಿಯಲ್ಲ. ನಿಯಮ ಉಲ್ಲಂಘಿಸಿರುವ ಮನೆಗಳಿಗೆ ದಂಡ ವಿಧಿಸಿ ಮೀಟರ್ ವಿತರಿಸಬಹುದಲ್ಲವೆ? ಮತ್ತೊಂದೆಡೆ ‘ಒಸಿ’ (ಸ್ವಾಧೀನಾನುಭವ ಪತ್ರ) ವಿತರಣೆಗೂ ಸರಿಯಾದ ಮಾರ್ಗಸೂಚಿ ಇಲ್ಲ. ಸಮಸ್ಯೆಗೆ ಪರಿಹಾರೋಪಾಯ ಹುಡುಕಲು ಸರ್ಕಾರ ಮುಂದಾಗುತ್ತಿಲ್ಲ. ನಾಗರಿಕರು ಅನುಭವಿಸುತ್ತಿರುವ ಸಂಕಷ್ಟ ಗೊತ್ತಿದ್ದರೂ ಜಾಣಕುರುಡುತನ ಪ್ರದರ್ಶಿಸುತ್ತಿರುವುದು ಸರಿಯಲ್ಲ.

⇒ಕಬೀರ್ ನಾಯಕ್ ಎಚ್., ಹರಪನಹಳ್ಳಿ

ಸಂಗೀತ ವಿ.ವಿ. ಪರೀಕ್ಷೆ: ಅವ್ಯವಸ್ಥೆಯ ಆಗರ

ಕರ್ನಾಟಕ ರಾಜ್ಯ ಡಾ. ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದಿಂದ ಮೇ 10ರಂದು ಸಂಗೀತ, ನಾಟ್ಯ ಮತ್ತು ತಾಳ
ವಾದ್ಯಕ್ಕೆ ಸಂಬಂಧಿಸಿದಂತೆ ಪರೀಕ್ಷೆ ನಡೆಯಿತು. ಈ ಪರೀಕ್ಷೆ ತೆಗೆದುಕೊಂಡಿದ್ದ ಹುಡುಗಿಯೊಬ್ಬಳು, ಜೀವಮಾನದಲ್ಲಿಯೇ ಅಂತಹ ಪರೀಕ್ಷಾ ಅವ್ಯವಸ್ಥೆ ಕಂಡಿಲ್ಲ
ವೆಂದು ನೊಂದುಕೊಂಡಳು. ಮೈಸೂರಿನ ಪರೀಕ್ಷಾ ಕೇಂದ್ರದಲ್ಲಿ ಒಂದೇ ಕಡೆ ಎಲ್ಲ ವಿಭಾಗಗಳ ಪರೀಕ್ಷಾ ಕೊಠಡಿಯ ವಿವರದ ಪಟ್ಟಿ ಹಾಕಿದ್ದರಿಂದ ಕೊಠಡಿ ತಿಳಿಯಲು ನೂಕುನುಗ್ಗಲು ಉಂಟಾಗಿದೆ. ಕೆಲವು ಮಕ್ಕಳ ನೋಂದಣಿ ಸಂಖ್ಯೆ ನಾಪತ್ತೆಯಾಗಿದೆ. ಅಂತಹವರಿಗೆ ಎಲ್ಲೆಂದರಲ್ಲಿ ಕೂರಿಸಿ ಪರೀಕ್ಷೆಯ ಮಧ್ಯದಲ್ಲಿಯೇ ಎಬ್ಬಿಸಿ ಬೇರೆಡೆಗೆ ಸ್ಥಳಾಂತರಿಸಿ ಅವಾಂತರ ಸೃಷ್ಟಿಸಲಾಗಿದೆ. ಪರೀಕ್ಷೆ ನಿಗದಿತ ಸಮಯಕ್ಕಿಂತ ಒಂದು ಗಂಟೆ ತಡವಾಗಿದೆ. ಕಳೆದ ಮೂರು ವರ್ಷಗಳಿಂದಲೂ ವಿ.ವಿ.ಯಿಂದ ಜರುಗುತ್ತಿರುವ ಈ ಪರೀಕ್ಷೆಯು ಗೊಂದಲದ ಗೂಡಾಗಿದೆ. ವಿಶ್ವ
ವಿದ್ಯಾಲಯದ ಪರೀಕ್ಷೆಯೊಂದು ಹೀಗೆ ನಡೆಯುತ್ತದೆ ಎನ್ನುವುದು ಉನ್ನತ ಶಿಕ್ಷಣದ ಸ್ಥಿತಿಗತಿ ಸೂಚಿಸುವಂತಿದೆ.

⇒ಕೆ.ಎಂ. ನಾಗರಾಜು, ಮೈಸೂರು

ಚೀನಾ ನಡೆ ನಮಗೆ ಮಾದರಿ ಅಲ್ಲವೇ?

ಇರಾನ್ ಮೇಲಿನ ಯುದ್ಧ ಅಮೆರಿಕಕ್ಕೆ ತಲೆಬಿಸಿಯಾಗಿದೆ. ಹಾಗಾಗಿ, ‘ದೊಡ್ಡಣ್ಣ’ನೇ
ಚೀನಾದ ಬಾಗಿಲ ಬಳಿ ನಿಂತಿದ್ದಾನೆ. ಚೀನಾ ತನ್ನ ಹಿತಾಸಕ್ತಿಗಾಗಿ ಏನನ್ನು ಬೇಕಾ
ದರೂ ದಕ್ಕಿಸಿಕೊಳ್ಳುವಷ್ಟು ಬಲಾಢ್ಯವಾಗಿದೆ ಎಂಬುದು ಈ ಬೆಳವಣಿಗೆಯಿಂದ ಸುಸ್ಪಷ್ಟ. ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿರುವ ನಾವು, ನಮ್ಮ ರೂಪಾಯಿ
ಯನ್ನು ಅಮೆರಿಕದ ಡಾಲರ್ ಎದುರು ದುರ್ಬಲಗೊಳಿಸಿಕೊಳ್ಳುತ್ತಿದ್ದೇವೆ. ಸಾಲ
ದ್ದಕ್ಕೆ, ದೇವಸ್ಥಾನಗಳಿಗಾಗಿ ವಾಯುಸೇನೆಯಿಂದ ‘ಪುಷ್ಪವೃಷ್ಟಿ’ ಮಾಡಿಸುತ್ತಿದ್ದೇವೆ. ದೇಶದ ಭವಿಷ್ಯ ಕಟ್ಟುವ ಸಮೂಹದ ಪರೀಕ್ಷೆಗಳನ್ನು ಅಕ್ರಮದ ಗೂಡಾಗಿಸಿ, ಮರು
ಪರೀಕ್ಷೆಗಾಗಿ ಮತ್ತಷ್ಟು ಹಣ ಸುಟ್ಟು ಭ್ರಷ್ಟರನ್ನು ಬೆಚ್ಚಗಿರಿಸು ತ್ತಿದ್ದೇವೆ. ‘ನಾನು ಭಾರತೀಯ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವ ಉತ್ತಮ ಮಾದರಿ ಸೃಷ್ಟಿಸುವ ಬದಲು ಹೊಸ ತಲೆಮಾರೊಂದನ್ನು ಶಿಲಾಯುಗಕ್ಕೆ ಕರೆದೊಯ್ಯುತ್ತಿದ್ದೇವೆ.

⇒ಶಾಂತರಾಜು ಎಸ್., ಬೆಂಗಳೂರು

ವಿದ್ಯಾರ್ಥಿ ಬಸ್ಪಾಸ್ಗೆ ವಿಳಂಬ ಬೇಡ

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಪ್ರತಿವರ್ಷ ರಾಜ್ಯದ ಶಾಲಾ–ಕಾಲೇಜಿನ ವಿದ್ಯಾರ್ಥಿಗಳಿಗೆ ಉಚಿತವಾಗಿ, ಕೆಲವರಿಗೆ ರಿಯಾಯಿತಿ ದರದಲ್ಲಿ ಬಸ್ಪಾಸ್ ವಿತರಿಸುತ್ತದೆ. ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
2026–27ನೇ ಶೈಕ್ಷಣಿಕ ಸಾಲಿನ ಶಾಲಾ–ಕಾಲೇಜುಗಳು ಮೇ 29ರಿಂದ ಪ್ರಾರಂಭ ವಾಗುತ್ತಿವೆ. ನಿಗಮವು ಜೂನ್ 1ರಿಂದ ಬಸ್ಪಾಸ್ಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿದೆ. ಇದರಿಂದ ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತದೆ. ಪಾಸ್ಗೆ ಅರ್ಜಿ ಸಲ್ಲಿಸಲು ಈ ದಿನಾಂಕಕ್ಕೂ ಮುಂಚೆಯೇ ಅವಕಾಶ ಮಾಡಿಕೊಟ್ಟರೆ ಅನುಕೂಲ ಆಗಲಿದೆ. ಸಾರಿಗೆ ಸಚಿವರು ಈ ಬಗ್ಗೆ ಗಮನಹರಿಸಲಿ.

ಟಿ. ಹನುಮಂತರಾಯ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.