ಬುಧವಾರ, ಡಿಸೆಂಬರ್ 1, 2021
22 °C

ವಾಚಕರ ವಾಣಿ: ನಾಳೆ ಎಂಬ ಮಾಯಾ ಜಿಂಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ಭವಿಷ್ಯ ವಿಜ್ಞಾನ’ ದಾರಿದೀಪವಾಗಲಿ ಎಂಬ ಯೋಗಾನಂದ ಅವರ ಲೇಖನ (ಸಂಗತ, ಅ. 26) ಪ್ರಸ್ತುತ ಅಸ್ತಿತ್ವದಲ್ಲಿರುವ ನಮ್ಮಯ ಮನಃಸ್ಥಿತಿ, ಬದುಕಿನ ಅನಿಶ್ಚಿತತೆ ಬಗ್ಗೆ ಇರುವ ಭಯ ಮತ್ತು ಕಾಳಜಿಗೆ ಹಿಡಿದ ಕೈಗನ್ನಡಿಯಂತಿದೆ.

ಹೌದು, ನಾವೆಲ್ಲರೂ ವರ್ತಮಾನವನ್ನು ಅರಿಯದೆ ನಾಳೆ ಎಂಬ ಕಪೋಲಕಲ್ಪಿತ ಭ್ರಮೆಯಲ್ಲಿ ಬದುಕುತ್ತಿದ್ದೇವೆ. ಪ್ರಕೃತಿ ಹೇಗೆ ಬದಲಾವಣೆಗೆ ತನ್ನನ್ನು ಸದಾ ತೆರೆದುಕೊಳ್ಳುತ್ತದೆಯೋ ಹಾಗೇ ನಾವು ಕೂಡ ಮೂಢನಂಬಿಕೆಯಂತಹ ತರ್ಕರಹಿತ ಆಲೋಚನೆಗಳನ್ನು ಬಿಟ್ಟು ಭವಿತವ್ಯದ ಭರವಸೆಯಾದ ವಿಜ್ಞಾನವನ್ನು ಅಪ್ಪಿ ಒಪ್ಪಿಕೊಳ್ಳಬೇಕಾದ ಜರೂರತ್ತು ಖಂಡಿತ ಇದೆ.

ಅದಲ್ಲದೆ ಭವಿಷ್ಯದ ಆಶಾಭಾವದೊಂದಿಗೆ ಮುನ್ನಡೆಯಲು ಚಿಂತೆಗಿಂತ ಚಿಂತನೆ ಮುಖ್ಯವಾದುದು ಎಂಬ ಲೇಖಕರ ಗಟ್ಟಿ ನಿಲುವು ಸಮಯೋಚಿತವಾಗಿದೆ.

-ಆನಂದ ಕುಂಬಾರ, ಬೆಳಗಾವಿ

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.