ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಡಿ: ರೇಣುಕಾಚಾರ್ಯ ವಿರುದ್ಧ ಕಾನೂನು ಕ್ರಮ ಜರುಗಿಸಿ

Last Updated 30 ಜನವರಿ 2020, 19:45 IST
ಅಕ್ಷರ ಗಾತ್ರ

ಹೊನ್ನಾಳಿ ತಾಲ್ಲೂಕಿನ ಕೆಂಚಿಕೊಪ್ಪ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಸಿಡಿ ಉತ್ಸವದಲ್ಲಿ ದಲಿತ ಮಹಿಳೆಯರನ್ನು ಕಂಬಕ್ಕೆ ಕಟ್ಟಿ ನೇತು ಹಾಕಿ ತೂಗಿಸುವ ಅಮಾನುಷ ಆಚರಣೆಯನ್ನು ನಡೆಸಲಾಗಿದೆ. ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿಯಾಗಿರುವ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ಸಮ್ಮುಖದಲ್ಲಿಯೇ ಈ ಆಚರಣೆ ನಡೆದಿದೆ. ರೇಣುಕಾಚಾರ್ಯ ಇದಕ್ಕೆ ಸ್ವತಃ ಚಾಲನೆ ಕೊಟ್ಟದ್ದಲ್ಲದೆ ಈ ಅಮಾನವೀಯ, ಅಪಾಯಕಾರಿ ಅಚರಣೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಸಿಡಿ ಆಚರಣೆಯು ದಲಿತ ಮಹಿಳೆಯರನ್ನು ಅಪಮಾನಿಸುವ ಮತ್ತು ಅವರನ್ನು ಅಪಾಯಕ್ಕೆ ನೂಕುವ ಅನಿಷ್ಟ ಪದ್ಧತಿ. ರಾಜ್ಯ ಸರ್ಕಾರವು ಅಪಾಯಕಾರಿ, ಅಮಾನವೀಯಮೌಢ್ಯಗಳ ಆಚರಣೆಯನ್ನು ನಿಷೇಧಿಸುವ ಕಾನೂನನ್ನು ಇತ್ತೀಚೆಗೆ ಜಾರಿಗೊಳಿಸಿದೆ. ಈ ಕಾನೂನಿನ ಪ್ರಕಾರ, ಸಿಡಿ ಆಚರಣೆಯು ನಿಷೇಧಕ್ಕೆ ಒಳಗಾಗಿದೆ. ಅದೊಂದು ಶಿಕ್ಷಾರ್ಹ ಅಪರಾಧ. ಸಿಡಿ ಆಚರಣೆಗೆ ಕುಮ್ಮಕ್ಕು ಕೊಡುವುದು ಸಹ ಅಪರಾಧ. ತಾವು ಸಿಡಿ ಆಚರಣೆ ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟಿದ್ದು ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿಯಾಗಿ ಅಲ್ಲ
ವೆಂದೂ, ಸಾಮಾನ್ಯ ವ್ಯಕ್ತಿಯಾಗಿ ಕೊಟ್ಟಿದ್ದಾಗಿಯೂ ರೇಣುಕಾಚಾರ್ಯ ಹೇಳಿದ್ದಾರೆ. ತಮ್ಮದೇ ಪಕ್ಷದ ನೇತೃತ್ವದ ಸರ್ಕಾರ ರೂಪಿಸಿರುವ ಸಮಾಜಮುಖಿ ಕಾನೂನನ್ನು ಸಮರ್ಪಕವಾಗಿ ಜಾರಿಗೆ ತರುವ ವಿಶೇಷ ಜವಾಬ್ದಾರಿಯು ಜನಪ್ರತಿನಿಧಿಗಳ ಮೇಲಿರುತ್ತದೆ. ಆದ್ದರಿಂದ ರೇಣುಕಾಚಾರ್ಯ ಅವರು ಕಾನೂನು ಕ್ರಮಗಳಿಂದಾಗಲೀ, ನೈತಿಕ ಹೊಣೆಗಾರಿಕೆಯಿಂದಾಗಲೀ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ರೇಣುಕಾಚಾರ್ಯ ಅವರ ವಿರುದ್ಧ ಸರ್ಕಾರ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು.

–ಆರ್.ರಾಮಕೃಷ್ಣ,ರಾಜ್ಯ ಜಂಟಿ ಕಾರ್ಯದರ್ಶಿ,ಶುಭಂಕರ ಚಕ್ರವರ್ತಿ, ರಾಜ್ಯ ಕಾರ್ಯದರ್ಶಿ, ಭಾರತ ಜ್ಞಾನ ವಿಜ್ಞಾನ ಸಮಿತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT