ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಷ್ಟ ಕಟ್ಟಿಕೊಡುವವರು ಯಾರು? ‌

Last Updated 26 ಜನವರಿ 2020, 19:45 IST
ಅಕ್ಷರ ಗಾತ್ರ

ಶಾರದಾ ಗೋಪಾಲ ಅವರ ‘ಎಲ್ಲೂ ಸಲ್ಲದವಳು...’ ಎಂಬ ಲೇಖನ (ಪ್ರ.ವಾ., ಜ. 24) ಹಳ್ಳಿಯ ಹೆಣ್ಣುಮಕ್ಕಳು ಅನುಭವಿಸುತ್ತಿರುವ ಕಷ್ಟದ ಪರಿಸ್ಥಿತಿಯನ್ನು ಕಣ್ಣಿಗೆ ಕಟ್ಟುವಂತೆ ಹೇಳಿದೆ. ಹೆಚ್ಚಿನ ಮಾಹಿತಿ ಇಲ್ಲದ ನಿಯಮಗಳು ಜಾರಿಗೆ ಬಂದಾಗ ಜನ, ಏನುಮಾಡಬೇಕೆಂದು ತಿಳಿಯದೆ ತಮ್ಮ ಬಳಿ ಇರುವ ದಾಖಲೆಗಳೆಲ್ಲವನ್ನೂ ಹಿಡಿದು, ದುಡಿಮೆಯನ್ನು ಬಿಟ್ಟು ಇಡೀ ದಿನ ಸರದಿಯಲ್ಲಿ ನಿಲ್ಲುತ್ತಾರೆ. ಆಗ ಅವರಿಗಾಗುವ ನಷ್ಟವನ್ನು ಕಟ್ಟಿಕೊಡುವವರು ಯಾರು? ‌

ಎಲ್ಲವನ್ನೂ ಡಿಜಿಟಲ್ ಮಾಡಲು ಹೊರಟ ಸರ್ಕಾರಕ್ಕೆ ಜನರ ಈ ಬವಣೆ ಕಾಣುವುದಿಲ್ಲವೇ? ಒಂದು ಮಾಹಿತಿಯನ್ನು ಸಂಗ್ರಹಿಸಿದ ನಂತರ ಅದನ್ನು ಉಳಿದವಕ್ಕೂ ಅಳವಡಿಸಬಹುದಲ್ಲವೇ? ಈಗ ಹೇಗೂ ‘ಆಧಾರ್‌’ಗೆ ಮಾಹಿತಿ ನೀಡಿದ್ದೇವೆ. ಅದನ್ನೇ ಎಲ್ಲ ಕಡೆ ಬಳಸಿಕೊಂಡರೆ ಅದರಿಂದ ಎಷ್ಟೋ ಜನ ನೆಮ್ಮದಿಯ ನಿಟ್ಟುಸಿರುಬಿಡಲು ಸಾಧ್ಯವಾಗುತ್ತದೆ.

– ಪಲ್ಲವಿ ಎನ್.,ಸೊರಬ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT