ಇ–ಖಾತೆ ವಿಳಂಬ: ವಹಿವಾಟು ಮರೀಚಿಕೆ

ಗ್ರಾ.ಪಂ. ವ್ಯಾಪ್ತಿಯಲ್ಲಿ ಇ–ಖಾತೆ ಪ್ರಕ್ರಿಯೆ ವಿಳಂಬವಾಗಿದೆ. ಮನೆ ಕಟ್ಟುವ, ಕಟ್ಟಿದ ಮನೆಗೆ ವಿದ್ಯುತ್ ಸಂಪರ್ಕ ಪಡೆಯುವ, 30×40ಕ್ಕಿಂತ ದೊಡ್ಡ ನಿವೇಶನಗಳಿಗೆ ತಾತ್ಕಾಲಿಕ ವಿದ್ಯುತ್ ಸಂಪರ್ಕ ಪಡೆಯುವ ಕನಸು ನುಚ್ಚುನೂರಾಗಿದೆ. ಡಿಜಿಟಲ್

ರೂಪದಲ್ಲಿ ಇ–ಖಾತೆ ನೀಡುವ ಪ್ರಕ್ರಿಯೆ 2025ರ ಅಂತ್ಯದಲ್ಲಿ ಆರಂಭವಾಯಿತು. ಅಲ್ಲಿಂದೀಚೆಗೆ ಭೌತಿಕ ರೂಪದಲ್ಲಿಯೂ ದಾಖಲೆ ಪಡೆಯಲಾಗದೆ, ಡಿಜಿಟಲ್ ದಾಖಲೆಗಳೂ ಸಿಗದೆ, ಒಂದಿಲ್ಲೊಂದು ಸಮಸ್ಯೆ ಸಾಮಾನ್ಯ ಎನ್ನುವಂತಾಗಿದೆ. ಮನೆ ಕಟ್ಟುವವರಿಗೆ, ನಿವೇಶನ ಕೊಳ್ಳುವ ಮತ್ತು ಮಾರುವವರಿಗೆ, ಕಟ್ಟಡ ಕಾರ್ಮಿಕರಿಗೆ ತೊಂದರೆ ಆಗುತ್ತಿದೆ. ಈ ಸಮಸ್ಯೆಗೆ ಕೊನೆ ಯಾವಾಗ?

-ಉದಂತ ಶಿವಕುಮಾರ, ಬೆಂಗಳೂರು

ಅಪ್ಲ್ಯಾಸ್ಟಿಕ್ ರಕ್ತಹೀನತೆ: ಅಲಕ್ಷ್ಯ ಸಲ್ಲದು

‘ಥಲಸ್ಸೇಮಿಯಾ: ಅರಿವಿನ ಹೆಜ್ಜೆಯ ಅಗತ್ಯ’ (ಲೇ: ಶ್ರೀಗುರು, ಪ್ರ.ವಾ., ಮೇ 8) ಸಕಾಲಿಕ ಬರಹ. ಇದೇ ರೀತಿಯಾಗಿ ರಕ್ತಕ್ಕೆ ಸಂಬಂಧಿಸಿದ ‘ಅಪ್ಲ್ಯಾಸ್ಟಿಕ್ ರಕ್ತಹೀನತೆ’ ಎಂಬ ಅಪರೂಪದ ಕಾಯಿಲೆಯಿಂದ ಕಳೆದ ವರ್ಷ ನಮ್ಮ ಕುಟುಂಬದ ಸದಸ್ಯರು ಸಾವಿಗೀಡಾದರು. ಮೂಳೆ ಮಜ್ಜೆ ರಕ್ತಕಣಗಳ ಉತ್ಪಾದನೆಯನ್ನೇ ನಿಲ್ಲಿಸುವ ಹಾಗೂ ರೋಗನಿರೋಧಕ ವ್ಯವಸ್ಥೆಯೇ ಮೂಳೆ ಮಜ್ಜೆಯ ಮೇಲೆ ದಾಳಿ ಮಾಡುವ ಈ ರೋಗಕ್ಕೆ ಮೂಳೆ ಮಜ್ಜೆ ಕಸಿಯೇ ಶಾಶ್ವತ ಪರಿಹಾರ. ತೀವ್ರವಾದ ಆಯಾಸ, ಸೋಂಕು, ಒಸಡು–ಮೂಗಿನಲ್ಲಿ ರಕ್ತಸ್ರಾವ ಕಾಣಿಸಿಕೊಳ್ಳುವಂಥ ರೋಗಲಕ್ಷಣಗಳು ಕಂಡುಬಂದ ತಕ್ಷಣ ವೈದ್ಯರ ಸಲಹೆ ಪಡೆದರೆ ಅಮೂಲ್ಯ ಜೀವ ಉಳಿಸಬಹುದು.

-ರಮೇಶ್ ಪಾಟೀಲ್, ಡೋಣಮರಡಿ

ರಾಜ್ಯದಲ್ಲಿ ದ್ವಿಭಾಷಾ ನೀತಿ ಕಡ್ಡಾಯ ಆಗಲಿ

ರಾಜ್ಯ ಶಿಕ್ಷಣ ನೀತಿ ಆಯೋಗದ ವರದಿಯ ಅನುಷ್ಠಾನಕ್ಕೆ ಸಂಪುಟ ಉಪಸಮಿತಿ ರಚಿಸಲು ತೀರ್ಮಾನಿಸಿರುವುದು ಸ್ವಾಗತಾರ್ಹ. ಶಾಲಾ ಶಿಕ್ಷಣದಲ್ಲಿ ದ್ವಿಭಾಷಾ ನೀತಿಕಡ್ಡಾಯವಾಗಲಿ. ಸ್ಥಳೀಯ ಭಾಷೆಯನ್ನು (ಕನ್ನಡ) ಮಾತೃಭಾಷೆಯನ್ನಾಗಿ ಪರಿಗಣಿಸಿ, ಪ್ರಥಮ ಭಾಷೆಯಾಗಿಯೂ ಮತ್ತು ಇಂಗ್ಲಿಷ್ ಅನ್ನು ದ್ವಿತೀಯ ಭಾಷೆ ಆಗಿಯೂ ನಿಗದಿಪಡಿಸುವುದು ಸೂಕ್ತ. ಐದನೆಯ ತರಗತಿಯವರೆಗೆ ಸ್ಥಳೀಯ ಭಾಷೆಯೇ (ಮಾತೃಭಾಷೆ) ಬೋಧನಾ ಮಾಧ್ಯಮ ಆಗಬೇಕೆಂಬುದು ಶಿಕ್ಷಣ ತಜ್ಞರಪ್ರತಿಪಾದನೆಯಾಗಿದೆ ಹಾಗೂ ರಾಷ್ಟ್ರೀಯ ಶಿಕ್ಷಣ ನೀತಿಯೂ ಇದನ್ನೇ ಹೇಳುತ್ತಿದೆ. ಶಿಕ್ಷಣ ಇಲಾಖೆ ಅಳವಡಿಸಿಕೊಂಡಿರುವ ಎನ್ಸಿಇಆರ್ಟಿಯ 6ರಿಂದ 9ನೇ ತರಗತಿಯ ವಿಜ್ಞಾನ ಮತ್ತು ಗಣಿತ ಪಠ್ಯಪುಸ್ತಕಗಳು ಉತ್ತಮದರ್ಜೆಯ ಪುಸ್ತಕಗಳಾ ದರೂ, ಮಕ್ಕಳ ವಯೋಮಾನಕ್ಕೆ ಅರಗಿಸಿಕೊಳ್ಳಲು ಕಷ್ಟ ಹಾಗೂ ಎಳೆಯರಿಗೆ ಬೋಧಿಸಲು ಶಿಕ್ಷಕರಿಗೂ ಕಠಿಣವಾಗಿವೆ. ಅವುಗಳನ್ನು ರದ್ದುಗೊಳಿಸಿ ಮಕ್ಕಳ ಬೌದ್ಧಿಕ ಸಾಮರ್ಥ್ಯಕ್ಕೆ ಅನುಗುಣವಾಗಿ ಪಠ್ಯ ಪುಸ್ತಕಗಳು ರಚನೆಯಾಗಲಿ.

-ಪು.ಸೂ. ಲಕ್ಷ್ಮೀನಾರಾಯಣ ರಾವ್, ಬೆಂಗಳೂರು

ಜಾತೀಯತೆ ಸಮಾಜಕ್ಕಂಟಿದ ಕ್ಯಾನ್ಸರ್ ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ದಲಿತರು ಮತ್ತು ಬ್ರಾಹ್ಮಣರು ಸಹಪಂಕ್ತಿ ಭೋಜನ ಮಾಡಿರುವುದು ವರದಿಯಾಗಿದೆ. ಇದು ದಲಿತರು ಸಂಭ್ರಮಿಸುವ ವಿಚಾರವಲ್ಲ. ಶ್ರೇಣೀಕೃತ ಸಮಾಜ ನಡೆಸುತ್ತಿರುವ ದಲಿತರ ದೇವಸ್ಥಾನ ಪ್ರವೇಶ ನಿರಾಕರಣೆಯಂತಹ ಸಾಮಾಜಿಕ ಶೋಷಣೆಗಳು ದಲಿತೇತರ ಜಾತಿಗಳು ಮುಖತಗ್ಗಿಸುವಂತೆ ಮಾಡಿವೆ. ಈಗೀಗ ಜಾತಿ ಅಸ್ಪೃಶ್ಯತೆಯು ಸಾಂದರ್ಭಿಕವಾಗಿ ಸೃಷ್ಟಿಯಾಗುತ್ತಿರುವುದೇ ಹೆಚ್ಚು. ಜನರು ಮಾನಸಿಕವಾಗಿ ಬದಲಾಗುವವರೆಗೂ ಇಂತಹ ಸಹಪಂಕ್ತಿ ಭೋಜನ ನಡೆಯಬೇಕು. ಜಾತಿ ತಾರತಮ್ಯದ ಬೇರನ್ನು ಕಿತ್ತುಹಾಕುವ ತನಕ ಜನ–ಮಾಧ್ಯಮಗಳು ವಿರಮಿಸಬಾರದು.

-ಸೋಮಶೇಖರ್, ಕದಿರೇಹಳ್ಳಿ

ಅಸಂಬದ್ಧ ಹೇಳಿಕೆ: ಸೌಜನ್ಯ ಮೀರದಿರಲಿ

ಬಿಜೆಪಿ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು, ತಮಿಳುನಾಡಿನ ರಾಜಕೀಯ ಪರಿಸ್ಥಿತಿ ಕುರಿತಂತೆ ‘ಕಾಂಗ್ರೆಸ್ನ ಸ್ಥಿತಿ ಭಿಕ್ಷೆ ಬೇಡುವಂತಾಗಿದೆ’ ಎಂದಿದ್ದಾರೆ. ಅವರ ಹೇಳಿಕೆ ಸದಭಿರುಚಿಯಿಂದ ಕೂಡಿದ್ದಲ್ಲ. ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಪೂರ್ಣ ಬಹುಮತ ಬಾರದ ಸಂದರ್ಭದಲ್ಲಿ ಇತರ ಪಕ್ಷಗಳ ನೆರವಿನೊಂದಿಗೆ ಸರ್ಕಾರ ರಚಿಸಲು ಸಂವಿಧಾನದಲ್ಲಿ ಅವಕಾಶವಿದೆ. ನಾರಾಯಣಸ್ವಾಮಿ ಅವರು ಪ್ರತಿನಿಧಿಸುವ ಬಿಜೆಪಿಗೆ ಇದುವರೆಗೆ ಕರ್ನಾಟಕದಲ್ಲಿ ಪೂರ್ಣ ಬಹುಮತಗಳಿಸಲು ಒಮ್ಮೆಯೂ ಸಾಧ್ಯವಾಗಿಲ್ಲ. ಪ್ರತಿ ಬಾರಿ ಸರ್ಕಾರ ರಚಿಸಿದಾಗಲೂ ಪಕ್ಷೇತರರು ಇಲ್ಲವೆ ಜೆಡಿಎಸ್ನ ನೆರವು ಪಡೆದಿದೆ ಎಂಬುದನ್ನು ಅವರು ಮರೆತಂತಿದೆ. ಬಿಜೆಪಿಯು ತಮಿಳುನಾಡಿನಲ್ಲಿ ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವುದನ್ನೂ ಮರೆತಿದ್ದಾರೆ. ರಾಜಕೀಯ ನಾಯಕರ ಹೇಳಿಕೆಗಳು ಸೌಜನ್ಯದ ಎಲ್ಲೆ ಮೀರಿದರೆ ಅದು ತಿರುಗುಬಾಣವಾಗುವ ಸಾಧ್ಯತೆಯೇ ಹೆಚ್ಚು.

- ಎಂ.ಜಿ. ರಂಗಸ್ವಾಮಿ, ಹಿರಿಯೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.