ತನ್ನಂತೆ ಪರರ ಬಗೆದಾಗ ಜನಸೇವೆ ಸಾಧ್ಯ

ಕೊಟ್ಟ ಕುದುರೆಯನೇರಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ದಿನೇಶ್ ಗುಂಡೂರಾವ್ ಅವರ ‘ಗೃಹ ಆರೋಗ್ಯ: ಅಣ್ಣನ ಸಂಕಟಕ್ಕೆ ಉತ್ತರ’ (ಪ್ರ.ವಾ., ಮೇ 2) ಲೇಖನ, ಜನಾರೋಗ್ಯದ ಬಗ್ಗೆ ಅವರಿಗಿರುವ ಕಳಕಳಿಯನ್ನೂ ಕಾರ್ಯತತ್ಪರತೆಯನ್ನೂ ವ್ಯಕ್ತಪಡಿಸುತ್ತದೆ. ಅವರ ತಂದೆ ಮಾಜಿ ಮುಖ್ಯಮಂತ್ರಿ ಗುಂಡೂರಾವ್ ಕ್ಯಾನ್ಸರ್ ಪೀಡಿತರಾಗಿದ್ದಾಗ ದೇಶದಲ್ಲಿ ಸುಧಾರಿತ ಚಿಕಿತ್ಸೆ ಕೊಡಿಸಲು ಸಾಧ್ಯವಾಗದೆ ವಿದೇಶಕ್ಕೆ ಹೋಗಬೇಕಾಗುತ್ತದೆ. ಅದನ್ನು ನೆನಪಿಸಿಕೊಳ್ಳುವ ದಿನೇಶ್ ಗುಂಡೂರಾವ್ ಅವರಿಗೆ ಈಗ ಆರೋಗ್ಯ ಸಚಿವರಾಗುವ ಅದೃಷ್ಟ ಒಲಿದು ಬಂದಿದೆ. ಆ ಹಿಂದಿನ ನೆನಪು ಅವರಿಗೆ ಕಾಡಿರುವುದರ ಪರಿಣಾಮ, ಜನಸಾಮಾನ್ಯರ ಮನೆ ಬಾಗಿಲಿಗೆ ಆರೋಗ್ಯ ಸೇವೆ ನೀಡುವ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಜನಸೇವೆಗೆ ಇದೊಂದು ಸದಾವಕಾಶ ಎಂದಿದ್ದಾರೆ ನಮ್ರತೆಯಿಂದ. ಸರ್ವಜ್ಞ ಕವಿ ಇದನ್ನೇ ‘ತನ್ನಂತೆ ಪರರ ಬಗೆದೊಡೆ ಕೈಲಾಸ ಬಿನ್ನಣವಕ್ಕು ಸರ್ವಜ್ಞ’ ಎಂದದ್ದು.

-ಪ್ರೊ. ಶಿವರಾಮಯ್ಯ, ಬೆಂಗಳೂರು

ಪತ್ರಿಕಾ ಸ್ವಾತಂತ್ರ್ಯ ಹತ್ತಿಕ್ಕುವುದು ಸರಿಯಲ್ಲ

ವಿಶ್ವ ಪತ್ರಿಕಾ ಸ್ವಾತಂತ್ರ್ಯ ದಿನದ ಸಮಯದಲ್ಲಿ ‘ರಿಪೋರ್ಟರ್ಸ್ ವಿದೌಟ್ ಬಾರ್ಡರ್ಸ್’ ಸಂಸ್ಥೆ 2026ರ ವಿಶ್ವ ಪತ್ರಿಕಾ ಸ್ವಾತಂತ್ರ್ಯಸೂಚಿ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿರುವ 180 ದೇಶಗಳಲ್ಲಿ ಭಾರತವು 151ನೇ ಸ್ಥಾನದಿಂದ 157ನೇ ಸ್ಥಾನಕ್ಕೆ ಕುಸಿದಿದೆ. ಇದು ನಿರ್ಭೀತ ಪತ್ರಿಕಾ ಸ್ವಾತಂತ್ರ್ಯದ ಕಗ್ಗೊಲೆಗೆ ನಿದರ್ಶನದಂತಿದೆ. ಭಾರತದ ನೆರೆಯ ದೇಶಗಳಾದ ನೇಪಾಳ 87, ಶ್ರೀಲಂಕಾ 134, ಭೂತಾನ್ 150 ಹಾಗೂ ಬಾಂಗ್ಲಾದೇಶ 152ನೇ ಸ್ಥಾನದಲ್ಲಿವೆ.

ಭಾರತದಲ್ಲಿನ ಪತ್ರಿಕಾ ಸ್ವಾತಂತ್ರ್ಯದ ಇಳಿಮುಖಕ್ಕೆ ಕೇಂದ್ರ ಸರ್ಕಾರದ ದಮನಕಾರಿ ನೀತಿಯೇ ಕಾರಣವೆಂದು ವರದಿ ಹೇಳಿದೆ. ಆರ್ಥಿಕತೆಯಲ್ಲಿ ದೇಶ ಐದನೇ ಸ್ಥಾನದಲ್ಲಿದೆ ಎಂದು ಬೀಗುವ ಕೇಂದ್ರ ಸರ್ಕಾರವು ಪತ್ರಿಕಾ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಯತ್ನ ಮಾಡಬಾರದು. ಟೀಕೆ ಟಿಪ್ಪಣಿಗಳೇ ಸರ್ಕಾರವನ್ನು ಸರಿಯಾದ ದಾರಿಗೆ ಕೊಂಡೊಯ್ಯುವ ಸಾಧನಗಳು. ಸರ್ವಾಧಿಕಾರಿ ಧೋರಣೆ ತೋರಿದರೆ ನೆರೆಯ ಚೀನಾದಂತೆ ನಾವು 178ನೇ ಸ್ಥಾನಕ್ಕೆ ಸ್ಪರ್ಧಿಸುವುದರಲ್ಲಿ ಅನುಮಾನವಿಲ್ಲ.

-ಸುರೇಂದ್ರ ಪೈ, ಭಟ್ಕಳ

ಜನಸಾಮಾನ್ಯರ ಜೀವಗಳಿಗೆ ಬೆಲೆ ಇಲ್ಲವೆ?

ಮಧ್ಯಪ್ರದೇಶದ ಜಬಲ್ಪುರ್ನಲ್ಲಿ ನಡೆದ ದೋಣಿ ದುರಂತದ ವರದಿ ಓದುವಾಗ, ಮುನ್ನೆಚ್ಚರಿಕೆ ವಹಿಸಿದ್ದರೆ, ದುರಂತವನ್ನು ತಪ್ಪಿಸಬಹುದಿತ್ತು ಅಥವಾ ಸಾವು ನೋವಿನ ಪ್ರಮಾಣವನ್ನು ತಗ್ಗಿಸಬಹುದಿತ್ತು ಅನ್ನಿಸದಿರದು. ಮುಂಜಾಗ್ರತಾ ಕ್ರಮಗಳ ಅನುಷ್ಠಾನದಲ್ಲಿ ಆದ ಲೋಪಗಳಿಂದ ಸಾಮಾನ್ಯ ಜನರು ಜೀವ ಕಳೆದು ಕೊಳ್ಳುವಂತಾಗುತ್ತದೆ. ಜನಸಾಮಾನ್ಯರ ಜೀವಗಳಿಗೆ ಬೆಲೆಯೇ ಇಲ್ಲದಂತಾಗಿದೆ. ಹೊಣೆಯನ್ನು ವರ್ಗಾಯಿಸುವುದರಲ್ಲೇ ಎಲ್ಲರೂ ನಿರತರಾಗಿರುವಾಗ, ಇದನ್ನೆಲ್ಲ ಗಮನಿಸಿ ಸರಿಪಡಿಸುವವರು ಯಾರು?

- ವೀಣಾ ಡಿ., ಇಳಕಲ್ಲ

ತಾಯ್ನುಡಿ ಮಾಧ್ಯಮ: ನಿರ್ಲಕ್ಷ್ಯದಿಂದ ಕುತ್ತು

ತಾಯ್ನುಡಿ ಮಾಧ್ಯಮ ಎಂಬ ನಿತ್ಯ ಸತ್ಯದ ಬಗ್ಗೆ ಮತ್ತೆ ಮತ್ತೆ ಬರೆಯಬೇಕಾಗಿ ಬಂದಿರುವುದು (ಲೇ: ನಿರಂಜನಾರಾಧ್ಯ ವಿ.ಪಿ., ಪ್ರ.ವಾ.) ನಮ್ಮ ದುರ್ವಿಧಿ. ಆಳುವ ಪುರುಷ ಪ್ರಭೃತಿಗಳು ತಾಯ್ನುಡಿಯ ಅಸ್ಮಿತೆಯನ್ನು ಅರ್ಥ ಮಾಡಿಕೊಳ್ಳದೆ ಇರುವುದು ಈ ನಾಡಿನ ದುರಂತ. ತಾಯ್ನುಡಿಯಲ್ಲಿ ಆರಂಭಿಕ ಶಿಕ್ಷಣವನ್ನು ಪಡೆದ ಮಗುವಿನ ಮುಂದಿನ ಜೀವನ ಅರಳುವುದರಲ್ಲಿ ಅನುಮಾನವೇ ಇಲ್ಲವೆಂಬುದು ಈಗಾಗಲೇ ಸಾಬೀತಾಗಿದೆ. ಅದನ್ನು ಅರ್ಥ ಮಾಡಿಕೊಳ್ಳುವ ಹೃದಯ ಆಳುವವ ರಿಗೆ ಇರಬೇಕಷ್ಟೇ. ಆರಂಭಿಕ ಹಂತದಲ್ಲೇ ಹೆಚ್ಚು ಭಾಷೆಗಳನ್ನು ಎಳೆಯ ಮನಸ್ಸು ಗಳ ಮೇಲೆ ಹೇರುವುದೂ ಬೇಡ. ಅದರಿಂದಾಗುವ ಅನಾಹುತಗಳನ್ನು ನಾವು ಕಂಡು ಅನುಭವಿಸುತ್ತಿದ್ದೇವೆ.

-ವಾಸಣ್ಣ, ಧಾರವಾಡ

ಸ್ಥಳೀಯ ಸಂಸ್ಕೃತಿ ಅಳಿಸಿ ಅಭಿವೃದ್ಧಿ ಸಲ್ಲ

ನಿಕೋಬಾರ್ ದ್ವೀಪಗಳ ದಕ್ಷಿಣದ ತುತ್ತತುದಿಯನ್ನು ಕೇಂದ್ರವಾಗಿಟ್ಟುಕೊಂಡು ಕೇಂದ್ರ ಸರ್ಕಾರವು ಬೃಹತ್ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಕೈಗೆತ್ತಿ ಕೊಂಡಿದೆ. ‘ಗ್ರೇಟ್ ನಿಕೋಬಾರ್ ಅಭಿವೃದ್ಧಿ ಯೋಜನೆ’ಯು ಆ ದ್ವೀಪದ ಪ್ರಾಕೃತಿಕಹಾಗೂ ಸಾಂಸ್ಕೃತಿಕ ಅನನ್ಯತೆಗೆ ಧಕ್ಕೆ ತರುವಂತಹದ್ದು. ಸ್ಥಳೀಯ ಜೀವಸಂಕುಲ ಗಳನ್ನು ಹೊಂದಿರುವ ಈ ದ್ವೀಪಪ್ರದೇಶ, ಬುಡಕಟ್ಟು ಸಂಸ್ಕೃತಿಯ ಮಹತ್ವವನ್ನೂ ಹೊಂದಿದೆ. ಆಧುನಿಕತೆ ಅಥವಾ ಅಭಿವೃದ್ಧಿ ಹೆಸರಿನಲ್ಲಿ ನಿಕೋಬಾರ್ನ ಪಾರಂಪ ರಿಕ ಪರಿಸರ ವ್ಯವಸ್ಥೆಯನ್ನು ಬಲಿಕೊಡುವುದು ಸರಿಯಲ್ಲ. ಅದು ನೈತಿಕವೂ ಅಲ್ಲ. ನಿಕೋಬಾರ್ನ ಶಾಂತ ಪ್ರದೇಶದ ನೆಮ್ಮದಿ ಅಭಿವೃದ್ಧಿ ಹೆಸರಲ್ಲಿ ಹಾಳಾಗಬಾರದು.

- ಸತೀಶ ಉಪ್ಪಾರ, ಅಥಣಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.