ಶುಕ್ರವಾರ, ಮೇ 14, 2021
25 °C

ಹಿಂದಿನ ಉಲ್ಲಂಘನೆಯನ್ನೂ ಪರಿಗಣಿಸಿ

ವಾಚಕರ ವಾಣಿ Updated:

ಅಕ್ಷರ ಗಾತ್ರ : | |

ಕೋವಿಡ್‌ ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಸಾಂಕ್ರಾಮಿಕ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಪೊಲೀಸ್‌ ಇಲಾಖೆಗೆ ಹೈಕೋರ್ಟ್‌ ಆದೇಶಿಸಿರುವುದು ಸರಿಯಾಗಿದೆ. ರಾಜಕಾರಣಿಗಳು, ಧಾರ್ಮಿಕ ಮುಖಂಡರು ನಿಯಮ ಪಾಲಿಸುವ ಮೂಲಕ ಜನಸಾಮಾನ್ಯರಿಗೆ ಮಾದರಿಯಾಗಬೇಕಿತ್ತು. ಅವರೇ ಮಾರ್ಗಸೂಚಿಗಳನ್ನು ಉಲ್ಲಂಘಿಸುತ್ತಿರುವುದು ಸರಿಯಲ್ಲ. ಹೀಗಾಗಿ ಅಂತಹ ಗಣ್ಯರ ವಿರುದ್ಧ ತ್ವರಿತವಾಗಿ ಕ್ರಮ ಜರುಗಿಸಿ ಎಂದು ಹೇಳಿರುವುದು ಸ್ವಾಗತಾರ್ಹ. ಇನ್ನು ಮೇಲೆ ಇಂತಹ ತಪ್ಪೆಸಗುವ ಗಣ್ಯರ ವಿರುದ್ಧ ಇಲಾಖೆಯು ಯಾವ ಹಿಂಜರಿಕೆಯೂ ಇಲ್ಲದೆ ಕ್ರಮ ಜರುಗಿಸಿ ಕರ್ತವ್ಯಪ್ರಜ್ಞೆ ಮೆರೆಯುತ್ತದೆ ಎಂದು ನಂಬಬಹುದೇನೋ.

ಗಣ್ಯ ವ್ಯಕ್ತಿಗಳು ಕಾನೂನನ್ನು ಉಲ್ಲಂಘಿಸಿದಾಗ ತಮ್ಮ ಸ್ಥಾನಾರ್ಹತೆಗೆ ಎರವಾಗಿ, ಕಾನೂನಿನ ದೃಷ್ಟಿಯಲ್ಲಿ ತಪ್ಪಿತಸ್ಥ ಅಥವಾ ಆರೋಪಿ ಎಂದಾಗುತ್ತಾರೆ. ಆಗ ಕೆಳಹಂತದ ಪೊಲೀಸ್‌ ಅಧಿಕಾರಿ ಕೂಡ ಅವರ ವಿರುದ್ಧ ಕ್ರಮ ಕೈಗೊಳ್ಳುವುದು ಸಾಧ್ಯವಾಗುತ್ತದೆ. ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯನ್ನು ಉಲ್ಲಂಘಿಸಿ ಸಭೆ– ಸಮಾರಂಭಗಳನ್ನು ಈಗಾಗಲೇ ನಡೆಸಿರುವ ಪ್ರತಿಷ್ಠಿತರ ವಿರುದ್ಧವೂ ಕ್ರಮ ಜರುಗುವಂತಾದರೆ ಸಾಮಾನ್ಯ ಜನ ಸಹ ಎಚ್ಚೆತ್ತುಕೊಳ್ಳುತ್ತಾರೆ.

- ಸಾಮಗ ದತ್ತಾತ್ರಿ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.