ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಲಕರ ಪಾಲಿನ ದೇವರಿಗೆ ಈ ಸ್ಥಿತಿಯೇ?

ಅಕ್ಷರ ಗಾತ್ರ

ಚಾಲಕರ ಪಾಲಿನ ದೇವರಿಗೆ ಈ ಸ್ಥಿತಿಯೇ?

ಸಾರಿಗೆ ನೌಕರರು ಮುಷ್ಕರನಿರತರಾಗಿರುವ ಸಂದರ್ಭದಲ್ಲಿ, ಅವರಿಗೆ ಅನ್ನ ನೀಡುವ, ಅವರ ಕುಟುಂಬವನ್ನು ಸಲಹುವ ಬಸ್‌ಗೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿರುವುದನ್ನು ತಿಳಿದು (ಪ್ರ.ವಾ., ಏ. 9) ಮನ ಕಲಕಿತು. ಬಹುತೇಕ ಚಾಲಕರ ಪಾಲಿಗೆ ಬಸ್‌ ದೇವರು ಇದ್ದ ಹಾಗೆ. ಬೆಳಿಗ್ಗೆ ಮುಕ್ತ ಮನಸ್ಸಿನಿಂದ ಕಸ ಸ್ವಚ್ಛಗೊಳಿಸಿ ನೀರು ಚಿಮುಕಿಸಿ ಹೂವಿನ ಮಾಲೆ ತೊಡಿಸಿ ಊದುಬತ್ತಿ ಬೆಳಗಿ ಕೈಮುಗಿದ ನಂತರವೇ ಪ್ರಯಾಣಿಕರನ್ನು ಬಸ್ಸಿನ ಒಳಗೆ ಹತ್ತಿಸಿಕೊಳ್ಳುವುದನ್ನು ಗಮನಿಸಿದ್ದೇನೆ. ಈ ಸಂಪ್ರದಾಯವನ್ನು ಬಹುತೇಕ ಚಾಲಕರು ಉಳಿಸಿಕೊಂಡು ಬಂದಿದ್ದಾರೆ. ಅಂಥ ಬಸ್‌ಗೆ ಕಲ್ಲು ಹೊಡೆಯುವವರೂ ಇದ್ದಾರೆ ಎಂಬುದನ್ನು ಕಲ್ಪಿಸಿಕೊಳ್ಳುವುದಕ್ಕೆ ಕಷ್ಟವಾಗುತ್ತದೆ.

ಪ್ರತಿಭಟನೆ ಯಾವುದೇ ಇರಲಿ, ಪ್ರತಿಭಟಿಸುವವರ ಆಕ್ರೋಶಕ್ಕೆ ಮೊದಲು ಗುರಿಯಾಗುವುದು ಸರ್ಕಾರಿ ಸ್ವಾಮ್ಯದ ಸಾರಿಗೆ ನಿಗಮಗಳ ಬಸ್‌ಗಳು. ಕಲ್ಲು ಹೊಡೆಯುವುದು, ಬೆಂಕಿ ಹಚ್ಚುವುದು ಸಾಮಾನ್ಯ. ಹೀಗೆ ಮಾಡಿದರೆ ಮಾತ್ರ ಪ್ರತಿಭಟನೆಗೆ ಅರ್ಥ ಬರುತ್ತದೆ ಎಂದೇ ಕೆಲವರು ತಿಳಿದಿರುತ್ತಾರೆ. ಬಸ್‌ಗಳಿಗೆ ಹಾನಿ ಮಾಡಿದರೆ ಯಾರಿಗೆ ನಷ್ಟ ಅಥವಾ ಲಾಭ ಎಂಬುದರ ಬಗ್ಗೆ ಕಿಡಿಗೇಡಿಗಳು ಆಲೋಚಿಸಲಿ.

- ನಾರಾಯಣರಾವ ಕುಲಕರ್ಣಿ, ಹಿರೇಅರಳಿಹಳ್ಳಿ, ಯಲಬುರ್ಗಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT