ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಷ್ಕ್ರಿಯ ಘಟಕಗಳು ಪುನಶ್ಚೇತನಗೊಳ್ಳಲಿ

ಅಕ್ಷರ ಗಾತ್ರ

ಹಸಿ ಕಸದಿಂದ ಸಾಂದ್ರೀಕೃತ ಜೈವಿಕ ಅನಿಲ ಉತ್ಪಾದಿಸುವ ಸ್ಥಾವರ ಸ್ಥಾಪಿಸಲು ಗ್ಯಾಸ್ ಅಥಾರಿಟಿ ಆಫ್‌ ಇಂಡಿಯಾ ಸಂಸ್ಥೆಯು (ಗೇಲ್‌) ಬಿಬಿಎಂಪಿ ಜೊತೆ ಕೈಜೋಡಿಸಲಿದೆ ಎಂದು ವರದಿಯಾಗಿದೆ (ಪ್ರ.ವಾ., ಏ. 13). ಬಿಬಿಎಂಪಿ ಈಗಾಗಲೇ ಸ್ಥಾಪಿಸಿರುವ ಜೈವಿಕ ಅನಿಲ ಉತ್ಪಾದನಾ ಘಟಕಗಳು ಕೆಲಸ ನಿರ್ವಹಿಸದೇ ತುಕ್ಕು ಹಿಡಿಯುತ್ತಿವೆ. ಈ ಬಗ್ಗೆ ತನಿಖೆ, ಅಧ್ಯಯನ ನಡೆಸಿ ಸರಿಯಾದ ಮಾರ್ಗ ರೂಪಿಸಿ, ಅವು ಕೆಲಸ ನಿರ್ವಹಿಸುವಂತೆ ಮಾಡಬೇಕಾಗಿದೆ.

ಹೊಸ ಘಟಕ ಸ್ಥಾಪಿಸುವ ಬದಲು ಹಾಲಿ ನಿಷ್ಕ್ರಿಯವಾಗಿರುವ ಘಟಕಗಳನ್ನು ಗೇಲ್‌ಗೆ ನೀಡಿ ಅನಿಲ ಉತ್ಪಾದನೆ ಆಗುವಂತೆ ನೋಡಿಕೊಳ್ಳುವುದು ಒಳ್ಳೆಯದು.

- ಡಾ. ಎಚ್.ಆರ್.ಪ್ರಕಾಶ್, ಮಂಡ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT