ಸೋಮವಾರ, ಮಾರ್ಚ್ 30, 2020
19 °C

ಎಚ್ಚರ ವಹಿಸಿ, ಸವಾಲು ಎದುರಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

21 ದಿನ ದೇಶವನ್ನು ‘ಬಂದ್‌’ ಮಾಡಿರುವುದು ಸರಿಯಾದ ನಿರ್ಧಾರ. ಆದರೆ ಅದನ್ನು ಅನುಷ್ಠಾನ ಮಾಡುವ ಸವಾಲನ್ನು ಅತ್ಯಂತ ಕಾಳಜಿಯಿಂದ ಎದುರಿಸಬೇಕಾಗುತ್ತದೆ. ವ್ಯವಸಾಯದ ಚಟುವಟಿಕೆ ನಡೆಯದಿದ್ದರೆ ಮುಂದಿನ ಸಾಲಿನ ಬೆಳೆಯೇ ನಾಶವಾಗುತ್ತದೆ. ಉದ್ಯೋಗ ಖಾತರಿ ಯೋಜನೆಯಡಿ ಮುಂಗಡ ಹಣ ಕೊಡುವುದು, ಕಟ್ಟಡ ಕಾರ್ಮಿಕರಿಗೆ ಒಂದಷ್ಟು ಹಣಸಹಾಯ ಮಾಡುವುದು ಸರಿ ಯಾದ ಕ್ರಮ. ಆದರೆ ನೋಂದಣಿ ಮಾಡಿಕೊಳ್ಳದ ಅಸಂಘಟಿತ ವಲಯದ ಕಾರ್ಮಿಕರ ಬಗ್ಗೆಯೂ ಗಮನಹರಿಸಬೇಕಾಗಿದೆ.

ಕೊಳೆಗೇರಿಯಲ್ಲಿ ಜನದಟ್ಟಣೆ ಕಡಿಮೆ ಮಾಡಲು ಚಿಕ್ಕ ಮಕ್ಕಳು ಹಾಗೂ ವೃದ್ಧರಿಗೆ ಇತರೆಡೆ ತಾತ್ಕಾಲಿಕ ವಸತಿ ವ್ಯವಸ್ಥೆ ಮಾಡಬೇಕು. ಎಲ್ಲರೂ ಮನೆಯಲ್ಲಿ ಇದ್ದರೆ ವಿದ್ಯುತ್ ಬಳಕೆ ಜಾಸ್ತಿ ಆಗುತ್ತದೆ. ಕಾರ್ಖಾನೆಗಳ ಚಟುವಟಿಕೆ ನಿಂತಿರುವ ಕಾರಣ, ಆ ವಿದ್ಯುತ್ ಅನ್ನು ಮನೆ ಬಳಕೆಗೆ ಕೊಟ್ಟು, ವಿದ್ಯುತ್‌ ಕಡಿತ ಆಗದಂತೆ ನೋಡಿಕೊಳ್ಳಬೇಕು. ನಿರ್ಗತಿಕರಿಗೆ ಬಸ್ಸು ಅಥವಾ ರೈಲು ನಿಲ್ದಾಣಗಳ ಪ್ರಯಾಣಿಕರ ವಿಶ್ರಾಂತಿ ಕೋಣೆಗಳಲ್ಲಿ ಜಾಗ ಕೊಟ್ಟು, ಊಟದ ವ್ಯವಸ್ಥೆ ಮಾಡಬೇಕು. ಇಂಟರ್ನೆಟ್ ಉಚಿತವಾಗಿ ಕೊಡುವುದು, ಉಚಿತ ಇ- ಪುಸ್ತಕಗಳನ್ನು ಬಿಡುಗಡೆ ಮಾಡುವುದರಿಂದ, ಮನೆಯಲ್ಲಿ ಕಾಲ ಕಳೆಯು ವವರಿಗೆ ಅನುಕೂಲವಾಗುತ್ತದೆ. ಮನೆಯಲ್ಲೇ ಚಟುವಟಿಕೆ ಯಿಂದ ಹೇಗೆ ಇರಬಹುದು ಎನ್ನುವುದರ ಬಗ್ಗೆ ಜಾಗೃತಿ ಬೇಕು. ಇದಕ್ಕೆ ಪೂರಕವಾಗಿ, ಕರಕುಶಲ, ಚಿತ್ರ, ಕಥೆ, ಕವನ ಇತ್ಯಾದಿ ಬಹುಮಾನಸಹಿತ ಸ್ಪರ್ಧಾ ಚಟುವಟಿಕೆಗಳನ್ನು ಘೋಷಿಸಬೇಕು.

ಕೃಷಿಕ ಎ.ವಿ., ಶೃಂಗೇರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)