ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಕನ್ನಡದ ಹರಿಕಾರನ ನಿರ್ಲಕ್ಷ್ಯ ಸಲ್ಲದು

ಅಕ್ಷರ ಗಾತ್ರ

ಮೊನ್ನೆ ಭಾನುವಾರ ಹಾವೇರಿ ಜಿಲ್ಲೆಯ ಗಳಗನಾಥ ಮತ್ತು ಚೌಡದಾನಪುರ ಕ್ಷೇತ್ರಗಳ ದರ್ಶನ ಮಾಡಿದೆವು. ಚೌಡದಾನಪುರದಲ್ಲಿ ಶ್ರೀ ಮುಕ್ತಿನಾಥೇಶ್ವರ ಮತ್ತು ಗಳಗನಾಥದಲ್ಲಿ ಶ್ರೀ ಗಳಗೇಶ್ವರ ದೇವರ, ಚಾಲುಕ್ಯರ ಕಾಲದಲ್ಲಿ ನಿರ್ಮಿಸಿದ ಸುಂದರ ದೇವಾಲಯಗಳಿವೆ. ಈ ಗುಡಿಗಳಲ್ಲಿ ಚಿತ್ತಾಕರ್ಷಕ ಮೂರ್ತಿಗಳು, ಕುಸುರಿ ಕೆತ್ತನೆಯ ಕೌಶಲ ಬಹಳ ಶ್ರೀಮಂತವಾಗಿವೆ. ಆದರೆ ಇಂಥ ಸುಂದರ ಶಿಲ್ಪಕಲೆಯ ವಿವರಣೆ ನೀಡಲು ಯಾವ ಗೈಡ್ ಇಲ್ಲಿಲ್ಲ ಅಥವಾ ಸ್ಥಳ ಪುರಾಣದ ಪುಸ್ತಕಗಳಿಲ್ಲ. ಸುಮ್ಮನೆ ನೋಡಿ ಒಂದೆರಡು ಫೋಟೊ ಕ್ಲಿಕ್ಕಿಸಿಕೊಂಡು ಬಂದೆವು.

ಆದರೆ ದುಃಖದ ಸಂಗತಿ ಎಂದರೆ, ಪಂಡಿತ ಗಳಗನಾಥರ ಕುರಿತು ಈ ಗ್ರಾಮದಲ್ಲಿ ಒಂದು ಪ್ರತಿಮೆಯೂ ನಮಗೆ ಕಾಣಿಸಲಿಲ್ಲ. ಗಳಗನಾಥರು ಕನ್ನಡದ ಮೊದಲ ಕಾದಂಬರಿಕಾರರು! ತಾವೇ ಬರೆದು, ಮುದ್ರಿಸಿದ ಪುಸ್ತಕಗಳನ್ನು ತಲೆಯ ಮೇಲೆ ಹೊತ್ತು ಕಾಲ್ನಡಿಗೆಯಲ್ಲಿ ಊರೂರು ಅಲೆದು ಪುಸ್ತಕಗಳನ್ನು ಮಾರಿದರು ಎಂದು ಕೇಳಿದ್ದೇವೆ. ಅದು ಕೂಡ 1914ರಲ್ಲಿ! ‘ಧರ್ಮ ರಹಸ್ಯ’ ಎಂಬ ಅವರ ಗ್ರಂಥವು ಬುದ್ಧನ ಕಾಲಕ್ಕೆ ಸಂಬಂಧಿಸಿದೆ.

ಕನ್ನಡದ ಅಂಥ ಹರಿಕಾರ ಇಂದು ಎಂಥ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ ಎಂಬುದನ್ನು ನೋಡಿದರೆ ಬೇಸರವಾಗುತ್ತದೆ. ಇಂದು ಹಾವೇರಿ ಜಿಲ್ಲೆಯಲ್ಲಿ ಅವರ ನೆನಪೂ ಇಲ್ಲದಂತಾಗಿದೆ. ನಮ್ಮ ಸಾಹಿತ್ಯ ಪರಿಷತ್ತು ಇತ್ತ ಗಮನಹರಿಸಿ ಅವರ ಕೊಡುಗೆ ಏನು ಎಂಬುದನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕು. ಜನಪ್ರತಿನಿಧಿಗಳೂ ಮನಸ್ಸು ಮಾಡಿ, ತಮ್ಮ ಜಿಲ್ಲೆಗೆ ಸೇರಿದ ಗಳಗನಾಥರಂಥ ಮಹಾತ್ಮರ ಕೊಡುಗೆಯನ್ನು ಇಂದಿನ ಯುವಪೀಳಿಗೆಗೆ ತಿಳಿಸಲು ಮುಂದಾಗಬೇಕು.

–ಮುರುಗೇಶ್ ಹನಗೋಡಿಮಠ, ಬ್ಯಾಡಗಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT