ವಿಧಾನಸೌಧವು ‘ಯಜ್ಞಕುಂಡ’ ಆಗದಿರಲಿ

ಡಿ.ಕೆ. ಶಿವಕುಮಾರ್ ಅವರು ಅಧಿಕಾರ ಪಡೆಯಲು ಆವೇಶಕ್ಕೆ ಒಳಗಾಗಲಿಲ್ಲ. ತಾಳ್ಮೆಯಿಂದ ವರ್ತಿಸಿದ್ದರಿಂದ ಗೆಲುವು ಸಂದಿದೆ. ಸಿದ್ದರಾಮಯ್ಯನವರಿಗೂ ಗೌರವಯುತ ವಿದಾಯ ಸಿಕ್ಕಿದೆ. ಹೈಡ್ರಾಮಾ ಇಲ್ಲದೆ ಅಧಿಕಾರದ ತ್ಯಾಗ ಆಗಿದೆ. ಹೈಕಮಾಂಡ್ ಹೇಳಿದಂತೆ ಎಲ್ಲರೂ ನಡೆದುಕೊಂಡಿದ್ದಾರೆ. ಡಿಕೆಶಿಗೆ ರಾಜಕೀಯ, ಸಂಘಟನೆ, ಸಚಿವರಾಗಿ ಅಧಿಕಾರ ನಿಭಾಯಿಸಿರುವ ಅನುಭವವಿದೆ. ಆದರೆ, ಅವರ ನಂಬಿಕೆಗಳು ಸರ್ಕಾರದ ನೀತಿಗೆ ಅಡ್ಡಿಬಾರದಿದ್ದರೆ ಸಾಕು. ಬೇರೊಬ್ಬರು ಅವರ ನಂಬಿಕೆಗಳನ್ನು ವಿಜೃಂಭಿಸಿ ಅವರ ಘನತೆಗೆ ಚ್ಯುತಿ ತಾರದಿರಲಿ. ಈಗಾಗಲೇ ಪುರೋಹಿತರು, ಜ್ಯೋತಿಷಿಗಳು ಕುಂಕುಮಧಾರಿಗಳಾಗಿ ಹೊಸ ಶಾಲು ಹೊದ್ದುಕೊಂಡು ಪೂಜೆ, ಯಜ್ಞಯಾಗಾದಿಗೆ ಸಿದ್ಧರಾಗಿದ್ದಾರೆ. ವಿಧಾನಸೌಧವನ್ನು ‘ಯಜ್ಞಕುಂಡ’ ಮಾಡಬೇಡಿ; ಸರ್ಕಾರಿ ಕಚೇರಿಯಲ್ಲಿ ಮೌಢ್ಯ ಬೇಡ. ಸಂವಿಧಾನವೇ ನಿಮ್ಮ ದೇವರಾಗಲಿ. ಸರ್ವರ ಒಳಿತಿಗೆ ಪ್ರಜಾಪ್ರಭುತ್ವ ಉಸಿರಾಗಲಿ.

⇒ಆರ್.ಜಿ. ಹಳ್ಳಿ ನಾಗರಾಜ, ಬೆಂಗಳೂರು

ಜನತಂತ್ರಕ್ಕೆ ‘ಪುತ್ರ ವ್ಯಾಮೋಹ’ದ ಮೈಲಿಗೆ

ಸಿದ್ದರಾಮಯ್ಯನವರು ತಮ್ಮ ಪುತ್ರ ಯತೀಂದ್ರರ ‘ರಾಜಕೀಯ ಪದೋನ್ನತಿ’ಗಾಗಿ ಹೈಕಮಾಂಡ್ ಬೆಂಬಲ ಕೋರಿದ್ದಾರೆ. ಇದು ಅವರ ಘನತೆಗೆ ತಕ್ಕುದಲ್ಲದ ನಡೆ. ಸುದೀರ್ಘವಾಗಿ ರಾಜಕೀಯದಲ್ಲಿದ್ದರೂ ಮಗನಿಗಾಗಿ ಲಾಬಿ ಮಾಡಿದರು ಎಂಬ ಸುದ್ದಿಯು ಅವರ ಅಭಿಮಾನಿಗಳಿಗೆ ಕಸಿವಿಸಿ ಉಂಟುಮಾಡಿದೆ. ಕಳೆದ ಮೂರ್ನಾಲ್ಕು ದಶಕಗಳಿಂದ ರಾಜ್ಯ ರಾಜಕಾರಣದಲ್ಲಿ ಪ್ರಭಾವ ಬೀರಿದ ಪ್ರಮುಖ
ರೆಂದರೆ ಎಚ್.ಡಿ. ದೇವೇಗೌಡ, ಬಿ.ಎಸ್. ಯಡಿಯೂರಪ್ಪ ಹಾಗೂ ಸಿದ್ದರಾಮಯ್ಯ. ದೇವೇಗೌಡರ ಕುಟುಂಬ ಪ್ರೀತಿ ಜನಜನಿತ; ಯಡಿಯೂರಪ್ಪನವರು ಮಕ್ಕಳ ಕೈಗೊಂಬೆಯಾದರು. ಇವರಿಬ್ಬರಿಗೆ ಹೋಲಿಸಿದರೆ ಸಿದ್ದರಾಮಯ್ಯನವರು ಪುತ್ರ ಪ್ರೇಮದ ವಿಷಯದಲ್ಲಿ ಅವರಿಬ್ಬರಷ್ಟು ಟೀಕೆಗೆ ಗುರಿಯಾಗಿರಲಿಲ್ಲ. ಈಗ ಅವರದು ‘ಕಡಿಮೆ ಕುಟುಂಬ ಪ್ರೀತಿ’ ಎಂದು ಜನತೆ ಸಮಾಧಾನಪಡುವ ಸ್ಥಿತಿ ಬಂದಿದೆ.

⇒ಟಿ. ಜಯರಾಂ, ಕೋಲಾರ

ಕೋರ್ಸ್ ರದ್ದು: ಖಾಸಗಿ ಕಾಲೇಜಿಗೆ ವರ

ಆರ್ಥಿಕ ಹೊರೆ ತಗ್ಗಿಸಲು ಕಾಲೇಜು ಶಿಕ್ಷಣ ಇಲಾಖೆಯು ಸರ್ಕಾರಿ ಪದವಿ ಕಾಲೇಜುಗಳಲ್ಲಿ 458 ಕೋರ್ಸ್ ರದ್ದುಪಡಿಸಿದೆ. ಇದು ಖಾಸಗಿ ಕಾಲೇಜುಗಳಿಗೆ ವರದಾನವಾಗಲಿದೆ. ಮತ್ತೊಂದೆಡೆ ಬಡ, ಮಧ್ಯಮವರ್ಗದ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಲಿದೆ. ಏಕಾಏಕಿ ರದ್ದು ಮಾಡದೆ ವಿದ್ಯಾರ್ಥಿಗಳು ಸೇರಿಕೊಂಡ ಕಾಲೇಜುಗಳಲ್ಲಿ ಆ ಕೋರ್ಸ್ ನಡೆಯುವಂತೆ ನೋಡಿಕೊಳ್ಳುವ
ಅಥವಾ ಲಭ್ಯ ವಿದ್ಯಾರ್ಥಿಗಳು ಇಲ್ಲದಿದ್ದರೆ ಹತ್ತಿರದ ಕಾಲೇಜುಗಳಿಗೆ ವರ್ಗಾಯಿ
ಸುವ ಜವಾಬ್ದಾರಿಯನ್ನು ಇಲಾಖೆಯೇ ಹೊರಬೇಕಿದೆ. ವಿದ್ಯಾರ್ಥಿಗಳ ಪ್ರವೇಶಾತಿ
ಕಡಿಮೆ ಆಗುತ್ತಿರುವುದಕ್ಕೆ ಪೂರ್ಣಾವಧಿ ಅಧ್ಯಾಪಕರಿಗೆ ಆಗಿ ಉಳಿಯುವ ಬೋಧನಾ ಕಾರ್ಯಕ್ಕೆ ಅತಿಥಿ ಉಪನ್ಯಾಸಕರನ್ನು ಸಕಾಲದಲ್ಲಿ ನೇಮಿಸಿಕೊಳ್ಳದಿರು
ವುದೇ ಕಾರಣ. ಜೊತೆಗೆ, ಶೈಕ್ಷಣಿಕ ಅವಧಿ ಮುಗಿಯುವ ಮೊದಲೇ ಅವರನ್ನು ಕೆಲಸದಿಂದ ಕೈಬಿಟ್ಟು ಆ ಹೊರೆಯನ್ನು ಪೂರ್ಣಾವಧಿ ಅಧ್ಯಾಪಕರಿಗೆ ಹೊರಿಸುತ್ತಿ
ದ್ದಾರೆ. ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಿದೆ.

⇒ಸಂಪತ್ ಬೆಟ್ಟಗೆರೆ, ಮೂಡಿಗೆರೆ

ದಲಿತ ಸಿ.ಎಂ ಪಟ್ಟ: ಗಾಳ ನುಂಗಿದ ಮೀನು

‘ರಾಜಕಾರಣದಲ್ಲಿಯೂ ಅಸ್ಪೃಶ್ಯತೆ!’ ಲೇಖನವು (ಲೇ: ರವೀಂದ್ರ ಭಟ್ಟ,
ಪ್ರ.ವಾ., ಮೇ 29) ಸಕಾಲಿಕವಾಗಿದೆ. ಭಾರತದ ರಾಜಕಾರಣಿಗಳ ಆತ್ಮಸಾಕ್ಷಿಯನ್ನು ಈ ಬರಹ ಕೆಣಕುವಂತಿದೆ. ಈ ದೇಶದ ಪಕ್ಷ ರಾಜಕಾರಣದ ಧುರೀಣರು ಅನಿಸಿಕೊಂಡವರಿಗೆ ಇದನ್ನು ಓದಿ ಒಂದಿಷ್ಟಾದರೂ ಮುಜುಗರವಾಗಬೇಕು.

ಭಾರತ ಈ ಹೊತ್ತಿಗೂ ಸ್ಪೃಶ್ಯ ಭಾರತ, ಅಸ್ಪೃಶ್ಯ ಭಾರತವೇ ಆಗಿದೆ. ಕಾಂಗ್ರೆಸ್ ನಲ್ಲಿ ನೆಹರೂ ಕಾಲದಿಂದ ಕೇಳಲಿ ಬಿಡಲಿ ಆ ಪಕ್ಷಕ್ಕೆ ದಲಿತರು ನಿಷ್ಠೆಯಿಂದ ನಡೆದುಕೊಂಡು ಬಂದಿದ್ದಾರೆ. ಆದರೆ, ಎಂಟು ದಶಕ ಕಳೆದರೂ ಕರ್ನಾಟಕಕ್ಕೆ ದಲಿತ ಸಮುದಾಯದಿಂದ ಒಬ್ಬರನ್ನೂ ಮುಖ್ಯಮಂತ್ರಿ ಮಾಡಲಿಲ್ಲ ಎನ್ನುವುದು ಪ್ರಜಾಪ್ರಭುತ್ವದ ಸೌಂದರ್ಯಕ್ಕೆ ಕಪ್ಪುಚುಕ್ಕೆಯೋ ಊನವೋ ಧಕ್ಕೆಯೋ ಎನ್ನುವುದನ್ನು ವಿವೇಕವಂತರು ತಿಳಿಯಬೇಕು. ಸ್ವಾತಂತ್ರ್ಯಾನಂತರ ಸಂವಿಧಾನ ಎನ್ನುವುದು ಈ ದೇಶದ ಜನಸಾಮಾನ್ಯರು ಅದರಲ್ಲೂ ಶೋಷಿತರು, ಅಸ್ಪೃಶ್ಯರಿಗೆ ಉಸಿರಾಡುವ ಉಸಿರೇ ಆಗಿದೆ. ಅಂಬೇಡ್ಕರ್ ಎಂಬ ಅಸಮಾನ್ಯ ಅರಿವಿನ ಅಂತಃಕರಣದ ಮನುಷ್ಯರೊಬ್ಬರೂ, ಈ ದೇಶದ ಜನ ತನ್ನಂತೆ ಇರುವವರನ್ನು ಕಣ್ಣುಬಿಟ್ಟು ನೋಡುತ್ತಾರೆ ಅನ್ನಿಸಿತ್ತು. ಆದರೆ, ಈ ಹೊತ್ತಿಗೂ ಇವರ ಕಣ್ಣುಗಳಲ್ಲೇ ಅಸ್ಪೃಶ್ಯತೆ ಎದ್ದು ಕಾಣಿಸುತ್ತಿದೆ ಎನ್ನುವುದನ್ನು ಲೇಖನ ತೆರೆದಿಟ್ಟಿದೆ. ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಆಗಲಿ ಆ ಪಕ್ಷದ ಪಂಚಾಂಗದಲ್ಲಿ ಸಂವಿಧಾನದ ಮಕ್ಕಳಿಗೆ ಅರ್ಥಾತ್ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ಇಲ್ಲ ಎಂದು ವಿಧಾನಸೌಧದ ಮುಂದೆ
ದೊಡ್ಡದಾಗಿ ಅಂಬೇಡ್ಕರ್ಗೆ ಕಾಣಿಸುವಂತೆ ಬರೆದು ಹಾಕಿದರೆ ನಾವು ಕಾಯು
ವಂತೆಯೂ ಇಲ್ಲ; ನೋಯುವಂತೆಯೂ ಇಲ್ಲ.

⇒ಸುಬ್ಬು ಹೊಲೆಯಾರ್, ಬೆಂಗಳೂರು

ರಾಜಕೀಯದ ಆಟ: ಜನಹಿತ ಗೌಣ

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಡಿ.ಕೆ. ಶಿವಕುಮಾರ್ ಆಯ್ಕೆಯಾಗಿದ್ದಾರೆ. ರಾಜ್ಯದಲ್ಲಿರುವ ಹಲವಾರು ಸಮಸ್ಯೆಗಳ ನಡುವೆ ಈಗ ‘ಕೈ’ ನಾಯಕರ ಹೊಸ ಆಟವೂ ಶುರುವಾಗಿದೆ. ಎಲ್ಲಾ ಸಮುದಾಯದವರು ತಮ್ಮ ನಾಯಕರಿಗೆ ಸಚಿವ ಸ್ಥಾನ, ಡಿಸಿಎಂ ಹುದ್ದೆ, ಕೆಪಿಸಿಸಿ ಅಧ್ಯಕ್ಷಗಿರಿ ಹೀಗೆ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ. ಆದರೆ, ಸಮಸ್ಯೆಗಳ ಬಗ್ಗೆ ಯಾರೊಬ್ಬರೂ ಮಾತನಾಡುತ್ತಿಲ್ಲ. ಕಲ್ಯಾಣ ಕರ್ನಾಟಕದಲ್ಲಿ ಶಿಕ್ಷಣ ವ್ಯವಸ್ಥೆಯು ಹಳ್ಳ ಹಿಡಿದಿದೆ. ಶಿಕ್ಷಕರ ಕೊರತೆ ಹೆಚ್ಚಾಗಿದೆ. ಈ ಬಗ್ಗೆ ಯಾರೊಬ್ಬರು ಧ್ವನಿ ಎತ್ತದಿರುವುದು ದುರಂತ.

ದುರಗಪ್ಪ ಬಂಡೇಭಾವಿ, ಲಿಂಗಸುಗೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.