ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಒಲಿಂಪಿಕ್ಸ್‌: ಕಬಡ್ಡಿ, ಕೊಕ್ಕೊ ಸೇರಲಿ

Last Updated 29 ನವೆಂಬರ್ 2021, 19:30 IST
ಅಕ್ಷರ ಗಾತ್ರ

ಈಚೆಗೆ ಕೊನೆಗೊಂಡ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಒಟ್ಟು 7 ಪದಕಗಳೊಂದಿಗೆ ಭಾರತ 48ನೇ ಸ್ಥಾನ ಪಡೆದುದು ನಮಗೆ ತಿಳಿದ ಸಂಗತಿ. ಭವಿಷ್ಯದಲ್ಲಿ ಭಾರತದ ಪದಕ ಬೇಟೆಯನ್ನು ಹೆಚ್ಚಿಸಬೇಕಿದ್ದರೆ ದೇಶದ ನೆಚ್ಚಿನ ಕ್ರೀಡೆಗಳಾದ ಕಬಡ್ಡಿ, ಕೊಕ್ಕೊ, ಚೆಸ್‌, ಬಿಲಿಯರ್ಡ್ಸ್‌, ಸ್ನೂಕರ್‌ ನಂತಹ ಕ್ರೀಡೆಗಳನ್ನೂ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಗೊಳ್ಳುವಂತೆ ಮಾಡಬೇಕು. ಇದು ಸಾಧ್ಯವಾಗಬೇಕಿದ್ದರೆ ಒಟ್ಟು 40 ದೇಶಗಳ ಕ್ರೀಡಾ ಸಚಿವರು ಒಮ್ಮತದ ಅಭಿಪ್ರಾಯ ನೀಡಿ, ಈ ಕ್ರೀಡೆಗಳನ್ನು ಒಲಿಂಪಿಕ್ಸ್‌ನಲ್ಲಿ ಸೇರಿಸಬೇಕು ಎಂದು ಮನವಿ ಸಲ್ಲಿಸಬೇಕು. ಹೀಗೆ ಮಾಡಿದಾಗ ಈ ಕ್ರೀಡೆಗಳೂ ಒಲಿಂಪಿಕ್ಸ್‌ನಲ್ಲಿ ಸ್ಥಾನ ಪಡೆಯುತ್ತವೆ.

ಕೇಂದ್ರ ಸರ್ಕಾರ ಇದೀಗ ಈ ದಿಸೆಯಲ್ಲಿ ವಿಶೇಷವಾಗಿ ಚಿಂತನೆ ನಡೆಸಿ, ಸಮಾನಮನಸ್ಕ 40 ದೇಶಗಳ ಸರ್ಕಾರಗಳೊಂದಿಗೆ ಸಂಪರ್ಕ ಸಾಧಿಸಬೇಕು. ದೇಶದ ಜಿಡಿಪಿ ಮಟ್ಟ ಸುಧಾರಿಸುತ್ತಿರು ವುದರಿಂದ ಕ್ರೀಡಾ ಮೂಲಸೌಲಭ್ಯ ಮುಂದಿನ ದಿನಗಳಲ್ಲಿ ಹೆಚ್ಚಬಹುದು, 2050ರ ವೇಳೆಗೆ ಭಾರತದ ಪದಕ ಪಟ್ಟಿಯೂ ಬೆಳೆಯಬಹುದು. ಆದರೆ ತಕ್ಷಣಕ್ಕೆ, ಅಂದರೆ ಮುಂಬರುವ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲೇ ಭಾರತವು ಅತಿ ಹೆಚ್ಚಿನ ಪದಕ ಗಳಿಸಬೇಕು ಎಂದಾದರೆ ದೇಶದ ನೆಚ್ಚಿನ ಕ್ರೀಡೆಗಳನ್ನು ಒಲಿಂಪಿಕ್ಸ್‌ ನಲ್ಲಿ ಸೇರಿಸುವ ಪ್ರಯತ್ನ ನಡೆಸಬೇಕು. ಈ ವಿಷಯದಲ್ಲಿ ಕ್ರೀಡಾಪ್ರೇಮಿಗಳು, ರಾಜ್ಯ ಸರ್ಕಾರಗಳು, ಸಂಘ ಸಂಸ್ಥೆಗಳು ಕೇಂದ್ರದ ಮೇಲೆ ಒತ್ತಡ ಹೇರಲು ಮುಂದಾಗಬೇಕು.

-ಡಾ.ಭೂಪಾಳಂ ಸುನಿಲ್‌, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT