ಶುಕ್ರವಾರ, ಡಿಸೆಂಬರ್ 6, 2019
21 °C

ವಸಂತಕುಮಾರ್ ಪ್ರತಿಕ್ರಿಯೆ: ವಿವೇಕಾನಂದರ ಈ ಸಾಲುಗಳನ್ನು ಗಮನಿಸಲಿ

Published:
Updated:

ಕನಕದಾಸರಿಗೆ ಸಂಬಂಧಿಸಿದ ನನ್ನ ಹೇಳಿಕೆಗೆ ನಾನು ಕೊಟ್ಟ ಸಮರ್ಥನೆಗೆ ‘ಅವೈಜ್ಞಾನಿಕ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ವಿವೇಕಾನಂದರನ್ನು ಎಳೆದು ತಂದಿದ್ದಾರೆ’ ಎಂದು ಟಿ.ಸುರೇಂದ್ರ ರಾವ್ ಪ್ರತಿಕ್ರಿಯಿಸಿದ್ದಾರೆ (ವಾ.ವಾ., ನ.19).

ಅವರು, ವಿವೇಕಾನಂದರ ಕೃತಿಶ್ರೇಣಿ ಸಂಪುಟ 7, (ಪರಿಷ್ಕೃತ 8ನೆಯ ಮುದ್ರಣ- 2012) ಅಧ್ಯಾಯ 26 ‘ಭಾರತದ ಮಹಿಳೆ’, ಪುಟ ಸಂಖ್ಯೆ 155ರಲ್ಲಿ ಇರುವ ‘ಮಗುವಿಗಾಗಿ ಪ್ರಾರ್ಥಿಸಬೇಕು’ ‘ಪ್ರಾರ್ಥನೆಯಿಲ್ಲದೆ ನಿಮ್ಮ ಮಕ್ಕಳು ಪ್ರಪಂಚಕ್ಕೆ ಕಾಲಿಟ್ಟರೆ ಅದೊಂದು ಮಾನವಕೋಟಿಗೆ ಕೊಟ್ಟ ಮಹಾಶಾಪ’ ಎಂಬ ಸಾಲುಗಳನ್ನು ಗಮನಿಸಲಿ. ಜೊತೆಗೆ, ಅವರು ಕೃತಾರ್ಥರಾಗಬೇಕೆಂದರೆ ಎಲ್ಲಾ ಸಂಪುಟಗಳನ್ನು ಅನುಭವಿಸುತ್ತಾ ಓದಲಿ.

ಡಾ. ಬಿ.ವಿ.ವಸಂತಕುಮಾರ್, ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ

 

ಇನ್ನಷ್ಟು...

ಕನಕದಾಸ: ವಸಂತ ಕುಮಾರ್ ಸ್ಪಷ್ಟನೆ 

ಅವೈಜ್ಞಾನಿಕ ಹೇಳಿಕೆಯ ಸಮರ್ಥನೆ

 

 

ಪ್ರತಿಕ್ರಿಯಿಸಿ (+)