ವಾಹನ ನಿಲುಗಡೆ: ಅವೈಜ್ಞಾನಿಕ ನಿಯಮ
ಬೆಂಗಳೂರಿನಲ್ಲಿ ಮನೆ ಬಳಿಯ ರಸ್ತೆಯಲ್ಲಿ ವಾಹನ ನಿಲ್ಲಿಸಿದರೆ ಶುಲ್ಕ ಕಟ್ಟಬೇಕೆಂಬ ನಿಯಮ ಜಾರಿಗೆ ತರಲು ಹೊರಟಿರುವುದು ಜನಸಾಮಾನ್ಯರ ಮೇಲೆ ದೊಡ್ಡ ಹೊರೆಯಾಗಲಿದೆ. ಕೊರೊನಾದಿಂದ ಅನೇಕರು ಉದ್ಯೋಗ ಕಳೆದುಕೊಂಡು ಕುಟುಂಬ ನಿರ್ವಹಣೆಗೆ ಪರದಾಡುತ್ತಿದ್ದಾರೆ.
ಇಂತಹ ಸ್ಥಿತಿಯಲ್ಲಿ ಮನೆ ಮುಂದೆ ವಾಹನ ನಿಲ್ಲಿಸಲೂ ಶುಲ್ಕ ತೆರಬೇಕೆಂದರೆ ಹೇಗೆ? ಪ್ರತಿಯೊಂದು ಮನೆಯಲ್ಲೂ ಅವರು ಬಾಡಿಗೆದಾರರಾಗಿದ್ದರೂ ದ್ವಿಚಕ್ರ ವಾಹನವನ್ನಾದರೂ ಇಟ್ಟುಕೊಂಡಿರುತ್ತಾರೆ. ಮನೆ ಮುಂದಿನ ರಸ್ತೆಗಳಲ್ಲಿ ವಾಹನ ನಿಲ್ಲಿಸುವುದರಿಂದ ತುರ್ತು ವಾಹನಗಳ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣ ನೀಡಲಾಗಿದೆ. ಹಾಗಿದ್ದರೆ ಶುಲ್ಕ ಕಟ್ಟಿ ವಾಹನ ನಿಲ್ಲಿಸಿದಾಗ ಈ ಸಮಸ್ಯೆ ಎದುರಾಗದೇ?
- ಜ್ಯೋತಿ ಭಾಸ್ಕರ್, ಬೆಂಗಳೂರು
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.