ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವೀಪ್’ ಕಾರ್ಯಕ್ರಮ: ಅರ್ಥಪೂರ್ಣವಾಗಿರಲಿ

ಅಕ್ಷರ ಗಾತ್ರ

ಮತದಾನ ಜಾಗೃತಿ ಅಭಿಯಾನದ (ಸ್ವೀಪ್) ಮೂಲ ಉದ್ದೇಶ ಮತದಾನದ ಬಗ್ಗೆ ಅರಿವು ಮೂಡಿಸಿ ಮತದಾರರನ್ನು ಜಾಗೃತಗೊಳಿಸುವುದು. ಇದಕ್ಕಾಗಿ ಸರ್ಕಾರ ದೊಡ್ಡ ಮಟ್ಟದಲ್ಲಿ ಹಣ ವೆಚ್ಚ ಮಾಡುತ್ತಿದೆ. ಕಲೆ, ಸಂಗೀತ, ಕ್ರೀಡೆ ಒಳಗೊಂಡಂತೆ ಸಾಂಸ್ಕೃತಿಕ ಚಟುವಟಿಕೆಗಳ ಹಿನ್ನೆಲೆಯಲ್ಲಿ ಜಾಗೃತಿ ಅಭಿಯಾನ ನಡೆಸಬೇಕು ಎಂಬುದು ಆಯೋಗದ ಆಶಯ. ಆದರೆ, ಕಾರ್ಯಕ್ರಮಗಳನ್ನು ಅರ್ಥಪೂರ್ಣವಾಗಿ ರೂಪಿಸುವ ಬದಲು ಯರ‍್ರಾಬಿರ‍್ರಿ ಕುಣಿತಗಳನ್ನೇ ಇದಕ್ಕಾಗಿ ಬಳಸಿದ ಕೆಲವು ನಿದರ್ಶನಗಳು ಇವೆ.

ಇದರ ನಡುವೆ ಕೆಲವರು ವಿಶಿಷ್ಟವಾಗಿಯೂ ರೂಪಿಸಿದ್ದಾರೆ. ಹಾವೇರಿ ಜಿಲ್ಲೆಯ ಚುನಾವಣಾಧಿಕಾರಿ ಈಚೆಗೆ ಕುರಿಗಾಹಿ ಹನುಮಂತಪ್ಪನವರನ್ನು ರಾಯಭಾರಿ ಆಗಿ ಗುರುತಿಸಿರುವುದು ಅಂತಹುದರಲ್ಲಿ ಒಂದು. ಮಡಿಕೇರಿಯ ಬಸ್ ನಿಲ್ದಾಣದಲ್ಲಿ ಅಳವಡಿಸಲಾಗಿರುವ ಕಲಾತ್ಮಕ ಭಿತ್ತಿಚಿತ್ರಗಳು ಕೂಡ ಸೊಗಸಾಗಿವೆ. ಮತದಾನ ಮಾಡಿದವರಿಗೆ ಮಾತ್ರ ವಸತಿಗೃಹಗಳಲ್ಲಿ ಅಂದು ಕೊಠಡಿಗಳನ್ನು ನೀಡಲಾಗುವುದು ಎಂದು ಕೊಡಗು ಜಿಲ್ಲಾ ವಸತಿ ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ. ಇದೂ ಒಂದು ವಿಭಿನ್ನ ಪ್ರಯತ್ನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT