ಶನಿವಾರ, ಆಗಸ್ಟ್ 24, 2019
23 °C

ಸ್ಮಾರಕ ರಕ್ಷಣೆಯಾಗಲಿ

Published:
Updated:

ಗಂಗಾವತಿ ತಾಲ್ಲೂಕಿನ ಆನೆಗೊಂದಿಯಲ್ಲಿರುವ ವ್ಯಾಸರಾಜತೀರ್ಥರ ವೃಂದಾವನವನ್ನು ದುಷ್ಕರ್ಮಿಗಳು ಧ್ವಂಸ ಮಾಡಿರುವುದು ವಿಷಾದನೀಯ.

ಐತಿಹಾಸಿಕ ಸ್ಮಾರಕಗಳನ್ನು ಹಾಳು ಮಾಡುವ ಸಮಾಜಘಾತುಕ ಶಕ್ತಿಗಳು ಇತ್ತೀಚೆಗೆ ಬಲಗೊಳ್ಳುತ್ತಿವೆ. ದೇಶದಲ್ಲಿ ಸಾಂಸ್ಕೃತಿಕ ಸ್ಮಾರಕಗಳು ಬಹಳಷ್ಟಿದ್ದು, ಸೂಕ್ತ ಭದ್ರತೆಯ ಕೊರತೆ ಎದುರಿಸುತ್ತಿವೆ. ಕೆಲವೆಡೆ ನಿಧಿ ಕಳ್ಳರಿಗೆ ಅವು ಬಲಿಯಾಗುತ್ತಿವೆ.

ಐತಿಹಾಸಿಕ ಸ್ಮಾರಕಗಳನ್ನು ಸಂರಕ್ಷಿಸಬೇಕಾದ ಹೊಣೆ ಭಾರತೀಯ ಪುರಾತತ್ವ ಇಲಾಖೆಯದು. ಹಂಪಿಯ ಸುತ್ತಮುತ್ತಲಿನ ಸ್ಮಾರಕಗಳೂ ಇದೇ ಬಗೆಯ ಆತಂಕ ಎದುರಿಸುತ್ತಿರುವುದು ಆತಂಕಕಾರಿ. ಅಧಿಕಾರಿಗಳು ಈಗಲಾದರೂ ಎಚ್ಚೆತ್ತು, ಸ್ಮಾರಕಗಳ ರಕ್ಷಣೆಗೆ ಪ್ರಾಮುಖ್ಯ ನೀಡಬೇಕು.

ಬಿ.ಮೊಹಿದ್ದೀನ್ ಖಾನ್, ಚಿತ್ರದುರ್ಗ

Post Comments (+)