ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಪರ್ಧಾತ್ಮಕ ಪರೀಕ್ಷೆ: ಗೋಡೆ ಗಡಿಯಾರ ಇರಲಿ

Last Updated 23 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಪೊಲೀಸ್ ಇಲಾಖೆ ವತಿಯಿಂದ ಕಾನ್‌ಸ್ಟೆಬಲ್‌ ಮತ್ತು ಸಬ್ ಇನ್‌ಸ್ಪೆಕ್ಟರ್‌ ಹುದ್ದೆಗಳಿಗಾಗಿ ಇತ್ತೀಚೆಗೆ ನಡೆದ ನೇಮಕಾತಿ ಪರೀಕ್ಷೆಗಳಲ್ಲಿ ಸ್ಪರ್ಧಾರ್ಥಿಗಳಿಗೆ ‘ಗಡಿಯಾರ’ ತಲೆನೋವಾಗಿ ಪರಿಣಮಿಸಿತು. ಪರೀಕ್ಷಾ ಕೊಠಡಿಯೊಳಗೆ ಡಿಜಿಟಲ್ ಕೈಗಡಿಯಾರಕ್ಕೆ ಅವಕಾಶವಿಲ್ಲ. ಪಾರದರ್ಶಕ ನೇಮಕಾತಿಗಾಗಿ ಇದು ಸರಿಯಾದ ಕ್ರಮ. ಆದರೆ ಪರೀಕ್ಷೆಗಳಲ್ಲಿ ಕೇಳಲಾದ ಪ್ರಶ್ನೆಗಳಿಗೆ ನಿಗದಿತ ಸಮಯದಲ್ಲಿ ಉತ್ತರ ನೀಡಲು ಸ್ಪರ್ಧಾರ್ಥಿಗಳಿಗೆ ಸಾಮಾನ್ಯ ಕೈಗಡಿಯಾರದ ಅಗತ್ಯ ಇರುತ್ತದೆ. ಆದರೆ ಇಂತಹ ಕೈ ಗಡಿಯಾರಕ್ಕೂ ಅವಕಾಶ ಇಲ್ಲದಿರುವುದೇ ಸಮಸ್ಯೆಯಾಗಿದೆ.

ಪರೀಕ್ಷಾ ಕೊಠಡಿಗಳಲ್ಲಿ ಗೋಡೆ ಗಡಿಯಾರವೂ ಇರುವುದಿಲ್ಲ. ಪರೀಕ್ಷೆಯ ಪ್ರಾರಂಭ ಮತ್ತು ಮುಕ್ತಾಯದ ವೇಳೆಯಲ್ಲಿ ವಾರ್ನಿಂಗ್ ಬೆಲ್ ಹೊಡೆಯಲಾಗುತ್ತದೆ ಎಂಬ ಸಿದ್ಧ ಉತ್ತರವು ಪರೀಕ್ಷಾ ಆಯೋಜಕರಿಂದ ಬರು
ತ್ತದೆ. ಸ್ಪರ್ಧಾರ್ಥಿಗಳಿಗೆ ಪರೀಕ್ಷಾ ಕೊಠಡಿಯಲ್ಲಿ ಒಂದೊಂದು ಸೆಕೆಂಡ್ ಸಹ ಮುಖ್ಯವಾಗಿರುತ್ತದೆ. ಪ್ರತಿ ಪ್ರಶ್ನೆಗೂ ಸಮಯದ ತಾಳೆ ಹಾಕಿ ಉತ್ತರ ನೀಡಬೇಕಾಗಿರುತ್ತದೆ. ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮುಂದೆ ನಡೆಯುವ ಇಲಾಖಾ ಪರೀಕ್ಷೆಗಳಲ್ಲಿ ಪ್ರತಿ ಕೊಠಡಿಯಲ್ಲೂ ಗೋಡೆ ಗಡಿಯಾರ ಇರುವಂತೆ ನೋಡಿಕೊಳ್ಳಬೇಕು.

ಭೀಮರಾವ್ ದೇಸಾಯಿ,ಯಾದಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT