ಭಾನುವಾರ, ಆಗಸ್ಟ್ 25, 2019
23 °C

ಅಲ್ಲಿ ಪ್ರವಾಹ, ಇಲ್ಲಿ ಹನಿ ನೀರಿಗೂ ಹಾಹಾಕಾರ

Published:
Updated:

ರಾಜ್ಯದ ವಿವಿಧೆಡೆ ಭಾರಿ ಮಳೆಯಾಗಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದರೆ, ಚಿತ್ರದುರ್ಗ, ದಾವಣಗೆರೆ ಭಾಗದ ಬಹುತೇಕ ಕಡೆ ತೀವ್ರ ಬರಗಾಲ ಇದೆ. ಕುಡಿಯುವ ನೀರಿಗೂ ಪರದಾಡಬೇಕಾಗಿದೆ.

ಆಡಳಿತ ಯಂತ್ರ ನಿಷ್ಕ್ರಿಯವಾಗಿದ್ದು, ಜನರ ಗೋಳು ಕೇಳುವವರೇ ಇಲ್ಲದಂತಾಗಿದೆ. ಇಂತಹ ಸ್ಥಿತಿಯಲ್ಲಿ, ಮಳೆ ಬರಲಿ ಎಂದು ದೇವರಿಗೆ ಮೊರೆ ಇಡುವ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತಿವೆ. ಇಂಥ ಕಾರ್ಯಕ್ರಮಗಳನ್ನು ಕೆಲ ಕಾಲ ಮುಂದೂಡಿ, ಕುಡಿಯಲು ಮತ್ತು ಕೃಷಿಗೆ ನೀರು ಪೂರೈಕೆಯಾಗುವಂತಹ ಕ್ರಮಗಳತ್ತ ಯೋಚಿಸಬಾರದೇಕೆ? ಜನರು ಬೆಳೆ ಹಾನಿಯಿಂದ, ಬರಗಾಲದಿಂದ ಕಂಗೆಟ್ಟು ಕೂರುವ ಬದಲು, ಪ್ರಕೃತಿ ವಿಕೋಪಗಳನ್ನು ಸಮರ್ಥವಾಗಿ ಎದುರಿಸಲು ಕಲಿತಾರೆಯೇ?

ಶಾಂತವೀರ ಎಸ್‌., ಚಿತ್ರದುರ್ಗ

Post Comments (+)