ಶನಿವಾರ, ಜೂನ್ 19, 2021
23 °C

ಕೋರ್ಟ್ ಕ್ರಮ ಸ್ತುತ್ಯರ್ಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರಿನಲ್ಲಿ ಅನಧಿಕೃತ ಹೋರ್ಡಿಂಗ್‌ಗಳು, ಜಾಹೀರಾತು ಫಲಕಗಳು ಮತ್ತು ಫ್ಲೆಕ್ಸ್‌ ತೆರವುಗೊಳಿಸಲು ನ್ಯಾಯಾಲಯ ತೆಗೆದುಕೊಂಡ ಕ್ರಮದ ಬಗ್ಗೆ ನಗರದ ಜನರಲ್ಲಿ ಮೆಚ್ಚುಗೆ ಭಾವ ಇದೆ. ಇದು, ಬೆಂಗಳೂರಿಗೆ ಅಷ್ಟೇ ಅಲ್ಲದೆ ರಾಜ್ಯದ ಎಲ್ಲ ಕಡೆಗೂ ಅನ್ವಯ ಆಗಬೇಕು. ಈಗ ರಸ್ತೆ ಹೊಂಡಗಳ ವಿಷಯದಲ್ಲೂ ನ್ಯಾಯಾಲಯ ಇದೇ ರೀತಿ ಚಾಟಿ ಬೀಸಿರುವುದು ಸುತ್ಯರ್ಹ.

ಬಿಬಿಎಂಪಿ ಆಡಳಿತ ವರ್ಗ ಹಾಗೂ ಪಾಲಿಕೆ ಸದಸ್ಯರು ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ನಿರ್ವಹಿಸಿದ್ದರೆ, ನ್ಯಾಯಾಲಯಗಳಿಗೆ ಹೀಗೆ ಚಾಟಿ ಬೀಸಬೇಕಾದ ಅಗತ್ಯ ಬರುತ್ತಿರಲಿಲ್ಲ. ಈಗಲಾದರೂ ಅವರು ಎಚ್ಚೆತ್ತುಕೊಳ್ಳಬೇಕು. ಕರ್ನಾಟಕದಲ್ಲಿ ಅಂಗಡಿ ಮುಂಗಟ್ಟುಗಳ ನಾಮಫಲಕಗಳಲ್ಲಿ ಕನ್ನಡಕ್ಕೆ ಆದ್ಯತೆ ಕೊಡುವಂತೆಯೂ ಕೋರ್ಟ್‌ ನಿರ್ದೇಶಿಸಿದರೆ, ರಾಜ್ಯದಲ್ಲಿ ಕನ್ನಡ ಭಾಷೆ ಉಳಿಯಲು, ಬೆಳೆಯಲು ಸಹಾಯ ಮಾಡಿದಂತಾಗುತ್ತದೆ.

ರಮಾನಂದ ಶರ್ಮಾ, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು