ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಬಲ್‌ ಎಂಜಿನ್‌ ಎಂಬ ಡಬಲ್‌ ಟ್ರಬಲ್‌

Last Updated 9 ಮೇ 2021, 19:31 IST
ಅಕ್ಷರ ಗಾತ್ರ

ಪಶ್ಚಿಮ ಬಂಗಾಳದ ಚುನಾವಣಾ ಭಾಷಣಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಹೋದಲ್ಲೆಲ್ಲ ‘ಡಬಲ್‌ ಎಂಜಿನ್‌ ಆಡಳಿತ ಬರಲಿದೆ’ ಎಂದು ಪದೇ ಪದೇ ಹೇಳುತ್ತಿದ್ದರು. ಅಂದರೆ, ಕೇಂದ್ರದಲ್ಲೂ ಬಿಜೆಪಿ, ರಾಜ್ಯದಲ್ಲೂ ಬಿಜೆಪಿ ನೇತೃತ್ವದ ಸರ್ಕಾರವೇ ಬಂದರೆ ಅಭಿವೃದ್ಧಿಯ ವೇಗ ಇಮ್ಮಡಿ ಆಗುತ್ತದೆ ಎಂಬ ಅರ್ಥ ಅವರ ಮಾತಿನಲ್ಲಿತ್ತು. ನಮ್ಮ ಕರ್ನಾಟಕದಲ್ಲಿ ‘ಡಬಲ್‌ ಎಂಜಿನ್‌’ ಆಡಳಿತದ ವೈಖರಿಯನ್ನು ನಾವು ನೋಡುತ್ತಿದ್ದೇವೆ. ನೆರೆ ಪರಿಹಾರಕ್ಕೆ ಹಣ ಬೇಕೆಂದು ಕೋರಿದರೆ ಅಥವಾ ಜಿಎಸ್‌ಟಿಯಲ್ಲಿ ನ್ಯಾಯಯುತ ಪಾಲು ಕೊಡಿ ಎಂದು ಗೋಗರೆದರೆ ಕೇಳಿದ್ದರ ಕಾಲು ಪಾಲೂ ಸಿಗುತ್ತಿಲ್ಲ. ಈಗ ಆಮ್ಲಜನಕದ ಸರದಿ. ಇವನ್ನೆಲ್ಲ ನೋಡಿದರೆ, ರಾಜ್ಯದ ಅಭಿವೃದ್ಧಿಯ ರೈಲನ್ನು ಪರಸ್ಪರ ವಿರುದ್ಧ ದಿಕ್ಕಿನಲ್ಲಿ ಈ ಎರಡು ಎಂಜಿನ್‌ಗಳು ಎಳೆಯುತ್ತಿವೆಯೋ ಅನ್ನಿಸುತ್ತದೆ.

-ಎನ್‌.ಪಿ.ನಾಗೇಂದ್ರ ಪ್ರಸಾದ್‌, ಬಿಡದಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT