ವಜೂಭಾಯಿ ವಾಲ ಕನ್ನಡ ಕಲಿಯುವುದು ಯಾವಾಗ?

7

ವಜೂಭಾಯಿ ವಾಲ ಕನ್ನಡ ಕಲಿಯುವುದು ಯಾವಾಗ?

Published:
Updated:

ವಿ.ಎಸ್. ರಮಾದೇವಿ ಅವರು ಕರ್ನಾಟಕದ ರಾಜ್ಯಪಾಲರಾಗಿದ್ದ ಅವಧಿಯಲ್ಲಿ ಕೆಲವೇ ದಿನಗಳಲ್ಲಿ ಕನ್ನಡ ಕಲಿತು, ಕನ್ನಡದಲ್ಲೇ ವ್ಯವಹರಿಸಿ ಜನರ ಮನಸ್ಸನ್ನು ಗೆದ್ದಿದ್ದರು. ಈಗಿನ ರಾಜ್ಯಪಾಲ ವಜೂಭಾಯಿ ವಾಲ ಕರ್ನಾಟಕಕ್ಕೆ ಬಂದು 4 ವರ್ಷಗಳಾಗಿದೆ. ಆದರೆ, ಇಂದಿಗೂ ಅವರು ತಮ್ಮ ಭಾಷಣಗಳನ್ನು ಹಿಂದಿಯಲ್ಲೇ ಮಾಡುತ್ತಾರೆ. ಇಷ್ಟು ವರ್ಷಗಳಾದರೂ ಕನ್ನಡ ಕಲಿಯಲು ಅವರಿಗೆ ಸಾಧ್ಯವಾಗಲಿಲ್ಲವೇ ಅಥವಾ ಕನ್ನಡ ಕಲಿಯುವುದು ಬೇಡ ಎನ್ನುವುದು ಅವರ ನಿಲುವೇ?

–ಅರುಣ್ ಜಾವಗಲ್, ಬೆಂಗಳೂರು

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 0

  Sad
 • 2

  Frustrated
 • 0

  Angry

Comments:

0 comments

Write the first review for this !