ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ | ಸೀಲ್‌ಡೌನ್: ಉಪಕಾರವೇ? ಉಪದ್ರವವೇ?

Last Updated 26 ಜುಲೈ 2020, 19:30 IST
ಅಕ್ಷರ ಗಾತ್ರ

ಕೊರೊನಾ ಸೋಂಕಿನಿಂದ ಆರ್ಥಿಕ ಚಟುವಟಿಕೆಗೆ ಬಾಧಕ ಆಗಬಾರದೆಂಬ ಕಾರಣಕ್ಕೆ ಸರ್ಕಾರ ಲಾಕ್‌ಡೌನ್ ಕೈಬಿಟ್ಟು, ಸೋಂಕಿತರ ಮನೆಯ ರಸ್ತೆಯನ್ನು ಸೀಲ್‌ಡೌನ್ ಮಾಡುತ್ತಿದೆ. ಈ ಕ್ರಮದಿಂದ ಕೆಲವು ಊರುಗಳಲ್ಲಿ ಎಲ್ಲಾ ರಸ್ತೆಗಳೂ ಒಂದೊಂದಾಗಿ ಸೀಲ್ ಆಗುತ್ತಿವೆ. ಇದರಿಂದ ವ್ಯಾಪಾರಿಗಳಿಗೆ, ನೌಕರರಿಗೆ, ಅಲ್ಲಿನ ನಿವಾಸಿಗಳಿಗೆ ಅನಗತ್ಯವಾಗಿ ತೊಂದರೆ ಆಗುತ್ತಿದೆ. ಉಪಕಾರಕ್ಕಿಂತ ಉಪದ್ರವವೇ ಹೆಚ್ಚಾಗಿರುವ ಈ ವ್ಯವಸ್ಥೆ ಅವೈಜ್ಞಾನಿಕ
ವಾದುದು. ಆದಕಾರಣ ಇನ್ನು ಮುಂದೆ ಸರ್ಕಾರವು ರಾಜ್ಯದಾದ್ಯಂತ ಸೋಂಕಿತರ ಮನೆಯನ್ನು ಮಾತ್ರ ಸೀಲ್ ಮಾಡಿ, ಅಕ್ಕಪಕ್ಕದ ಮನೆಗಳಿಗೆ ಸೋಂಕು ನಿವಾರಕಗಳನ್ನು ಸಿಂಪಡಿಸಿ, ಸೋಂಕಿತರ ಮನೆಯ ಹೊರಗೆ ಒಬ್ಬ ರಕ್ಷಕರನ್ನು ನೇಮಿಸಬಹುದು. ಆ ಮನೆಯಲ್ಲಿರುವ ಸದಸ್ಯರಿಗೆ ಊಟ, ಉಪಾಹಾರದ ವ್ಯವಸ್ಥೆ, ಆರೋಗ್ಯ ಖಾತರಿಗಾಗಿ ತುರ್ತು ದೂರವಾಣಿ ಸಂಖ್ಯೆ ನೀಡಿ, ಸ್ಥಳೀಯರ ಸಹಕಾರ, ಸ್ವಯಂಸೇವಕರ ನೆರವಿನಿಂದಅತ್ಯುತ್ತಮವಾಗಿ ನಿಭಾಯಿಸಬಹುದು.

ಈ ಕ್ರಮದಿಂದ ದಿನನಿತ್ಯದ ಜನಜೀವನಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಜೊತೆಗೆ ಸರ್ಕಾರವೂ ಕಡಿಮೆ ಖರ್ಚಿನಲ್ಲಿ, ಪರಿಣಾಮಕಾರಿಯಾಗಿ ಕೊರೊನಾ ತಡೆಗಟ್ಟಬಹುದು.

-ಎಂ.ಮಾಧವಾಚಾರ್, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT