ಶುಕ್ರವಾರ, ಜುಲೈ 1, 2022
27 °C

ಪ್ರತಿಭಾವಂತರ ಪಾಡು ಕೇಳುವವರಾರು?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಿಎಸ್ಐ ನೇಮಕಾತಿಯಲ್ಲಿನ ಅಕ್ರಮದ ಎಳೆಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಇನ್ನು ಅದಕ್ಕೆ ಅಂಟಿ ಕೊಂಡಂತೆ ಹಲವಾರು ಇಲಾಖೆಗಳ ನೇಮಕಾತಿಯಲ್ಲಿ ನಡೆದ ಭ್ರಷ್ಟಾಚಾರಗಳು ಹೊರಬೀಳುತ್ತಿವೆ.

ಇವುಗಳಿಗೆಲ್ಲ ಹೊಣೆ ಯಾರು, ಈ ವ್ಯವಸ್ಥೆ ಸ್ವಚ್ಛವಾಗುವುದು ಯಾವಾಗ, ಹೀಗೆ ಪ್ರತೀ ನೇಮಕಾತಿಯಲ್ಲೂ ಅಕ್ರಮ ನಡೆಯುತ್ತಾ ಹೋದರೆ ಪ್ರಾಮಾಣಿಕ ಬಡ ವಿದ್ಯಾರ್ಥಿಗಳ ಪಾಡೇನು, ಈ ಅಕ್ರಮಗಳ ನಡುವೆ ಪ್ರತಿಭಾವಂತ ಆಕಾಂಕ್ಷಿ ಗಳು ಮೂಲೆ ಗುಂಪಾದರೆ ಸಮಾಜವು ಉದಯೋನ್ಮುಖ ಬೆಳವಣಿಗೆ ಕಾಣುವುದಾದರೂ ಯಾವಾಗ? ಮುಂಬರುವ ನೇಮಕಾತಿಗಳಲ್ಲಾದರೂ ಸರ್ಕಾರ ಸುವ್ಯವಸ್ಥಿತವಾದ ಕಾನೂನು ಕ್ರಮಗಳನ್ನು ಜಾರಿಗೆ ತಂದು ಅಕ್ರಮಗಳಿಗೆ ಕಡಿವಾಣ ಹಾಕಲಿ.

 ⇒ಜಯರಾಜ ತೋಳದ್, ಮಲ್ಲಿಗೆವಾಡ, ಕೊಪ್ಪಳ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.