ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿಗೇಕೆ ವಯಸ್ಸಿನ ಹಂಗು?

Last Updated 5 ಡಿಸೆಂಬರ್ 2021, 19:45 IST
ಅಕ್ಷರ ಗಾತ್ರ

ಮೇಲುಕೋಟೆಯ ಚೆಲುವರಾಯಸ್ವಾಮಿ ದೇವಸ್ಥಾನದಲ್ಲಿ ಇತ್ತೀಚೆಗೆ ಮೈಸೂರಿನ 65 ವರ್ಷದ ಚಿಕ್ಕಣ್ಣ ಮತ್ತು ಅದೇ ವಯಸ್ಸಿನ ಜಯಮ್ಮ ಎಂಬುವರು ವಿವಾಹವಾದ ಬಗ್ಗೆ ವರದಿಯಾಗಿದೆ. ಸುಮಾರು 35 ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದ ಈ ಜೋಡಿ, ಕಡೆಗೂ ಹಸೆಮಣೆ ಏರುವ ಮೂಲಕ ಧನ್ಯತೆ ಪಡೆದುಕೊಂಡಿದೆ. ಜಯಮ್ಮಅವರಿಗೆ ಈಗಾಗಲೇ ವಿವಾಹವಾಗಿದ್ದು ಗಂಡನಿಂದ ಪರಿತ್ಯಕ್ತರಾಗಿದ್ದರೂ ಚಿಕ್ಕಣ್ಣ ಅವರ ಮೇಲಿನ ಪ್ರೀತಿಯನ್ನು ಬಿಟ್ಟುಕೊಟ್ಟಿರಲಿಲ್ಲ. ಅಂತೂ ಇಂತೂ ಈ ವೃದ್ಧ ಜೋಡಿಯ ಬಹುವರ್ಷಗಳ ಆಸೆ ಈಡೇರಿದಂತಾಗಿದೆ. ಅಂದಹಾಗೆ, ಪ್ರೀತಿಗೆ ವಯಸ್ಸು, ಜಾತಿ, ಕುಲದಂಥ ಯಾವ ಅಡ್ಡಗೋಡೆಯೂ ಇಲ್ಲ. ಪ್ರೀತಿ ನಿಜವಾಗಿದ್ದರೆ, ಒಂದಲ್ಲಾ ಒಂದು ದಿನ ಅದು ಹಣ್ಣಾಗಲೇಬೇಕು ಎಂಬುದಕ್ಕೆ ಈ ಮದುವೆ ನಿದರ್ಶನ.

-ಕೆ.ವಿ.ವಾಸು,ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT