ಭಾನುವಾರ, ಜೂನ್ 13, 2021
23 °C

ತಜ್ಞರ ಚಾವಡಿಯಲ್ಲಿ ಶಾಸಕರೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಯಾವುದೇ ವಿಶ್ವವಿದ್ಯಾಲಯದಲ್ಲಿ ಅಕಡೆಮಿಕ್ ಕೌನ್ಸಿಲ್ ಎಂಬುದು ಶೈಕ್ಷಣಿಕ ವಿಷಯಗಳು ಹಾಗೂ ಅದಕ್ಕೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಚರ್ಚೆ, ಚಿಂತನೆ ನಡೆಸುವ, ಸೂಕ್ತ ಸಲಹೆ, ಮಾರ್ಗದರ್ಶನ ನೀಡುವ ತಜ್ಞರ ಚಾವಡಿಯಾಗಿರುತ್ತದೆ. ಸಾಮಾನ್ಯವಾಗಿ ಅಕಡೆಮಿಕ್ ವಲಯದವರೇ ಇದರ ಸದಸ್ಯರಾಗಿರುತ್ತಾರೆ. ಆದರೆ ಈಗ ರಾಜ್ಯ ಸರ್ಕಾರವು ಬೆಂಗಳೂರು ವಿಶ್ವವಿದ್ಯಾಲಯದ ಅಕಡೆಮಿಕ್ ಕೌನ್ಸಿಲ್‌ಗೆ ಮೂವರು ಶಾಸಕರನ್ನು ಸದಸ್ಯರನ್ನಾಗಿ ನೇಮಿಸಿದೆ (ಪ್ರ.ವಾ., ಮೇ 7).

ಶಾಸಕರೆಂದ ಮೇಲೆ ಅವರು ಎಲ್ಲಾ ಸಮಿತಿಗಳಲ್ಲಿ ಸಂಬಂಧವಿರಲಿ ಇಲ್ಲದಿರಲಿ ಇರಲೇಬೇಕೆ? ನಾಡಿನ ತುಂಬ ಇರುವ ಪ್ರಾಧ್ಯಾಪಕರು, ಶಿಕ್ಷಣ ತಜ್ಞರ ನೆನಪು ಸರ್ಕಾರಕ್ಕೆ ಬರಲಿಲ್ಲವೇ? ಈ ನೇಮಕಾತಿ ಮಾಡಿರುವುದು ಶಾಸಕರನ್ನು ಓಲೈಸಲೋ ಅಥವಾ ರಾಜಕೀಯ ಕ್ಷೇತ್ರದವರು ವಿಶ್ವವಿದ್ಯಾಲಯದ ನಡೆಯಲ್ಲಿ ಮೂಗು ತೂರಿಸಲಿ ಎಂಬ ದುರುದ್ದೇಶದಿಂದಲೋ ಎಂಬುದು ಅರ್ಥವಾಗುತ್ತಿಲ್ಲ.

-ಪ್ರೊ. ಎಂ.ಎಸ್.ರಘುನಾಥ್, ಬೆಂಗಳೂರು

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು