ಪ್ರಾಧ್ಯಾಪಕ ಹುದ್ದೆ ಭರ್ತಿ ವಿಳಂಬವೇಕೆ?

7

ಪ್ರಾಧ್ಯಾಪಕ ಹುದ್ದೆ ಭರ್ತಿ ವಿಳಂಬವೇಕೆ?

Published:
Updated:

ರಾಜ್ಯದ ಕಾಲೇಜು ಶಿಕ್ಷಣ ಇಲಾಖೆಯು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮೂಲಕ 2015ರಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಸಹಾಯಕ ಪ್ರಾಧ್ಯಾಪಕ ಹುದ್ದೆ ಭರ್ತಿ ಪ್ರಕ್ರಿಯೆ ಆರಂಭಿಸಿ, ಒಂದು ಹಂತದಲ್ಲಿ 1600ಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ನೇಮಕಾತಿ ಆದೇಶವನ್ನೂ ನೀಡಿ ವರ್ಷ ಕಳೆಯುತ್ತಾ ಬಂದಿದೆ.

ಆದರೆ, ಆಯ್ಕೆಯಾದವರಲ್ಲಿ ಸುಮಾರು ನೂರು ಜನರು ನಕಲಿ ಪ್ರಮಾಣಪತ್ರಗಳನ್ನು ಕೊಟ್ಟಿದ್ದರು ಎಂಬ ಕಾರಣಕ್ಕೆ ಅವರನ್ನು ಅನರ್ಹಗೊಳಿಸಲಾಗಿತ್ತು. ಹೀಗೆ ಖಾಲಿಯಾದ 100ಕ್ಕೂ ಹೆಚ್ಚು ಹುದ್ದೆಗಳನ್ನು ತುಂಬುವುದು ಇನ್ನೂ ಬಾಕಿ ಇದೆ.

ಇದಾಗಿ 8- 10 ತಿಂಗಳುಗಳು ಕಳೆದಿದ್ದರೂ, ಅನರ್ಹ ಅಭ್ಯರ್ಥಿಗಳ ಬದಲಾಗಿ, ಪಟ್ಟಿಯಲ್ಲಿ ನಂತರದ ಸ್ಥಾನದಲ್ಲಿರುವ ಅಭ್ಯರ್ಥಿಗಳಿಗೆ ನೇಮಕಾತಿ ನೀಡುವ ಪ್ರಕ್ರಿಯೆಯನ್ನು ಯಾಕೆ ಆರಂಭಿಸಿಲ್ಲ? ಅಕಾರಣ ವಿಳಂಬವು ‘ಅನರ್ಹಗೊಂಡವರಿಗೇ ಹುದ್ದೆಗಳನ್ನು ನೀಡುವ ಪ್ರಯತ್ನ ನಡೆಯುತ್ತಿದೆಯೋ’ ಎಂಬ ಗುಮಾನಿಯನ್ನು ಮೂಡಿಸುತ್ತಿದೆ. ಇಲಾಖೆಯು ಆದಷ್ಟು ಶೀಘ್ರ ಈ ಹುದ್ದೆಗಳಿಗೆ ನೇಮಕಾತಿ ನಡೆಸಿ ಅನುಮಾನಗಳನ್ನು ದೂರ ಮಾಡಬೇಕು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 1

  Frustrated
 • 2

  Angry

Comments:

0 comments

Write the first review for this !