ಭಾನುವಾರ, ಆಗಸ್ಟ್ 14, 2022
28 °C

ಕುರ್ಚಿ ರಕ್ಷಿಸುವ ಕೆಲಸವೇಕೆ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಖ್ಯಮಂತ್ರಿ ಯಡಿಯೂರಪ್ಪನವರ ಕುರ್ಚಿ ಭದ್ರಪಡಿಸಲು ಸ್ವಾಮೀಜಿಗಳ ದಂಡೇ ನಿಂತಂತಿದೆ. ಆಧ್ಯಾತ್ಮಿಕ ಚಿಂತನೆ ಮಾಡಿಕೊಂಡು, ಭಕ್ತರನ್ನು ಆಶೀರ್ವದಿಸುತ್ತಾ, ಲೋಕ‌ಕಲ್ಯಾಣದ ಹಿತವನ್ನು ಬಯಸುವುದು ಸ್ವಾಮೀಜಿಗಳ ಧರ್ಮ. ಅದು ಬಿಟ್ಟು ಒಬ್ಬ ರಾಜಕೀಯ ನಾಯಕನ ಹಿಂದೆ ನಿಂತು ರಾಜಕೀಯ ರಕ್ಷಣೆ ಕೊಡುತ್ತಿರುವ ಸ್ವಾಮೀಜಿಗಳ ಚಿತ್ರವೊಂದನ್ನು ಇಂದು ದಿನಪತ್ರಿಕೆಯಲ್ಲಿ ನೋಡಿ ಮುಜುಗರವಾಯಿತು! ಈ ಬಗೆಯ ಬೆಳವಣಿಗೆ ರಾಜಕೀಯ, ಧಾರ್ಮಿಕ ಎರಡೂ ಕ್ಷೇತ್ರಗಳಿಗೆ ಒಳ್ಳೆಯದಲ್ಲ. ಇದು ನಿಲ್ಲಲಿ.

-ವೀರೇಶ ಬಂಗಾರಶೆಟ್ಟರ, ಕುಷ್ಟಗಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು