ಶನಿವಾರ, ಅಕ್ಟೋಬರ್ 24, 2020
23 °C

ಒಳಮೀಸಲಾತಿಗೆ ವಿರೋಧವೇಕೆ?

ವಾಚಕರವಾಣಿ Updated:

ಅಕ್ಷರ ಗಾತ್ರ : | |

ಶೋಷಿತ ವರ್ಗಗಳಿಗೆ ಇರುವ ಮೀಸಲಾತಿಯು ಒಂದು ಸಾಂವಿಧಾನಿಕ ಹಕ್ಕು. ಒಳಮೀಸಲಾತಿಯ ಬಗ್ಗೆ ಸುಪ್ರೀಂ ಕೋರ್ಟ್ ಇತ್ತೀಚೆಗೆ ಆಶಾದಾಯಕ ಮಾತುಗಳನ್ನಾಡಿದೆ. ಮೀಸಲಾತಿಗೆ ಎಷ್ಟು ಪ್ರಬಲ ಕಾರಣಗಳಿವೆಯೋ ಒಳಮೀಸಲಾತಿಗೂ ಅಷ್ಟೇ ಪ್ರಬಲ ಕಾರಣಗಳಿವೆ. ಇದರಲ್ಲಿ ಪರ, ವಿರೋಧದ ಪ್ರಶ್ನೆಯೇ ಉದ್ಭವಿಸಬಾರದು.

ನ್ಯಾಯಮೂರ್ತಿ ಸದಾಶಿವ ಆಯೋಗದ ವರದಿಯು ಎಡಗೈಗೆ ಸೇರಿದ ಜಾತಿಗಳಿಗೆ ಶೇ 6ರಷ್ಟು ಮೀಸಲಾತಿ ನಿಗದಿ ಮಾಡಿದೆ ಎಂದು ವರದಿಯಾಗಿದೆ. ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ಈ ಜಾತಿಗಳು ಮೀಸಲಾತಿಗೆ ಮೊದಲನೇ ಅರ್ಹತೆ ಹೊಂದಿವೆ. ನಿಜಕ್ಕೂ ಅಸ್ಪೃಶ್ಯತೆಯ ಕರಾಳ ಮುಖದ ಅನುಭವ ಅವರಿಗೆ ಆಗಿರು‌ವಷ್ಟು ಉಳಿದ ಜಾತಿ, ಸಮುದಾಯಗಳಿಗೆ ಆಗಿಲ್ಲ ಎಂದೇ ಹೇಳಬಹುದು. 

ಗಿರೀಶ್ ಯರಗಟ್ಟಿಹಳ್ಳಿ, ಹೊದಿಗೆರೆ, ಚನ್ನಗಿರಿ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು