ಶನಿವಾರ, ನವೆಂಬರ್ 23, 2019
17 °C

ಮಾದರಿ ಶಿಕ್ಷಣದಿಂದ ತಿಳಿವಳಿಕೆ

Published:
Updated:

ಇಂದು ಹೆಣ್ಣು ಸಬಲೆಯಾಗಿದ್ದರೂ ಸಾಮಾಜಿಕ, ಕೌಟುಂಬಿಕ ಬದುಕು ರೂಪಿಸಿಕೊಳ್ಳುವಲ್ಲಿ ಕೆಲವರು ಸೋಲುತ್ತಿರುವುದನ್ನು ಸುರೇಶ ಗೌರೆ ಉದಾಹರಿಸಿದ್ದಾರೆ (ವಾ.ವಾ., ಸೆ. 16).

ಹೆಣ್ಣು ಭ್ರೂಣವನ್ನು ಕೊಲ್ಲುವ ಜನ; ಪದವಿ, ಸ್ನಾತಕೋತ್ತರ ಪದವಿ ಓದಿಸಿ, ವರದಕ್ಷಿಣೆ ನೀಡಿ ವರೋಪಚಾರ ಮಾಡಿ ‘ಗಂಡನ ಮನೆಯಲ್ಲಿ ಹೊಂದಿಕೊಂಡು ಹೋಗು ಮಗಳೇ’ ಎಂದು ಅಳುತ್ತಾ ಬೀಳ್ಕೊಡುವ ಜನ; ಮಕ್ಕಳಾಗದಿದ್ದರೆ ಬಂಜೆ ಎಂದು ಹೆಣ್ಣನ್ನು ಮಾತ್ರ ಜರಿಯುವ ಜನ; ಗಂಡು ಮಗುವಾಗಲಿಲ್ಲ ಎಂದು ಮಗನಿಗೆ ಇನ್ನೊಂದು ಮದುವೆ ಮಾಡಿ ಮೋಕ್ಷಕ್ಕಾಗಿ ಹಂಬಲಿಸುವ ಜನ; ತನ್ನ ಕೆಲಸ, ಓದು, ಬರವಣಿಗೆ, ಸಂಶೋಧನೆ ಇತ್ಯಾದಿಗಳ ಕಡೆಗಷ್ಟೇ ಗಮನಕೊಟ್ಟು ತನ್ನಿಷ್ಟದ ಉಡುಗೆ, ಅಲಂಕಾರ ಮಾಡಿಕೊಂಡು ಇರುವವರನ್ನು ಗಂಡುಬೀರಿ ಎನ್ನುವ ಜನ ಇರುವವರೆಗೂ ಹಳ್ಳಿ, ಪಟ್ಟಣ ಎಲ್ಲಾ ಕಡೆ ಇಂತಹ ಘಟನೆಗಳು ನಡೆಯುತ್ತವೆ.

ಹೆಣ್ಣಿನ ಸಬಲತೆ ಬಗ್ಗೆ, ಹೆಣ್ಣು ಸ್ವತಂತ್ರ ಜೀವನ ರೂಪಿಸಿಕೊಳ್ಳುವ ಬಗ್ಗೆ ತಿಳಿವಳಿಕೆ ಸಾಧ್ಯವಿರುವುದು ಮಾದರಿ ಶಿಕ್ಷಣದಿಂದ ಮಾತ್ರವೇನೊ?

- ಸರೋಜಾ ಎಂ.ಎಸ್., ಸಾಗರ

ಪ್ರತಿಕ್ರಿಯಿಸಿ (+)