ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಸ್ಪರ್ಧಾತ್ಮಕ ಪರೀಕ್ಷೆ; ಮಹಿಳೆಯರಲ್ಲಿ ಜಾಗೃತಿ ಅಗತ್ಯ

Last Updated 17 ಮಾರ್ಚ್ 2021, 19:30 IST
ಅಕ್ಷರ ಗಾತ್ರ

ನ್ಯಾಯಾಂಗದಲ್ಲಿ ಮಹಿಳಾ ಪ್ರಾತಿನಿಧ್ಯ ಕುರಿತ ಲೇಖನ (ಪ್ರ.ವಾ., ಮಾರ್ಚ್ 16) ಸಮಂಜಸವಾಗಿದೆ. ಉನ್ನತ ಶಿಕ್ಷಣ ಪಡೆಯುವ ಮಹಿಳೆಯರ ಸಂಖ್ಯೆ ಇಂದಿನ ದಿನಗಳಲ್ಲಿ ಹೆಚ್ಚಾಗಿದ್ದರೂ ಉನ್ನತ ಹುದ್ದೆಗಳನ್ನು ಅಲಂಕರಿಸುವು ದರಲ್ಲಿ ಅವರು ಹಿಂದೆ ಬಿದ್ದಿರುವುದಕ್ಕೆ ಕಾರಣ ಗಂಭೀರ ಚಿಂತನೆಯ ಕೊರತೆ, ವ್ಯವಸ್ಥೆ ಹಾಗೂ ಅದರಲ್ಲಿರುವ ಮೌಢ್ಯಗಳು. ಆನ್‌ಲೈನ್ ಆಧಾರಿತ ಮಾರುಕಟ್ಟೆ ಹಾಗೂ ಸಾಮಾಜಿಕ ಮಾಧ್ಯಮಗಳ ಪ್ರಭಾವದಿಂದಾಗಿ ಹೆಚ್ಚಿನ ಮಹಿಳೆಯರು ಸೌಂದರ್ಯ ಹಾಗೂ ತಮ್ಮ ವಸ್ತ್ರಗಳ ಬಗ್ಗೆ ವಿಪರೀತ ಅನಿಸುವಷ್ಟು ಆಸಕ್ತಿ ಬೆಳೆಸಿಕೊಂಡು, ತಮ್ಮ ಬಿಡುವಿನ ಸಮಯವನ್ನು ಹೆಚ್ಚಾಗಿ ಮೊಬೈಲ್ ಫೋನ್‌ಗಳಲ್ಲಿ ಕಳೆಯುತ್ತಿದ್ದಾರೆ. ಆನ್‌ಲೈನ್ ಶಾಪಿಂಗ್, ಅಡುಗೆ ಹಾಗೂ ಬ್ಯೂಟಿ ಟಿಪ್ಸ್‌ ನೋಡುವುದಕ್ಕೆ ಸಮಯ ವ್ಯಯಿಸುತ್ತಿದ್ದಾರೆ. ಇಂತಹವರಲ್ಲಿ ಗಂಭೀರ ಚಿಂತನೆ, ಅಧ್ಯಯನಶೀಲತೆ ಹಾಗೂ ಸೂಕ್ಷ್ಮ ಸಂವೇದನೆಗಳನ್ನು ಬೆಳೆಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಜಾಗೃತಿ ಮೂಡಿಸುವುದು ಇಂದಿನ ಅಗತ್ಯವಾಗಿದೆ.

-ಸುವರ್ಣ ಸಿ.ಡಿ., ತರೀಕೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT