ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಚಕರ ವಾಣಿ: ಅನುಮಾನ ನಿವಾರಿಸುವ ಕೆಲಸ ಆಗಬೇಕು

Last Updated 22 ಸೆಪ್ಟೆಂಬರ್ 2020, 19:30 IST
ಅಕ್ಷರ ಗಾತ್ರ

ಕೃಷಿ ಮಸೂದೆಯನ್ನು ವಿರೋಧಿಸಿ ರಾಜ್ಯಸಭೆಯಲ್ಲಿ ಗದ್ದಲ ಮಾಡಿ ಅಮಾನತಿನಂತಹ ಶಿಕ್ಷೆಗೆ ಒಳಗಾಗಿರುವ ವಿರೋಧ ಪಕ್ಷಗಳ 8 ಸದಸ್ಯರ ದುರ್ವರ್ತನೆ ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತಹದ್ದಲ್ಲ. ಪ್ರತಿಯೊಬ್ಬ ಸದಸ್ಯರಿಗೂ ಒಂದು ಮಸೂದೆಯ ಪರವಾಗಿ ಮಾತನಾಡುವ ಇಲ್ಲವೇ ಅದರ ವಿರುದ್ಧ ದನಿ ಎತ್ತುವ ಹಕ್ಕಿದೆ. ಆದರೆ ಘನತೆವೆತ್ತ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಉಪಸಭಾಪತಿ ಅವರನ್ನೇ ಕೆಟ್ಟ ಪದಗಳಿಂದ ನಿಂದಿಸಿ ಬೆದರಿಕೆ ಒಡ್ಡಿರುವುದು ಸಂಸತ್ತಿಗೆ ತೋರಿದ ಅಗೌರವ.

ಸರ್ಕಾರವು‌ ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿದ ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕಾರ ಮಾಡುವ ಮುನ್ನ, ಕೆಲವು ಊಹಾಪೋಹಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿ, ಅದನ್ನು ಎಲ್ಲರಿಗೂ ಮನವರಿಕೆ ಮಾಡಿಕೊಡುವುದು ಅವಶ್ಯಕವಾಗಿತ್ತು. ಕೋಟ್ಯಂತರ ಜನರ ಬದುಕಿನ ಮೇಲೆ ಪರಿಣಾಮ ಬೀರುವ ಇಂತಹ ಮಸೂದೆಗಳನ್ನು ತರಾತುರಿಯಲ್ಲಿ ಅಂಗೀಕರಿಸುವುದು ಒಳಿತಲ್ಲ. ಸದನದಲ್ಲಿ ಆಡಳಿತ ಪಕ್ಷದ ಸದಸ್ಯರಿಗೆ ಸಿಗುವ ಮನ್ನಣೆ ವಿರೋಧ ಪಕ್ಷಗಳ ಸದಸ್ಯರ ಮಾತಿಗೆ ಸಿಗದಿದ್ದಾಗ ಇಂತಹವು ಸಂಭವಿಸುತ್ತವೆ. ಶಾಂತಿಯುತ ಪ್ರತಿಭಟನೆಗೆ ಮಾರ್ಗಗಳು ಹಲವು ಇವೆ. ಯಾವುದೇ ಕಾರಣಕ್ಕೂ ಹೀಗೆ ವರ್ತಿಸುವುದು ಸರಿಯಲ್ಲ.

-ಚೆಲುವರಾಜು ಕೆ., ಧನಗೆರೆ , ಕೊಳ್ಳೇಗಾಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT