ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 22 ವಿಶ್ವ ಜಲ ದಿನದ ಆಚರಣೆ ಸಾರ್ಥಕಗೊಳ್ಳಲಿ

Last Updated 21 ಮಾರ್ಚ್ 2019, 20:27 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯು ಮಾರ್ಚ್ 22 ಅನ್ನು ವಿಶ್ವ ಜಲ ದಿನವಾಗಿ ಘೋಷಿಸಿರುವುದು ಜೀವಜಲದ ಪ್ರಾಮುಖ್ಯತೆಯ ಅರಿವನ್ನು ವಿಶ್ವದೆಲ್ಲೆಡೆ ಮೂಡಿಸಬೇಕೆಂಬ ಕಾಳಜಿಯಿಂದ ಹಾಗೂ ನೀರು ಅತ್ಯಮೂಲ್ಯ ಸಂಪತ್ತೆಂಬ ಜಾಗೃತಿಯನ್ನು ತರುವುದಕ್ಕಾಗಿ. ಆದರೆ, ಈ ನಿಟ್ಟಿನಲ್ಲಿ ಸರ್ಕಾರಗಳು ವಹಿಸುತ್ತಿರುವ ಪಾತ್ರ ಹಾಗೂ ಜಲ ಸಂರಕ್ಷಣೆಯಲ್ಲಿ ಜನರ ಆಸಕ್ತಿಯ ಮಟ್ಟ ಅಷ್ಟೇನೂ ಆಶಾದಾಯಕವಾಗಿ ಇಲ್ಲ. ಈ ವರ್ಷದ ಆರಂಭದಲ್ಲಿ ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾದವು ನಿಜ. ಆದರೆ ಜಲಾಶಯದಿಂದ ಹರಿದು ಹೊರಹೋದ ನೀರಿನ ಪ್ರಮಾಣ ಲೆಕ್ಕವಿಲ್ಲದಷ್ಟು. ಈ ನೀರನ್ನೇನಾದರೂ ಏತ ನೀರಾವರಿ ಮೂಲಕ ಕೆರೆಗಳಿಗೆ ಭರ್ತಿ ಮಾಡಿದ್ದಿದ್ದರೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗುತ್ತಿರಲಿಲ್ಲ, ಅಂತರ್ಜಲ ಮಟ್ಟ ಕೂಡ ಕುಸಿಯುತ್ತಿರಲಿಲ್ಲ. ಸರ್ಕಾರಗಳು ಈ ನಿಟ್ಟಿನಲ್ಲಿ ಪ್ರಯತ್ನಿಸಿದರೆ ಜಲ ದಿನದ ಆಚರಣೆ ಸಾರ್ಥಕವಾಗುತ್ತದೆ.

–ಶಿವಕುಮಾರ್ ಯರಗಟ್ಟಿಹಳ್ಳಿ,ಚನ್ನಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT