ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೇಷಧಾರಿಗೆ ಆದಿತ್ಯನಾಥರಿಂದ ಪೂಜೆ!

Last Updated 9 ನವೆಂಬರ್ 2018, 20:15 IST
ಅಕ್ಷರ ಗಾತ್ರ

ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ ಅವರು ರಾಮ, ಲಕ್ಷ್ಮಣ, ಸೀತೆ ವೇಷಧಾರಿಗಳಿಗೆ ಆರತಿ ಬೆಳಗಿದ ಸಚಿತ್ರ ವರದಿ ಪ್ರಕಟವಾಗಿದೆ (ಪ್ರ.ವಾ., ನ.8). ಅದನ್ನು ಗಮನಿಸಿದ ನನಗೆ ಎರಡು– ಮೂರು ಪ್ರಶ್ನೆಗಳು ಮೂಡುತ್ತಿವೆ.

ನಾಟಕ, ಸಿನಿಮಾ, ಟಿ.ವಿ. ಧಾರಾವಾಹಿಗಳಲ್ಲಿ ರಾಮಾಯಣದ ಕಥೆ ಬಿತ್ತರವಾಗುವುದು ಒಂದು ವಿಷಯ; ನಿಜಜೀವನದಲ್ಲಿ
ಪುರಾಣಪುರುಷರ ವೇಷ ಧರಿಸಿ ಸಭೆಗೆ ಬರಹೇಳಿ, ಅವರಿಗೆ ಆರತಿ ಬೆಳಗುವುದು ಯಾವ ಸಂಸ್ಕೃತಿಯ ದ್ಯೋತಕ? ಸಂವಿಧಾನ ರೀತ್ಯಾ ಪ್ರತಿಜ್ಞೆ ಸ್ವೀಕರಿಸಿ ಅಧಿಕಾರ ಹೊಂದಿದ ಒಬ್ಬ ವ್ಯಕ್ತಿಯು ಈ ರೀತಿಯಲ್ಲಿ ವರ್ತಿಸುವುದು ಎಷ್ಟು ಸಮಂಜಸ? ರಾಮನ ಕುರಿತಾದ ವ್ಯಕ್ತಿಗತವಾದ ನಂಬಿಕೆ ಇರುವುದು ಜನಸಾಮಾನ್ಯರಿಗೆ ಸಹಜ; ಆದರೆ ಅವನ ವೇಷಧರಿಸಿ ಬಂದ ವ್ಯಕ್ತಿಯನ್ನೇ ಪೂಜಿಸುವುದು ಪರಂಪರೆಗೆ, ನಂಬಿಕೆಗೆ, ಸಂವಿಧಾನ ಪ್ರಕಾರ ಹೊಂದಿದ ಅಧಿಕಾರಕ್ಕೆ ಅಪಚಾರವಲ್ಲವೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT