ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯುಗಪುರುಷ

Last Updated 22 ಜನವರಿ 2019, 17:44 IST
ಅಕ್ಷರ ಗಾತ್ರ

ಸಾಮಾನ್ಯವಾಗಿ ಗಣ್ಯವ್ಯಕ್ತಿಗಳು ದಿವಂಗತರಾದಾಗ ಮೇರು ವ್ಯಕ್ತಿ, ಯುಗಪುರುಷ ಎಂದೆಲ್ಲ ಬಣ್ಣಿಸಲಾಗುತ್ತದೆ. ಕೆಲವೊಮ್ಮೆ ಇದು ನಿಜವಿದ್ದರೂ, ಒಮ್ಮೊಮ್ಮೆ ಅತಿಶಯೋಕ್ತಿ ಕೂಡ ಆಗುತ್ತದೆ. ಮರಣ ಹೊಂದುವ ಮಹನೀಯರ ಒಳ್ಳೆಯ ಗುಣಗಳನ್ನಷ್ಟೇ ಪ್ರಸ್ತಾಪಿಸು
ತ್ತೇವೆ. ಯಾಕೆಂದರೆ, ಹಿಂದೂ ಧರ್ಮದಲ್ಲಿ ನಿಧನರಾದವರನ್ನು ದೇವರಿಗೆ ಹೋಲಿಸುತ್ತೇವೆ. ಶರಣ ಸಂಸ್ಕೃತಿಯು, ‘ಮರಣವೇ ಮಹಾನವಮಿ’ ಎಂದು ಹೇಳುತ್ತದೆ. ಪುರಾಣಗಳಲ್ಲಿ ದೇವರುಗಳ ಬಗ್ಗೆ, ಅವತಾರಗಳ ಬಗ್ಗೆ ಕೇಳಿರುತ್ತೇವೆ.

‘ನಡೆದಾಡುವ ದೇವ’ರೆಂದೇ ಕರೆಯಲಾಗುತ್ತಿದ್ದ ಸಿದ್ಧಗಂಗಾ ಸ್ವಾಮೀಜಿ ಇಂತಹ ಎಲ್ಲಾ ಬಣ್ಣನೆ ಮೀರಿ ನಿಂತವರು. ಹನ್ನೆರಡನೇ ಶತಮಾನದ ಬಸವೇಶ್ವರರ ನಂತರ, ತಮ್ಮ ಕಾಯಕ, ದಾಸೋಹದ ಮುಖಾಂತರ ತಾವೇ ದೇವರ ಸ್ವರೂಪವಾಗಿ ಮಕ್ಕಳಲ್ಲಿ, ಭಕ್ತರಲ್ಲಿ ದೇವರ ಅಂಶವನ್ನು ಧಾರೆ ಎರೆದ ಸ್ವಾಮೀಜಿ ಈ ಕಾಲಘಟ್ಟದಲ್ಲಿ ಅವತರಿಸಿ ಹೋದ ಯುಗಪುರುಷ.

ಡಾ. ಜಿ.ಡಿ.ರಾಘವನ್, ದಾವಣಗೆರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT