ಶುಕ್ರವಾರ, ಅಕ್ಟೋಬರ್ 18, 2019
20 °C

ಯುವ ದಸರಾ: ಸ್ಥಳೀಯರಿಗೆ ವೇದಿಕೆಯಾಗಬೇಕು

Published:
Updated:

ಮೈಸೂರು ದಸರಾ, ರಾಜ್ಯದ ಹೆಮ್ಮೆಯ ಉತ್ಸವವಾಗಿದ್ದು, ನಾಡಹಬ್ಬ ಎಂದು ಕರೆಸಿಕೊಳ್ಳುತ್ತದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಅದರಲ್ಲಿ ಕಾರ್ಪೊರೇಟ್ ಇವೆಂಟ್‌ಗಳಂತಹ ಹಲವು ಕಾರ್ಯಕ್ರಮಗಳು ಸೇರಿಕೊಂಡಿವೆ. ಅದರಲ್ಲಿ ‘ಯುವ ದಸರಾ’ ಪ್ರಮುಖವಾಗಿದೆ.

ವಿಪರ್ಯಾಸವೆಂದರೆ, ಈ ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂಪಾಯಿ ತೆತ್ತು ಬಾಲಿವುಡ್ ಗಾಯಕರನ್ನು ಕರೆಸಿ ಹಾಡಿಸಲಾಗುತ್ತದೆ. ಕರ್ನಾಟಕದ ಪ್ರತಿಭೆಗಳನ್ನು ಗುರುತಿಸಿ ದೇಶಕ್ಕೆ, ವಿಶ್ವಕ್ಕೆ ಪರಿಚಯಿಸಬೇಕಾದ ಮತ್ತು ನಾಡಿನ ಸಂಸ್ಕೃತಿಯನ್ನು ಯುವಜನರಿಗೆ ತಿಳಿಸಬಹುದಾದ ವೇದಿಕೆಯು ಹಿಂದಿ ಹಾಡುಗಳಿಗೆ ಮೀಸಲಾಗುತ್ತಿದೆ.

ಈ ಬಾರಿ ಯುವ ದಸರಾವನ್ನೇ ಗಮನಿಸಿದರೆ, ನಾಲ್ಕು ದಿನ ಪೂರ್ತಿ ಬಾಲಿವುಡ್ ಗಾಯಕರಿಗೆ ಮೀಸಲಾಗಿದ್ದು, ಒಂದೆರಡು ದಿನ ಮಾತ್ರ ಕನ್ನಡ ಕಾರ್ಯಕ್ರಮಗಳಿವೆ. ದಸರಾದಲ್ಲಿ ಸದುದ್ದೇಶದಿಂದ ಭಾರತದ ವಿವಿಧ ರಾಜ್ಯಗಳ ಪ್ರತಿಭೆಗಳನ್ನು ಕರೆಸುವುದಾದಲ್ಲಿ, ವಿವಿಧ ಭಾಷೆಗಳ ಹಾಡುಗಳಿಗೆ ಒಂದು ದಿನ ಅವಕಾಶ ಮಾಡಿಕೊಡಬಹುದು. ಉಳಿದಂತೆ ಸ್ಥಳೀಯ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವುದು ಉಚಿತ.

– ವಿಕಾಸ್ ಹೆಗಡೆ, ಬೆಂಗಳೂರು
 

Post Comments (+)