ಲಗ್ಗೆರೆಯಲ್ಲಿ ಹೊಸ ಬಸ್ ಡಿಪೋ ಶುರುವಾದ ನಂತರ ಬೇರೆ ಕಡೆಯಿಂದ ಹೋಗಿ ಬರುವ ಬಸ್ಸುಗಳು ನೇರವಾಗಿ ಡಿಪೋಗೆ ಹೋಗುತ್ತವೆಯೇ ಹೊರತು ಲಗ್ಗೆರೆ ಬಸ್ ನಿಲ್ದಾಣಕ್ಕೆ ಬರುವುದಿಲ್ಲ. ಕೆಲವೊಮ್ಮೆ ಗಂಟೆಗಟ್ಟಲೆ ಕಾಯಬೇಕಾಗುತ್ತದೆ. ಡಿಪೋದಲ್ಲಿ ಚಾಲಕ-ನಿರ್ವಾಹಕರು ವ್ಯರ್ಥ ಕಾಲ ಹರಣ ಮಾಡುತ್ತಾರೆ.

ನಂದಿನಿ ಲೇಔಟ್ ಮತ್ತು ವಿಧಾನಸೌಧ ಲೇಔಟ್ಗೆ ಕಪ್ಪು ಹಲಗೆಯ ಬಸ್ಗಳಿವೆ. ಆದರೆ ಅದರ ಹತ್ತಿರದಲ್ಲೇ ಇರುವ ಲಗ್ಗೆರೆಗೆ ಯಾಕೆ ಕೆಂಪು ಬೋರ್ಡ್ ಬಸ್ಗಳನ್ನು ಹಾಕಿದ್ದಾರೋ ತಿಳಿಯದು. ಲಗ್ಗೆರೆಗೂ ಕಪ್ಪು ಹಲಗೆಯ ಬಸ್ಸುಗಳನ್ನು ಒದಗಿಸಿದರೆ ಕಡಿಮೆ ಪ್ರಯಾಣಿಕರಿಗೆ ಪ್ರಯಾಣದರದಲ್ಲಿ ಪ್ರಯಾಣಿಸಲು ಅನುಕೂಲವಾಗುತ್ತಿತ್ತು.

ಬಿ.ಎಂ.ಟಿ.ಸಿ. ಅಧಿಕಾರಿಗಳಿಗೆ ಡಿಪೋ ಶುರುವಾದಾಗಿನಿಂದ ಬಸ್ಸಿನ ತೊಂದರೆ ಬಗ್ಗೆ ಮನವಿ ಪತ್ರಗಳನ್ನು ಬರೆದರೂ `ಸರಿಪಡಿಸುತ್ತೇವೆ' ಎಂಬ ಆಶ್ವಾಸನೆ ಪತ್ರ ಕಳುಹಿಸಿದರೇ ವಿನಾ ಸುಧಾರಣೆ ಕ್ರಮಗಳನ್ನು ತೆಗೆದುಕೊಳ್ಳಲಿಲ್ಲ. ಇನ್ನು ಮುಂದಾದರೂ ಬಿ.ಎಂ.ಟಿ.ಸಿ. ಅಧಿಕಾರಿಗಳು ನಮ್ಮ ತೊಂದರೆಗಳಿಗೆ ಪರಿಹಾರವನ್ನು ಮಾಡುತ್ತಾರೆಂದು ನಂಬಲೇ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.