ಶುಕ್ರವಾರ, ಮಾರ್ಚ್ 5, 2021
30 °C

ವಾಚಕರ ವಾಣಿ| ಪ್ರಶ್ನೆಪತ್ರಿಕೆ ಸೋರಿಕೆ: ಸೂಕ್ತ ತನಿಖೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಥಮ ದರ್ಜೆ ಸಹಾಯಕರ (ಎಫ್.ಡಿ.ಎ) ಹುದ್ದೆಗಳಿಗೆ ನಡೆಯಬೇಕಾಗಿದ್ದ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು, ಸಾಂವಿಧಾನಿಕ ಸಂಸ್ಥೆಯಾದ ಕರ್ನಾಟಕ ಲೋಕಸೇವಾ ಆಯೋಗದ (ಕೆಪಿಎಸ್‌ಸಿ) ವೈಫಲ್ಯಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಹಾಗೇ ಅದನ್ನು ಪತ್ತೆ ಹಚ್ಚಿದ ಸಿಸಿಬಿ ಪೊಲೀಸರ ಕಾರ್ಯಕ್ಷಮತೆಯು ಅತ್ಯಂತ ಶ್ಲಾಘನೀಯ. ಹಲವಾರು ಬಾರಿ ಈ ರೀತಿ ಅಕ್ರಮಗಳು ಜರುಗಿ ಸಾವಿರಾರು ಪ್ರತಿಭಾವಂತ ನಿರುದ್ಯೋಗಿಗಳಿಗೆ ಅನ್ಯಾಯವಾಗುತ್ತಿರುವುದು ಇಂದಿನ ಸಮಾಜದ ಮತ್ತು ಆಡಳಿತ ಸಂಸ್ಥೆಗಳ ಅಧಃಪತನವೇ ಸರಿ.

2015ರಲ್ಲಿ ನಡೆದ ಎಫ್.ಡಿ.ಎ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿದ್ದರ ವಿರುದ್ಧ ಪ್ರತಿಭಟನೆಗಳು ನಡೆದಿದ್ದವು. ಆದರೂ ಕೆ‌ಪಿಎಸ್‌ಸಿ ಮಾತ್ರ ಯಾವುದೇ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಎಂಬ ತನ್ನ ಹಳೇ ವಾದವನ್ನೇ ಮಂಡಿಸಿ ಮರುಪರೀಕ್ಷೆ ನಡೆಸಲಿಲ್ಲ. ಈಗಿನ ಪ್ರಶ್ನೆಪತ್ರಿಕೆಗೆ ಸೋರಿಕೆಯ ಬಗ್ಗೆ ಸೂಕ್ತ ತನಿಖೆ ನಡೆಯಬೇಕು. ಲೋಕಸೇವಾ ಆಯೋಗದ ಘನತೆಯನ್ನು ಕಾಪಾಡುವ ಮತ್ತು ಅದರ ಬಗ್ಗೆ ಸಾರ್ವಜನಿಕರಲ್ಲಿ ಭರವಸೆ ಮೂಡಿಸುವ ಸಲುವಾಗಿ ಈ ಕಾರ್ಯ ಅತೀ ಜರೂರಾಗಿ ಆಗಬೇಕಾಗಿದೆ.

- ಸುರೇಶ್ ಎಸ್., ಚಿಕ್ಕಾಟಿ, ಗುಂಡ್ಲುಪೇಟೆ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು