ಸೀರೆಯುಡುವ ಮ್ಯಾರಥಾನ್

ಮಂಗಳವಾರ, ಏಪ್ರಿಲ್ 23, 2019
31 °C

ಸೀರೆಯುಡುವ ಮ್ಯಾರಥಾನ್

Published:
Updated:
Prajavani

ನೂರಾರು ಮಹಿಳೆಯರು ಬಣ್ಣ ಬಣ್ಣದ ಸೀರೆಗಳನ್ನು ಬಗೆ ಬಗೆಯಾಗಿ ಉಟ್ಟು ಮೂರು ಕಿ.ಮೀಟರ್‌ ದೂರದವರೆಗೆ ಓಡಿ ಗಮನ ಸೆಳೆದರು. ಬದಲಾಗುತ್ತಿರುವ ಕಾಲಘಟ್ಟಕ್ಕೆ ತಕ್ಕಂತೆ ಜೀವನಶೈಲಿಯನ್ನು ಬದಲಿಸಿಕೊಳ್ಳುತ್ತಾ, ಎಂತಹುದೇ ಸ್ಥಿತಿಯಲ್ಲಿದ್ದರೂ, ಎಲ್ಲ ರೀತಿಯ ಪರಿಸ್ಥಿತಿಗಳಿಗೆ ಒಗ್ಗಿಕೊಳ್ಳುವ ಸಾಮರ್ಥ್ಯ ಮಹಿಳೆಯರಿಗೆ ಇದೆ ಎಂಬುದನ್ನು ನಿರೂಪಿಸಿದರು.

‘ಡೋಂಟ್‌ ಹೋಲ್ಡ್‌ ಬ್ಯಾಕ್‌’ (#Don’tHoldBack) ನಿನಾದದ ಮೂಲಕ ಪಿಂಕಥಾನ್‌ ಸಹಯೋಗದೊಂದಿಗೆ, ಮಹಿಳೆಯರ ವಸ್ತ್ರ ಮಾರಾಟ ಸಂಸ್ಥೆ ತನೈರಾ, ಸ್ವಾತಂತ್ರ್ಯ ಉದ್ಯಾನದಲ್ಲಿ ಶನಿವಾರ ಆಯೋಜಿಸಿದ್ದ ‘ದಿ ಸ್ಯಾರಿ ರನ್’ ಮ್ಯಾರಥಾನ್‌ಗೆ (ಸೀರೆಯುಟ್ಟು ಓಡುವ ಸ್ಪರ್ಧೆ) ಈ ವರ್ಷ 1000ಕ್ಕೂ ಹೆಚ್ಚು ಮಹಿಳೆಯರು ಸಾಕ್ಷಿಯಾದರು. ಈ ಬಾರಿ ಸುಮಾರು 500 ಮಹಿಳೆಯರು ಸ್ಪರ್ಧೆಯಲ್ಲಿ ಭಾಗವಹಿಸಿದ್ದು ವಿಶೇಷವಾಗಿತ್ತು. 

ಮ್ಯಾರಥಾನ್ ಆರಂಭಕ್ಕೂ ಮುನ್ನ ಜುಂಬಾ ನೃತ್ಯವನ್ನು ಅಭ್ಯಸಿಸುವ ಮೂಲಕ ಸ್ಪರ್ಧಿಗಳಲ್ಲಿ ಉತ್ಸಾಹ ಮೂಡಿಸಲಾಯಿತು. ಪಿಂಕಥಾನ್‌ನ ಪ್ರಚಾರ ರಾಯಭಾರಿ ಮತ್ತು ರೂಪದರ್ಶಿ ಮಿಲಿಂದ್ ಸೋಮನ್‌ ಮ್ಯಾರಥಾನ್‌ಗೆ ಚಾಲನೆ ನೀಡಿ, ಸ್ಪರ್ಧಿಗಳನ್ನು ಹುರುದುಂಬಿಸಿ ಫಿಟ್‌ನೆಸ್ ಕುರಿತು ಕಾಳಜಿ ಮೂಡಿಸಿದರು.

ಸೀರೆಯುಟ್ಟುಕೊಂಡೇ ಮೂರು ಕಿ.ಮೀ ಕ್ರಮಿಸಿದ 75 ವರ್ಷ ಸುನಿತಾ ಪ್ರಸನ್ನ ಮತ್ತು ಆಕ್ಸ್‌ಫ್ಯಾಮ್‌ ಮ್ಯಾರಥಾನ್‌ನಲ್ಲಿ ಸೀರೆಯುಟ್ಟುಕೊಂಡೇ 100 ಕಿ.ಮೀ ಅನ್ನು ನಡಿಗೆ ಮೂಲಕ ಕ್ರಮಿಸಿರುವ ಸ್ಮಿತಾ ಬಿಸ್ವಾಸ್‌ ಅವರನ್ನು ಈ ಮ್ಯಾರಥಾನ್‌ನಲ್ಲಿ ಸನ್ಮಾನಿಸಲಾಯಿತು.

ಇಂದ್ರಾಣಿ ಪರಿಣಿತ, ಶ್ರೀದೇವಿ ಶಿವರಾಮ್‌, ಗೀತಾ ಮೈಲವರಭಟ್ಲ, ಶ್ರೀಲಕ್ಷ್ಮಿ ಪೆನುಮರ್ತಿ ಮತ್ತು ಸ್ವಾತಿ ಸಕ್ಸೇನಾ ಅವರು ಮ್ಯಾರಥಾನ್‌ನಲ್ಲಿ ಗೆದ್ದರು.

ಸಂಸ್ಕೃತಿಯ ಪ್ರತಿಬಿಂಬ

ಸೀರೆ ಭಾರತದ ಸಂಸ್ಕೃತಿಯ ಒಂದು ಭಾಗ. ಮಹಿಳೆಯರು ಆರೋಗ್ಯವಾಗಿರಬೇಕೆಂದರೆ ಫಿಟ್‌ನೆಸ್‌ ಬಗ್ಗೆ ಕಾಳಜಿ ವಹಿಸುವುದು ಅಗತ್ಯ. ದೇಹದ ಸ್ವಾಸ್ಥ್ಯ ಕಾಪಾಡಿಕೊಳ್ಳಲು ದೇಹ ದಂಡಿಸಬೇಕು. ಕರಸತ್ತು ನಡೆಸಲು ದೇಹ ದಂಡಿಸಲು ಇಂತಹುದೇ ಉಡುಗೆ ತೊಟ್ಟುಕೊಂಡು ಬೆವರು ಹರಿಸಬೇಕು ಎಂಬ ನಿಯಮಗಳೇನೂ ಇಲ್ಲ. ಸೀರೆಯುಟ್ಟುಕೊಂಡೂ ಮಾಡಬಹುದು. ಹಿಂದಿನ ಕಾಲದ ಮಹಿಳೆಯರೆಲ್ಲಾ ಸೀರೆಯುಟ್ಟುಕೊಂಡೇ ಎಲ್ಲ ಕೆಲಸಗಳನ್ನೂ ಮಾಡುತ್ತಿರಲಿಲ್ಲವೇ? 

ಇಂದಿನ ಸ್ಪರ್ಧೆಯಲ್ಲಿ ಸೀರೆಯುಟ್ಟುಕೊಂಡು ಓಡಿದ ಎಲ್ಲ ಮಹಿಳೆಯರೂ ಇದನ್ನು ನಿರೂಪಿಸಿದ್ದಾರೆ. ಈ ಸ್ಪರ್ಧೆಯ ಮೂಲಕ ಫಿಟ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸುವುದಷ್ಟೇ ಅಲ್ಲ, ಭಾರತದ ಸಂಸ್ಕೃತಿಯ ಘನತೆಯನ್ನೂ ಸಾರಿದ್ದೇವೆ.

ಮಿಲಿಂದ್ ಸೋಮನ್‌

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !