ಹಣ್ಣಾಗದ ಸನ್ಮಾನದ ಹಣ್ಣು...!

7

ಹಣ್ಣಾಗದ ಸನ್ಮಾನದ ಹಣ್ಣು...!

Published:
Updated:

ಬೆಂಗಳೂರು: ‘ಸನ್ಮಾನದಲ್ಲಿ ಕೊಡುವ ಹಣ್ಣು ಯಾವತ್ತೂ ಹಣ್ಣೇ ಆಗುವುದಿಲ್ಲ. ಅದು ಜೈವಿಕವಾಗಿ ಹಾಗೆ ವಿನ್ಯಾಸಗೊಳಿಸಲ್ಪಟ್ಟಿರುತ್ತದೆ...!’

ಇದು ಸಾಹಿತಿ ಜಯಂತ ಕಾಯ್ಕಿಣಿ ಅವರು ಸನ್ಮಾನದ ಫಜೀತಿ ಪ್ರಸಂಗಗಳನ್ನು ಬಿಚ್ಚಿಟ್ಟ ಪರಿ. ನಗರದಲ್ಲಿ ಈಚೆಗೆ ನಡೆದ ಸಾಹಿತಿ ‘ಯಶವಂತ ಚಿತ್ತಾಲ ಅವರ ಬದುಕು ಬರಹ’ ಸಮಾರಂಭದಲ್ಲಿ ಭಾಷಣ ಮಾಡಿದ ಅವರು ಸನ್ಮಾನದ ಸಂದರ್ಭವನ್ನು ರಸವತ್ತಾಗಿ ಬಣ್ಣಿಸಿದರು.

‘ಸನ್ಮಾನವೆಂದರೆ ಹಾಗೆಯೇ. ಯಾವುದೋ ಒಂದು ಕೆಟ್ಟ ಶಾಲು, ಯಾವತ್ತಿದ್ದರೂ ಮಾಗದ ಹಣ್ಣು. ಅದರಲ್ಲಿರುವ ಚಿಕ್ಕು ಎಷ್ಟು ಗಟ್ಟಿಯಾಗಿರುತ್ತದೆ ಎಂದರೆ ಅದನ್ನು ಬಳಸಿ ಕ್ರಿಕೆಟ್‌ ಆಡಬಹುದು. ಸಾಧನೆ ಅಂದರೆ ಹೀಗೆಯೇ ಒಂದಿಷ್ಟು ಹಾರ, ತುರಾಯಿ, ಸನ್ಮಾನ ಪತ್ರ ಹಿಡಿದುಕೊಂಡು ಅಡ್ಡಾಡುತ್ತಾ ಗುರುತಿಸಿಕೊಳ್ಳುವುದೋ ಎಂಬಂತೆ ಆಗಿಬಿಟ್ಟಿದೆ...’ ಹೀಗೆ ಸನ್ಮಾನಿಸುವವರನ್ನೂ ಸನ್ಮಾನಿತರಾಗುವವರನ್ನೂ ತಮ್ಮದೇ ಶೈಲಿಯಲ್ಲಿ ನವಿರಾಗಿ ತರಾಟೆಗೆ ತೆಗೆದುಕೊಂಡರು.

ಸಭೆಯಲ್ಲಿದ್ದ ಬಹುತೇಕರು ಒಂದಲ್ಲ ಒಂದು ಸಂದರ್ಭದಲ್ಲಿ ಸನ್ಮಾನಿಸಿಕೊಂಡವರು ಅಥವಾ ಸನ್ಮಾನಿಸಿದವರೇ ಇದ್ದರು. ಒಂದು ಕ್ಷಣ ತಮ್ಮನ್ನು ತಾವೇ
ಪ್ರಶ್ನಿಸಿಕೊಂಡರು.

ಶರತ್‌ ಹೆಗ್ಡೆ

ಬರಹ ಇಷ್ಟವಾಯಿತೆ?

 • 4

  Happy
 • 4

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !