ಭವಿಷ್ಯ ನಿಜವಾಗ್ತೈತಿ... ಚನ್ನಮ್ಮ ಉರೀತಾಳ..!

7

ಭವಿಷ್ಯ ನಿಜವಾಗ್ತೈತಿ... ಚನ್ನಮ್ಮ ಉರೀತಾಳ..!

Published:
Updated:
ಸಾಂದರ್ಭಿಕ ಚಿತ್ರ

ವಿಜಯಪುರ: ‘ಸಮ್ಮಿಶ್ರ ಸರ್ಕಾರ ಪತನದ ಕುರಿತಂತೆ ನಾ ನುಡಿದಿದ್ದ ಭವಿಷ್ಯ ನಿಜವಾಗ್ತೈತಿ. ಕಡೇ ಶ್ರಾವಣದಾಗ ಬೆಳಗಾವಿಯ ಚನ್ನಮ್ಮ (ಶಾಸಕಿ ಲಕ್ಷ್ಮೀ ಹೆಬ್ಬಾಳಕರ) ಉರೀತಾಳ... ಮುಂದಿನದ್ದನ್ನು ನೀವೇ ನೋಡ್ತೀರಿ...!’

ಶಾಸಕ ಬಸನಗೌಡ ಪಾಟೀಲ ಯತ್ನಾಳ ಈಚೆಗೆ ಪತ್ರಕರ್ತರೊಂದಿಗೆ ಮಾತನಾಡುವಾಗ ‘ರಾಜ್ಯ ಸರ್ಕಾರದ ಪತನ’ ವಿಷಯವನ್ನು ಪ್ರಸ್ತಾಪಿಸಿದ್ದರು. ಆಗ ಪತ್ರಕರ್ತರೊಬ್ಬರು, ‘ನೀವು ಹೇಳಿದ್ದ ಶ್ರಾವಣ ಮಾಸ ಮುಗೀತು. ಇನ್ನೂ ಏನೂ ಆಗಿಲ್ವಲ್ಲ. ಇದೀಗ ಮತ್ತೆ ಸಂಪುಟ ವಿಸ್ತರಣೆ ಅಂತೀರಿ... ಏನಿದು’ ಎಂದು ಪ್ರಶ್ನಿಸುತ್ತಿದ್ದಂತೆ ಬಸನಗೌಡ ತಮ್ಮ ಎಂದಿನ ಶೈಲಿಯಲ್ಲೇ ಮೇಲಿನಂತೆ ಉತ್ತರಿಸಿದರು.

‘ಇಲ್ನೋಡ್ರೀ ಸರಾ... ಜ್ಯೋತಿಷದಾಗ ಈ ಘಳಿಗೆಯಿಂದ ಈ ಘಳಿಗೆಯ ತನಕ ಇಂತ ಕಾಲಮಾನ ಇರ್ತದ. ನಾನು ಹೇಳಿದಂಗೆ ಶ್ರಾವಣದೊಳಗ ಬೆಳಗಾವಿ ಜಿಲ್ಲಾ ಕಾಂಗ್ರೆಸ್‌ನಲ್ಲಿ ಭಿನ್ನಮತ ಸ್ಫೋಟಗೊಂಡೇತಿ. ಇದು ಸರ್ಕಾರ ಪತನದ ಸೂಚಕ. ಘಳಿಗಿ ಮುಗಿಯೋದ್ರೊಳಗ ಸರ್ಕಾರ ಬೀಳೋದು ಖಾತ್ರಿ... ನೋಡ್ತಿರ್‍ರೀ...!’ ಎಂದು ಹಾಸ್ಯ ಚಟಾಕಿ ಸಿಡಿಸಿದರು.

ಯತ್ನಾಳ ಅವರ ಸುತ್ತಲೂ ನೆರೆದಿದ್ದ ಕೆಲವರು ‘ಹೆಂಗ್ರೀ ನಮ್ಹುಲಿ. ಸುಮ್‌ ಸುಮ್ನೇ ಯಾರ್‍ಯಾರಿಗೋ ಹುಲಿ ಅಂತೀರಿ. ಜಟ್ಟಿ ಬಿದ್ರೂ ಮೀಸೆ ಮಣ್ಣಾಗದ ವರಸೆ ನಮ್‌ ಗೌಡ್ರದ್ದು’ ಎನ್ನುತ್ತಿದ್ದಂತೆ ಎಲ್ಲೆಲ್ಲೂ ನಗೆಯ ಅಲೆ.

ಡಿ.ಬಿ. ನಾಗರಾಜ

ಬರಹ ಇಷ್ಟವಾಯಿತೆ?

 • 2

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !