ಕಿಸೆಯಿಂದೇನೂ ಕೊಡಲ್ಲಾ; ಬಡವರಿಗೆ ಕೊಡ್ರೀ..!

7

ಕಿಸೆಯಿಂದೇನೂ ಕೊಡಲ್ಲಾ; ಬಡವರಿಗೆ ಕೊಡ್ರೀ..!

Published:
Updated:

ವಿಜಯಪುರ: ‘ನೋಡ್ರಪ್ಪಾ...! ಈ ಹಿಂದೆ ಮಳೆಯಿಂದ ಮನೆ ಬಿದ್ದು ಹೋಗಿದ್ರೇ ₹ 500, ₹ 1000 ಪರಿಹಾರ ಕೊಡ್ತಿದ್ರಿ. ನಾನೀಗ ಹೊಸ ಮಾರ್ಗಸೂಚಿ ಜಾರಿಗೊಳಿಸಿರುವೆ. ಇದರ ಪ್ರಕಾರ ₹ 1 ಲಕ್ಷದವರೆಗೂ ಪರಿಹಾರ ಕೊಡಬಹುದು. ನೀವ್ಯಾರೂ ನಿಮ್‌ ಕಿಸೆಯಿಂದ ಕೊಡಲ್ಲಾ. ಸರ್ಕಾರದ ನೆರವನ್ನು ಮನೆ ಕಳೆದುಕೊಂಡ ಸಂತ್ರಸ್ತರಿಗೆ ಇನ್ನಾದ್ರೂ ಧಾರಾಳವಾಗಿ ಕೊಡಲು ಮುಂದಾಗಿ...!’

ಕಂದಾಯ ಸಚಿವ ಆರ್‌.ವಿ. ದೇಶಪಾಂಡೆ ಅಧಿಕಾರಿಗಳಿಗೆ ನೀಡಿದ ಖಡಕ್‌ ಸೂಚನೆಯಿದು.

ವಿಜಯಪುರ ಜಿಲ್ಲೆಯಲ್ಲಿ ಪ್ರಕೃತಿ ವಿಕೋಪದಿಂದ ಸಂಭವಿಸಿರುವ ಹಾನಿ ಹಾಗೂ ಕೈಗೊಂಡ ಪರಿಹಾರ ಕ್ರಮಗಳ ಕುರಿತಂತೆ ಈಚೆಗೆ ನಡೆಸಿದ ಸಭೆಯಲ್ಲಿ ದೇಶಪಾಂಡೆ ಅವರು ತಹಶೀಲ್ದಾರರುಗಳಿಂದ ಮಾಹಿತಿ ಪಡೆಯುತ್ತಿದ್ದರು. ಈ ಸಂದರ್ಭದಲ್ಲಿ ಬಸವನಬಾಗೇವಾಡಿ ತಹಶೀಲ್ದಾರ್‌ ಎಂ.ಎನ್. ಚೋರಗಸ್ತಿ ಅವರು ಸಂತ್ರಸ್ತರಿಗೆ ಕಡಿಮೆ ಮೊತ್ತ ನೀಡಿದ್ದನ್ನು ಉಲ್ಲೇಖಿಸಿದ್ದಕ್ಕೆ, ಸಚಿವರು ಈ ಮೇಲಿನಂತೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಇನ್ಮುಂದೆ ಎಲ್ಲರಿಗೂ ಹೊಸ ಮಾರ್ಗಸೂಚಿಯನುಸಾರವೇ ಪರಿಹಾರ ಮಂಜೂರು ಮಾಡಬೇಕು. ಇದು ನನ್ನ ಆದೇಶ. ಈ ಹಿಂದೆ ಹಾನಿಗೀಡಾದ ಮನೆಗಳ ಮಾಲೀಕರಿಗೂ ಹೆಚ್ಚಿನ ಪರಿಹಾರ ನೀಡ್ರಿ. ಈ ಆದೇಶ 2018ರ ಏಪ್ರಿಲ್‌ನಿಂದಲೇ ಜಾರಿಯಲ್ಲಿದೆ. ಏನ್ರೀ ಡಿಸಿ... ಎಲ್ಲವನ್ನೂ ನಾನ್‌ ಬಾಯ್ಬಿಟ್ಟು ಹೇಳಲು ಆಗಲ್ಲ. ನಿಮ್‌ ರೊಕ್ಕ ಏನ್‌ ಕೊಡಲ್ಲ. ಕಾಮನ್‌ಸೆನ್ಸ್ ಬಳಸಿದರೆ ಸಾಕು. ಸಂತ್ರಸ್ತನಿಗೆ ಸಹಾಯವಾಗುತ್ತೆ’ ಎಂದು ಕಂದಾಯ ಸಚಿವರು ಹುಕುಂ ನೀಡುತ್ತಿದ್ದಂತೆ ಅಧಿಕಾರಿ ಸಮೂಹ ತಲೆಯಲ್ಲಾಡಿಸುವ ಮೂಲಕ ಮೌನ ಸಮ್ಮತಿ ನೀಡಿತು.

 

ಬರಹ ಇಷ್ಟವಾಯಿತೆ?

 • 6

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !