ಮಾತನಾಡಲಾಗದ ‘ಸ್ಪೀಕರ್‌’!

7

ಮಾತನಾಡಲಾಗದ ‘ಸ್ಪೀಕರ್‌’!

Published:
Updated:

ಬೆಂಗಳೂರು: ‘ನಾನು ಮಾತನಾಡಲಾಗದ ಸ್ಥಾನದಲ್ಲಿದ್ದೇನೆ. ಒಂದು ಮಾತು ಹೆಚ್ಚು ಕಮ್ಮಿಯಾದರೂ ನಾಳೆ ವಿವಾದವಾಗುವುದು ಖಚಿತ...’ ಹೀಗೆಂದು ಅಸಹಾಯಕತೆ ವ್ಯಕ್ತಪಡಿಸಿದವರು ವಿಧಾನಸಭಾ ಅಧ್ಯಕ್ಷ ಕೆ.ಆರ್‌. ರಮೇಶ್‌ಕುಮಾರ್‌.

ಮಾತುಗಾರರೇ ‘ಮಾತು– ಮೌನ’ಗಳ ನಡುವೆ ಒದ್ದಾಡಿದ ಪ್ರಸಂಗ ನಡೆದದ್ದು ಮಾಜಿ ಮುಖ್ಯಮಂತ್ರಿ ದಿವಂಗತ ಎನ್‌. ಧರ್ಮಸಿಂಗ್‌ ಅವರ ಪುಣ್ಯಸ್ಮರಣೆಯ ಕಾರ್ಯಕ್ರಮದಲ್ಲಿ.

ಕಾರ್ಯಕ್ರಮದಲ್ಲಿ ಅವರದ್ದೇ ಪ್ರಧಾನ ಭಾಷಣ. ಆದರೆ, ‘ನಾನು ಸದ್ಯಕ್ಕೆ ಯಾವುದೇ ಸಾರ್ವಜನಿಕ ಸಮಾರಂಭಕ್ಕೆ ಹೋಗಿ ಮಾತನಾಡುವುದನ್ನು ನಿಲ್ಲಿಸಿದ್ದೇನೆ. ಅಂಥ ಸ್ಥಾನ ನನ್ನದು. ಒಂದು ಮಾತು ಹೆಚ್ಚು– ಕಡಿಮೆ ಆದರೆ ಸಾಕು ಯಾರಿಗೋ ನೋವಾಗುವ ಅಥವಾ ಯಾರದೋ ಪರ ವಾಲಿದಂತೆ ಭಾವಿಸುವ ಸಾಧ್ಯತೆ ಹೆಚ್ಚು. ಆದರೆ, ಇಲ್ಲಿ ಮಾತನಾಡುವುದು ಅನಿವಾರ್ಯ’ ಎಂದು ಅಸಹಾಯಕತೆ ತೋಡಿಕೊಂಡರು. ಮಾತಿನುದ್ದಕ್ಕೂ ಪ್ರತಿ ಪದವನ್ನೂ ಅವರು ಎಚ್ಚರಿಕೆಯಿಂದ ಬಳಸಿದರು.

‘ಧರ್ಮಸಿಂಗ್‌ ಅವರಿಗೆ ‘ಅಜಾತ ಶತ್ರು’ ಎಂಬ ಬಿರುದು ಕೊಟ್ಟಿದ್ದಾರೆ. ಮಾಧ್ಯಮದವರು ಬಿರುದು ಕೊಡುವಲ್ಲಿ ಧಾರಾಳಿಗಳು. ಆದರೆ, ಸ್ವಲ್ಪ ಎಡವಟ್ಟು ಆದರೂ ನಮ್ಮನ್ನು ಪೀಸ್‌ ಪೀಸ್‌ ಮಾಡಿಬಿಡುತ್ತಾರೆ. ಅದಕ್ಕೆಲ್ಲಾ ಸ್ಪಷ್ಟನೆ ಕೊಟ್ಟು ಚೇತರಿಸಿಕೊಳ್ಳುವಷ್ಟರಲ್ಲಿ ಎಲ್ಲ ಅಧ್ವಾನಗಳು ಆಗಿಬಿಟ್ಟಿರುತ್ತವೆ’ ಎಂದು ಸಾರ್ವಜನಿಕ ಬದುಕಿನ ಸಂಕಟಗಳನ್ನು ತೆರೆದಿಟ್ಟರು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !