ನಿವೃತ್ತಿ ವಯಸ್ಸು ಹೆಚ್ಚಿಸಿದವ್ರು ನಾವೇ...

7

ನಿವೃತ್ತಿ ವಯಸ್ಸು ಹೆಚ್ಚಿಸಿದವ್ರು ನಾವೇ...

Published:
Updated:

ಶಿರಸಿ: ‘ನಿಮ್ಮನ್ನೆಲ್ಲ ನೋಡಿದ್ರೆ ನಿವೃತ್ತಿಗೆ ಬಂದವರಂತೆ ಕಾಣೋದಿಲ್ಲ. ಇನ್ನೂ ಕೆಲಸ ಮಾಡುವ ಹುಮ್ಮಸ್ಸಿದ್ದಂತೆ ಕಾಣಸ್ತೀರಿ. ನೋಡಿ, ನಿಮ್ಮ ನಿವೃತ್ತಿ ವಯಸ್ಸನ್ನು ಏರಿಸಿದವರು ನಾವೇ. ಬಿಜೆಪಿ ಸರ್ಕಾರ ಇದ್ದಾಗ ನಿವೃತ್ತಿ ವಯಸ್ಸನ್ನು 60ಕ್ಕೆ ಏರಿಸಿದ್ದೇವೆ. ಇಲ್ಲದಿದ್ರೆ ನೀವು ಇನ್ನೂ ಎರಡು ವರ್ಷ ಮೊದಲೇ ರಿಟಾಯರ್ ಆಗ್ತಿದ್ರಿ...’ ಹೀಗೆ ಮಾತನಾಡಿ ಶಿಕ್ಷಕರಲ್ಲಿ ಹುಮ್ಮಸ್ಸು ತುಂಬಲು ಪ್ರಯತ್ನಿಸಿದರು ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ.

ಶಿರಸಿಯಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಸಂದರ್ಭ ಅದು.‘ನಿಮ್ಮಲ್ಲಿ ಪ್ರಶಸ್ತಿಗೆ ಅರ್ಹರಾದವರು ಅನೇಕರಿದ್ದೀರಿ. ಆದರೆ ಏನು ಮಾಡೋದು, ಮಂತ್ರಿಗಳು, ಶಾಸಕರು, ಇನ್ನೂ ಯಾರ್‍ಯಾರಿಂದಲೋ ಆಯ್ಕೆ ಸಮಿತಿಯವರಿಗೆ ಫೋನ್ ಬರುತ್ತೆ. ಅವರ ಕಷ್ಟ ನಿಮಗೇನು ಗೊತ್ತು’ ಎಂದು ಕಾಗೇರಿ ಅವರು ಟೀಕಾಸ್ತ್ರ ಎಸೆದಾಗ ಕಿಕ್ಕಿರಿದಿದ್ದ ಸಭೆಯಲ್ಲಿ ನಗೆಯ ಅಲೆ ಎದ್ದಿತು. ಸಭೆಯಲ್ಲೇ ಇದ್ದ ಅಧಿಕಾರಿಗಳು ಇರುಸುಮುರುಸುಗೊಂಡಿದ್ದು ಯಾರ ಗಮನಕ್ಕೂ ಬರಲಿಲ್ಲ!

ಸಂಧ್ಯಾ ಹೆಗಡೆ

ಬರಹ ಇಷ್ಟವಾಯಿತೆ?

 • 5

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !