‘ಭಾರವನ್ನೆಲ್ಲಾ ಪೊಲೀಸರೇ ಹೊರಲು ಸಾಧ್ಯವೇ?’

7

‘ಭಾರವನ್ನೆಲ್ಲಾ ಪೊಲೀಸರೇ ಹೊರಲು ಸಾಧ್ಯವೇ?’

Published:
Updated:

ವಿಜಯಪುರ: ‘ಕೆಟ್ಟವರು ನಿಮ್ಮಲ್ಲಿ ಇಲ್ವಾ..? ಎಲ್ಲಾ ಕ್ಷೇತ್ರಗಳಲ್ಲೂ ಒಳ್ಳೆಯವರು– ಕೆಟ್ಟವರು ಇದ್ದಾರೆ. ಅದೇ ರೀತಿ ಪೊಲೀಸರು ಸಹ. ಅವರೇನೂ ಮೇಲಿನಿಂದ ಉದುರಿದವರಲ್ಲ. ಮನುಷ್ಯಸಹಜ ದೌರ್ಬಲ್ಯಗಳನ್ನು ಹೊಂದಿದವರೇ..!’

ಸರಗಳ್ಳತನ ಪ್ರಕರಣದ ಮಾಹಿತಿ ನೀಡಲು ವಿಜಯಪುರದಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಉತ್ತರವಲಯ ಐಜಿಪಿ ಅಲೋಕ್‌ಕುಮಾರ್‌ ಅವರು, ಭೀಮಾ ತೀರದಲ್ಲಿ ಪೊಲೀಸರು ನಡೆಸಿದ್ದ ಎನ್‌ಕೌಂಟರ್‌ ಕುರಿತಂತೆ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಮರು ಪ್ರಶ್ನೆಯ ಮೂಲಕವೇ ಉತ್ತರಿಸಿದ ಪರಿಯಿದು.

‘ಭೀಮಾ ತೀರದ ರೌಡಿ ಧರ್ಮರಾಜ ಚಡಚಣನನ್ನು ಎನ್‌ಕೌಂಟರ್‌ ಮಾಡಲು ಪೊಲೀಸರೇ ಸುಪಾರಿ ಪಡೆದಿದ್ದಾರೆ’ ಎಂಬುದು ಜನರಲ್ಲಿ ಆತಂಕ ಮೂಡಿಸಿದೆಯಲ್ಲಾ’ ಎಂದು ಐಜಿಪಿಗೆ ಪತ್ರಕರ್ತರು ಇನ್ನೊಂದು ಪ್ರಶ್ನೆಯನ್ನು ಎಸೆದರು. ‘ಈ ವಿಷಯದಲ್ಲಿ ನಮಗೂ ನೋವಿದೆ’ ಎಂದಷ್ಟೇ ಹೇಳಿ, ಆ ವಿಷಯವನ್ನೇ ಮೊಟಕುಗೊಳಿಸಿದರು.

ಮರಳು ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದಂತೆ ಮತ್ತೊಂದು ಪ್ರಶ್ನೆ ಕೇಳುತ್ತಿದ್ದಂತೆ, ಕೊಂಚ ಗರಂ ಆದ ಐಜಿಪಿ, ‘ಜಗತ್ತಿನ ಭಾರವನ್ನೆಲ್ಲಾ ಪೊಲೀಸರೇ ಹೊರಲು ಸಾಧ್ಯವೇ’ ಎಂದರು. ಈ ಮಾತಿನಿಂದ ಪತ್ರಿಕಾಗೋಷ್ಠಿಯಲ್ಲಿ ನಗೆಬುಗ್ಗೆ ಚುಮ್ಮಿತು.

ಡಿ.ಬಿ. ನಾಗರಾಜ

ಬರಹ ಇಷ್ಟವಾಯಿತೆ?

 • 4

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !